ಸಿಎಂ ಖುದ್ದು ಭೇಟಿಯಾಗಿ ನೀಡಿದ ಭರವಸೆಗಳು ಇನ್ನೂ ಮರೀಚಿಕೆ ; ಹೆಗಲತ್ತಿ ಗ್ರಾಮದ ರೈತರ ಗೋಳು ಕೇಳೋರಿಲ್ಲ

ಕಳೆದ ವರ್ಷ ಖುದ್ದು ಸಿಎಂ ಯಡಿಯೂರಪ್ಪ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಂತ್ರಸ್ಥರಿಗೆ ಸಾಂತ್ವನ ಹೇಳಿದ್ದರು. ಅಲ್ಲಿ ಆಗಿದ್ದ ಹಾನಿ ನೋಡಿ, ಈ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಪರಿಹಾರ ಸಿಕ್ಕಿಲ್ಲ

news18-kannada
Updated:August 9, 2020, 5:16 PM IST
ಸಿಎಂ ಖುದ್ದು ಭೇಟಿಯಾಗಿ ನೀಡಿದ ಭರವಸೆಗಳು ಇನ್ನೂ ಮರೀಚಿಕೆ ; ಹೆಗಲತ್ತಿ ಗ್ರಾಮದ ರೈತರ ಗೋಳು ಕೇಳೋರಿಲ್ಲ
ಹೆಗಲತ್ತಿ ಗ್ರಾಮ
  • Share this:
ಶಿವಮೊಗ್ಗ(ಆಗಸ್ಟ್​.09): 60 ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕು ಕಳೆದ ವರ್ಷ ಸುರಿದ ಮಳೆಗೆ ಕೊಚ್ಚಿ ಹೋಗಿತ್ತು. ತೋಟ, ಗದ್ದೆ, ಹೊಲಗಳು ಪ್ರವಾಹದ ಹೊಡೆತಕ್ಕೆ ನಾಶವಾಗಿತ್ತು. ನಂಬಿದ ದೇವರಗುಡ್ಡವೇ ಕುಸಿದು ಬಿದ್ದು, ಮುಂದಿನ ಜೀವನದ ದಿಕ್ಕಿ ಕಾಣದಂತಾಗಿತ್ತು.  ಖುದ್ದು ಸಿಎಂ ಬಂದು ಪರಿಶೀಲನೆ ನಡೆಸಿಸಿದ್ದರೂ, ಇನ್ನೂ ಅವರಿಗೆ ಸಿಕ್ಕಿಲ್ಲ ಪರಿಹಾರ. ಪ್ರತಿ ರೈತನಿಗೆ  15 ಸಾವಿರ ರೂಪಾಯಿ ಸಿಕ್ಕಿದ್ದು, ಬಿಟ್ಟರೆ, ತೋಟ, ಗದ್ದೆಗಳ ಮರು ನಿರ್ಮಾಣಕ್ಕೆ ನಯಾ ಪೈಸೆ ಸರ್ಕಾರದಿಂದ ಬಂದಿಲ್ಲ. ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಈಗಲೂ  ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಇತಿಹಾಸದಲ್ಲೇ ಕೇಳಿ ಕಂಡರಿಯದ ಮಳೆ ಕಳೆದ ವರ್ಷ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಆಗಿತ್ತು. ಅದರಲ್ಲೂ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜಿಲ್ಲೆಯಲ್ಲಿ ನೂರಾರು ಕುಟುಂಬಗಳ ಬದುಕನ್ನೇ ನೆಲಸಮ ಮಾಡಿತ್ತು. ತೋಟ, ಗದ್ದೆ, ಹೊಲಗಳು ಪ್ರವಾಹಕ್ಕೆ ಸಿಲುಕಿ ಸರ್ವನಾಶವಾಗಿದ್ದವು. ಕೃಷಿಯನ್ನೇ ನಂಬಿ ಬದುಕಿದ್ದ, ಕುಟುಂಬಗಳು ಅಕ್ಷರ ಸಹ ಬೀದಿಪಾಲಾಗಿದ್ದವು. 20-30 ವರ್ಷಗಳಿಂದ ಸಾಕಿ ಸಲುವಿದ್ದ, ಮಕ್ಕಳಂತೆ ಆರೈಕೆ ಮಾಡಿದ್ದ ಅಡಿಕೆ, ತೆಂಗಿನ ಮರಗಳು ಪ್ರವಾಹದ ನೀರಿಗೆ ಕೊಚ್ಚಿ ಹೋಗಿದ್ದವು. ಅವುಗಳನ್ನು ನೋಡಿ ರೈತರು ಇನ್ನು ಕಣ್ಣೀರು ಹಾಕುತ್ತಿದ್ದಾರೆ.

ಕಳೆದ ವರ್ಷ ಆಗಸ್ಟ್ 8 ನೇ ತಾರೀಕಿನವರೆಗೆ ಅಡಿಕೆ, ತೆಂಗು, ಬಾಳೆ, ಸಿಲ್ವರ್ ಮರಗಳು, ಭತ್ತದ  ಗದ್ದೆಗಳು ಇದ್ದವು. ಹಚ್ಚ ಹಸಿರಿನಿಂದ ಕೂಡಿದ್ದ ಈ ತೋಟಗಳು ಅನೇಕ ಕುಟುಂಬಗಳಿಗೆ ಜೀವನಾಧಾರವಾಗಿದ್ದವು. ಸುಮಾರು 70 ರಿಂದ 80 ಎಕರೆ ಪ್ರದೇಶದಲ್ಲಿ 10 ಕ್ಕೂ ಹೆಚ್ಚು ಕುಟುಂಬಗಳು ಕೃಷಿ ಮಾಡಿಕೊಂಡು 80 ವರ್ಷಗಳಿಂದ ಇಲ್ಲೇ ನೆಲೆಸಿದ್ದವು.

ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದ ಇವರಿಗೆ ಕಳೆದ ವರ್ಷದ ಆಗಸ್ಟ್ 9 ರ ರಾತ್ರಿ ನಿಜಕ್ಕೂ ಕರಾಳ ರಾತ್ರಿಯಾಗಿ ಪರಿವರ್ತನೆಯಾಗಿತ್ತು. ಗ್ರಾಮದ ಸಮೀಪದಲ್ಲೇ ಇದ್ದ ದೇವರಗುಡ್ಡ ರಾತ್ರಿ ಸುರಿದ ಬಾರಿ ಮಳೆಗೆ ಕುಸಿಯಿದಿತ್ತು. ಬಾರಿ ಪ್ರಮಾಣದ ಪ್ರವಾಹದ ನೀರು ಹಳ್ಳದ ಮೂಲಕ ತೋಟಗಳ ಮೇಲೆ ಹರಿದು, ಸಮಾರು 50 ಎಕರೆಯಷ್ಟು ಜಮೀನು ನಾಶವಾಗಿಯಿತ್ತು. 15 ಕ್ಕೂ ಹೆಚ್ಚು ಎಕರೆಯಲ್ಲಿದ್ದ ಅಡಿಕೆ ಮರಗಳು ನೀರಿನಲ್ಲಿ ಕೊಚ್ಚಿ ಹೋದದ್ದವು. ಇಷ್ಟೇ ಆಗಿದ್ದರೆ, ಅವರು ಮತ್ತೇ ಅಲ್ಲಿ ಕೃಷಿ ಮಾಡುತ್ತಿದ್ದರೋ ಏನೋ. ಆದರೆ ಗುಡ್ಡ ಕುಸಿತದಿಂದಾಗಿ ಕಾಡಿನ ಮರಗಳು ಸಹ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಕೃಷಿ ಭೂಮಿಯಲ್ಲಿ ಬಿದ್ದಿದ್ದವು. ಸಾಕಷ್ಟು ಪ್ರಮಾಣದ ಮರಳು, ಮಣ್ಣು ಗದ್ದೆಗಳಲ್ಲಿ ಸಂಗ್ರಹವಾಗಿ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇಂದಿಗೂ ನಿರ್ಮಾಣವಾಗಿದೆ.

ಈ ವರ್ಷ ಸಹ ಕೃಷಿ ಮಾಡದಂತ ಸ್ಥಿತಿ ಇದೆ. ಕಳೆದ ವರ್ಷ ಖುದ್ದು ಸಿಎಂ ಯಡಿಯೂರಪ್ಪ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಂತ್ರಸ್ಥರಿಗೆ ಸಾಂತ್ವನ ಹೇಳಿದ್ದರು. ಅಲ್ಲಿ ಆಗಿದ್ದ ಹಾನಿ ನೋಡಿ, ಈ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದುವರೆಗೂ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ 15 ಸಾವಿರ ರೂಪಾಯಿ ಹಣ ಬಂದಿದ್ದು ಬಿಟ್ಟರೆ, ಬೇರೆ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ. ಇದಕ್ಕೆ ಸಂತ್ರಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ತುಂಗಭದ್ರಾ - ಕೃಷ್ಣಾ ನದಿಗಳಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ : ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿರುವ ಗ್ರಾಮಸ್ಥರು

ಈಗ ಮತ್ತೇ ಹೊಸದಾಗಿ ಅಡಿಕೆ ಸಸಿ ನೆಟ್ಟು ಅವು ಮತ್ತೇ ಫಸಲು ನೀಡುವರೆಗೂ ನಾವು ಬದುಕಿರುತ್ತೇವಾ ಎನ್ನುತ್ತಾರೆ ಗ್ರಾಮಸ್ಥರು. ಸರ್ಕಾರ ನಮಗೆ ಅಲ್ಲದಿದ್ದರೂ, ನಮ್ಮ ಮಕ್ಕಳ ಜೀವನಕ್ಕಾದರೂ ಸಹಾಯ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಘಟನೆ ನಡೆದು ಒಂದು ವರ್ಷದ ನಂತರ ಇಂದು ಉಸ್ತುವಾರಿ ಸಚಿವ ಈಶ್ವರಪ್ಪ ಅಧಿಕಾರಿಗಳ ಜೊತೆ ಭೇಟಿ ನೀಡಿ ಜನರಿಗೆ ಮತ್ತೇ ವಿಶ್ವಾಸ ನೀಡಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳು  ಸೂಚನೆ ಸಹ ನೀಡಿದ್ದಾರೆ. ಈಗಲಾದರೂ ನಮಗೆ ನ್ಯಾಯ ಸಿಗುತ್ತಾ ಎಂಬ ನೀರಿಕ್ಷೆಯಲ್ಲಿದ್ದಾರೆ ಹೆಗಲತ್ತಿ ಗ್ರಾಮಸ್ಥರು. ಜಿಲ್ಲಾಡಳಿತ ತಕ್ಷಣ ಇವರಿಗೆ ವಿಶೇಷ ಪ್ಯಾಕೇಜ್ ನೀಡಿದರೆ, ಅನುಕೂಲವಾಗಲಿದೆ. ಇಲ್ಲದೇ ಹೋದರೆ ಬದುಕು ಮತ್ತೇ ಬಂಜರ ಭೂಮಿಯ ರೀತಿ ಆಗುವುರಲ್ಲಿ ಎರಡು ಮಾತಿಲ್ಲ.
Published by: G Hareeshkumar
First published: August 9, 2020, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading