ಕಲಬುರ್ಗಿಯಲ್ಲಿ ಮುಂದುವರಿದ ವರುಣನ ಅಟ್ಟಹಾಸ; ನದಿಯಲ್ಲಿ ಕೊಚ್ಚಿಹೋದ ಮೀನುಗಾರ

ಕಲಬುರ್ಗಿ ನಗರದ ಪ್ರಶಾಂತ್ ನಗರ ಮತ್ತು ಕೆಲವಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಕಲಬುರ್ಗಿ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲಬುರ್ಗಿ ಹೊರವಲಯದ ಕೆಸರಟಗಿ ಬಳಿಯ ಆಶ್ರಯ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿದೆ.

news18-kannada
Updated:September 27, 2020, 7:05 AM IST
ಕಲಬುರ್ಗಿಯಲ್ಲಿ ಮುಂದುವರಿದ ವರುಣನ ಅಟ್ಟಹಾಸ; ನದಿಯಲ್ಲಿ ಕೊಚ್ಚಿಹೋದ ಮೀನುಗಾರ
ಉಕ್ಕಿ ಹರಿಯುತ್ತಿರುವ ಹಳ್ಳ (ಸಾಂದರ್ಭಿಕ ಚಿತ್ರ).
  • Share this:
ಕಲಬುರ್ಗಿ - ಎರಡು ದಿನಗಳ ಕಾಲ ವಿರಾಮ ನೀಡಿದ್ದ ಮಳೆರಾಯ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ತನ್ನ ರುದ್ರ ಪ್ರತಾಪ ತೋರಿದ್ದಾನೆ. ಕಳೆದ ತಡರಾತ್ರಿ ಆರಂಭಗೊಂಡ ಮಳೆ ಬೆಳಿಗ್ಗೆಯವೆರಗೂ ಮುಂದುವರೆದಿತ್ತು. ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇಡಂ ತಾಲೂಕಿನಲ್ಲಿ ಕಾಗಿಣಾ ನದಿಯಲ್ಲಿ ಮೀನುಗಾರನೋರ್ವ ಕೊಚ್ಚಿ ಹೋಗಿದ್ದಾನೆ. ಮೀನುಗಾರನೋರ್ವ ನದಿಯಲ್ಲಿ ಕೊಚ್ಚಿ ಹೋಗಿರೋ ಘಟನೆ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಕುಕ್ಕುಂದಾ ಗ್ರಾಮದ ಬಳಿ ನಡೆದಿದೆ. ಕಾಗಿಣಾ ನದಿಯಲ್ಲಿ ಮೀನುಗಾರ ಕೊಚ್ಚಿಹೋಗಿದ್ದಾನೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಇದುವರೆಗೂ ಮೀನುಗಾರನ ಪತ್ತೆಯಾಗಿಲ್ಲ. ಮೀನು ಹಿಡಿಯಲು ಹೋದಾಗ, ನದಿ ನೀರಿನಲ್ಲಿ ಮೀನುಗಾರ ಕೊಚ್ಚಿ ಹೋಗಿದ್ದಾನೆ. ಸೇತುವೆ ಮೇಲೆ ನಿಂತ ಜನ ನೋಡ ನೋಡುತ್ತಿರುವಾಗಲೇ ಮೀನುಗಾರ ನೀರಿನ ಸೆಳೆತದಲ್ಲಿ ಕೊಚ್ಚಿ ಹೋಗಿದ್ದಾನೆ. ನದಿಯಲ್ಲಿ ಕೊಚ್ಚಿಹೋದ ಮೀನುಗಾರನನ್ನು ಕುಕ್ಕುಂದಾ ಗ್ರಾಮದ ಸಂಜೀವ್ ಕುಮಾರ್ ಎಂದು ಗುರುತಿಸಲಾಗಿದೆ.

ಮೀನುಗಾರನಿಗಾಗಿ ತಕ್ಷಣವೇ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಎರಡು ದಿನಗಳಿಂದಲೂ ಹುಡುಕಾಟ ನಡೆಸಲಾಗಿದೆ. ಆದರೆ ಕಳೆದ ರಾತ್ರಿಯೂ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾಗಿಣಾ ನದಿಯಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ನದಿ ಉಕ್ಕಿ ಹರೀತಿರೋದ್ರಿಂದ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎಫ್ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.

ಮನೆಗಳಿಗೆ ನುಗ್ಗಿದ ನೀರು:

ಕಲಬುರ್ಗಿ ನಗರದ ಪ್ರಶಾಂತ್ ನಗರ ಮತ್ತು ಕೆಲವಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಕಲಬುರ್ಗಿ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲಬುರ್ಗಿ ಹೊರವಲಯದ ಕೆಸರಟಗಿ ಬಳಿಯ ಆಶ್ರಯ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿದೆ.

ಮನೆಯಲ್ಲಿನ ದಿನಸಿ, ಧವಸ-ಧಾನ್ಯ, ಅಗತ್ಯ ವಸ್ತುಗಳು ನೀರು ಪಾಲಾಗಿವೆ. ಕೂಲಿ-ನಾಲಿ ಮಾಡಿ ಬದುಕು ಸಾಗಿಸುತ್ತಿರುವ ಬಡ ಕುಟುಂಬಗಳು. ದಿನ ದುಡಿದು ಜೀವನ ನಡೆಸುವ ಕುಟುಂಬಗಳಿಗ ಸಂಕಷ್ಟಕ್ಕೆ ಗುರಿಯಾಗಿವೆ. ನೀರು ಹೊರಹಾಕಲು ಹೈರಾಣಾದ ನಿವಾಸಿಗಳು. ಜಾವೀದ್ ಅನ್ನೋರ ಕಿರಾಣಿ ಸಾಮಾನುಗಳು ನೀರು ಪಾಲಾಗಿವೆ.

ಸಾವಿರಾರು ಮೌಲ್ಯದ ಕಿರಾಣಿ ವಸ್ತುಗಳು ಹಾಳಾಗಿ ಸಂಕಷ್ಟಕ್ಕೆ ಸಿಲುಕಿರುವ ಜಾವೀದ್.
ಉಕ್ಕಿ ಹರೀತಿರೋ ನದಿಗಳು...ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ನದಿ, ಹಳ್ಳಕೊಳ್ಳಗಳು ಉಕ್ಕಿ ಹರೀತಿವೆ. ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು, ಮಳಖೇಡ ಬಳಿಯ ಕಾಗಿಣಾ ಸೇತುವೆ ಮೇಲೆ ನೀರು ಹರಿಯುತ್ತಿವೆ. ಕಲಬುರ್ಗಿ ತಾಲೂಕಿನ ಉದನೂರು, ಸೀತನೂರು, ಪಾಣೆಗಾಂವ ಸೇತುವೆಗಳ ಮೇಲೆ ನೀರು ಹರೀತಿವೆ. ಕಲಬುರ್ಗಿ - ಉದನೂರು, ಕಲಬುರ್ಗಿ - ಪಾಣೆಗಾಂವ ರಸ್ತೆ ಸಂಪರ್ಕ ಕಡಿತಗೊಂಡಿದೆ.ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ಹಾಕಿ; ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ

ಅಕ್ಕ ಪಕ್ಕದ ಹೊಲಗಳಿಗೂ ನುಗ್ಗಿದ ನೀರು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ. ಹೆಸರು, ಉದ್ದು, ಮೆಕ್ಕೆಜೋಳ, ಹತ್ತಿ ಮತ್ತಿತರ ಬೆಳೆಗಳು ಜಲಾವೃತಗೊಂಡಿದೆ. ಮಳೆ ಅಬ್ಬರಕ್ಕೆ ಕಂಗಾಲಾದ ಜನತೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆಂದೂ ಮಳೆ ಬಂದಿಲ್ಲ. ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಕೊಚ್ಚಿ ಹೋದ ರಸ್ತೆ:

ಮಳೆಯಿಂದಾಗಿ ಹಳ್ಳದ ರಭಸ ಹೆಚ್ಚಾಗಿದ್ದು, ಜೇವರ್ಗಿ ಪಟ್ಟಣದ ಬಳಿಯ ಪಿ.ಡಬ್ಲ್ಯುಡಿ ಕ್ವಾರ್ಟರ್ಸ್ ಬಳಿಯ ರಸ್ತೆ ಕೊಚ್ಚಿ ಹೋಗಿದೆ. ಮೊನ್ನೆಯಷ್ಟೇ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಅಧಿಕಾರಿಗಳು ದುರಸ್ತಿ ಮಾಡಿದ್ದರು. ಆದರೆ ರಾತ್ರಿ ಸುರಿದ ಬಾರಿಗೆ ಮಳೆಗೆ ಮತ್ತೆ ಕೊಚ್ಚಿ ಹೋದ ಹಳ್ಳದ ರಸ್ತೆ. ಪಿಡಬ್ಲ್ಯುಡಿ ಕ್ವಾರ್ಟರ್ಸ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳ ವಿರುದ್ಧ ಕಾಲೋನಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಲವೆಡೆಯೂ ವರುಣನ ಆರ್ಭಟಕ್ಕೆ ಜನಜೀವನ ತತ್ತರಗೊಂಡಿದೆ.
Published by: MAshok Kumar
First published: September 27, 2020, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading