ನೀರಾ ಪ್ರೀಯರಿಗೆ ಗುಡ್ ನ್ಯೂಸ್‌ : ಉತ್ತರ ಕರ್ನಾಟಕದಲ್ಲಿ ನೀರಾ ಪಾರ್ಲರ್ ಆರಂಭ 

ನೀರಾದ ಉತ್ಪಾದನೆ, ತೆಂಗು ಬೆಳೆಗಾರ ಹಾಗೂ ಅದರ ಕೆಲಸಗಾರರ ಮುಖದಲ್ಲಿ ಮಂದಹಾಸ ತಂದಿದೆ. ಮುಂಬರುವ ದಿನಗಳಲ್ಲಿ ನೀರಾ ಐಸ್ ಕ್ರೀಂ, ಜೂಸ್ ತಯಾರಿ ನಡೆದಿದೆ. ಉತ್ತರ ಭಾರತ, ಯೂರೋಪ ಹಾಗೂ ಅಮೇರಿಕಾದಿಂದ ನೀರಾಗೆ ಬೇಡಿಕೆ ಹೆಚ್ಚಿದೆ

news18-kannada
Updated:September 22, 2020, 7:26 AM IST
ನೀರಾ ಪ್ರೀಯರಿಗೆ ಗುಡ್ ನ್ಯೂಸ್‌ : ಉತ್ತರ ಕರ್ನಾಟಕದಲ್ಲಿ ನೀರಾ ಪಾರ್ಲರ್ ಆರಂಭ 
ಸಾಂದರ್ಭಿಕ ಚಿತ್ರ
  • Share this:
ಧಾರವಾಡ (ಸೆಪ್ಟೆಂಬರ್​ 22): ನೀರಾ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ‌ನೀರು ಬರುತ್ತೆ. ಮೊದಲೆಲ್ಲಾ ನೀರಾವನ್ನು ಮದ್ಯವೆಂದು ಸೇವನೆ ಮಾಡುತ್ತಿದ್ದರು. ಬೆಳ್ಳಂ ಬೆಳಿಗ್ಗೆ ತೆಂಗಿನ ‌ತೋಟಕ್ಕೆ‌ ಹೋಗಿ ಸೂರ್ಯೋದಯದ ಮೊದಲು ನೀರಾವನ್ನು  ಕದ್ದು ಮುಚ್ಚಿ ಕುಡಿಯುತ್ತಿದ್ದರು. ಆದರೆ, ಈಗ ನೀರಾ ಆಲ್ಕೋ ಹಾಲ್ ಆಗಿ ಪರಿವರ್ತನೆ ಆಗದಂತೆ ಶುದ್ಧ ನೀರಾ ಸಿಗಲಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿನ ನೆಟ್‌ ಅಂಡ್‌ ಸ್ಪೈಸ್‌ ರೈತ ಉತ್ಪಾದಕ ಕಂಪನಿಯಿಂದ ನೇರವಾಗಿ ಗ್ರಾಹಕರಿಗೆ ತಲುಪಲಿದೆ. ಇದು ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಧಾರವಾಡದಲ್ಲಿ ಸುಪ್ರೀಮ್ ನೀರಾ ಪಾರ್ಲರ್ ಆರಂಭ ಮಾಡಿದೆ. ನಿರಂತರ ನೀರಾ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದಕ್ಕೆ ಕಲ್ಪರಸ, ಕಲ್ಪಾಮೃತ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಪ್ರಕೃತಿದತ್ತ ಈ ಪೇಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಾತಾವರಣದಲ್ಲಿ 40 ಕ್ಕೂ ಹೆಚ್ಚು ತಾಪಮಾನವಿದ್ದಲ್ಲಿ ನೀರಾ ಹೆಂಡವಾಗಿ ಪರಿವರ್ತನೆ ಆಗುವುದರಿಂದ ಅದನ್ನು ಸಂಸ್ಕರಣೆ ಮಾಡಿ ಗ್ರಾಹಕರಿಗೆ ಉತ್ತಮ ನೀರಾ ಮಾರಾಟ ಮಾಡಲಾಗುತ್ತಿದೆ.

ಈ ಪೇಯ ಮಾರಾಟಕ್ಕೆ ಅನುಮತಿ ನೀಡುವಂತೆ 2001 ರಲ್ಲಿ ನಡೆದ ರೈತ ಚಳುವಳಿಯಲ್ಲಿ ಪೊಲೀಸರ ಗೋಲಿಬಾರ್‌ಗೆ ಇಬ್ಬರು ರೈತರ ಬಲಿದಾನವಾಗಿದೆ. ಈಗ ಮಲೆನಾಡು ನೆಟ್‌ ಅಂಡ್‌ ಸ್ಪೈಸ್‌ ರೈತ ಉತ್ಪಾದಕ ಕಂಪನಿಗೆ ನೀರಾ ಮಾರಾಟಕ್ಕೆ ಅನುಮತಿ ಪಡೆದಿದೆ.

ನಿತ್ಯವೂ 4 ಸಾವಿರ ಸಾಮರ್ಥ್ಯದ ನೀರಾ ಸಂಸ್ಕರಣಾ ಘಟಕ ಭದ್ರಾವತಿ ತಾಲೂಕಿನ ಬಾರಂದೂರ ಗ್ರಾಮದಲ್ಲಿ ಸ್ಥಾಪಿಸಿದೆ. 2.50 ಕೋಟಿ ರೂಪಾಯಿ ಯೋಜನೆಗೆ ಸರ್ಕಾರದ 1 ಕೋಟಿ ರೂಪಾಯಿ ಸೇರಿ 1.50 ಕೋಟಿ ರೂಪಾಯಿ ರೈತ ಉದ್ಪಾದಕ ಕಂಪನಿ ಹೂಡಿಕೆ ಮಾಡಿದೆ.

ಸುಪ್ರೀಮ್ ನೀರಾ ಪಾರ್ಲರ್ ಬಗ್ಗೆ ಮಾಹಿತಿ ನೀಡಿದ ಕಂಪನಿಯ ಅಧ್ಯಕ್ಷ ಮನೋಹರ್ ಮಸ್ಕಿ


ನೀರಾ ಅಲ್ಕೋ ಹಾಲ್ ಅಂಶ ಇಲ್ಲದಂತೆ ಶೇಖರಿಸುವ ತಂತ್ರಜ್ಞಾನ ಹಲವು ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. 2016 ರಲ್ಲಿ ತೆಂಗು ಬೆಳೆಯುವ ಪ್ರದೇಶಗಳ ಶಾಸಕರ ಸಭೆ ನಡೆಸಿ, ಶುದ್ಧ ನೀರಾ, ನೀರಾ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಲಾಗಿದೆ.

ನೀರಾದ ಉತ್ಪಾದನೆ, ತೆಂಗು ಬೆಳೆಗಾರ ಹಾಗೂ ಅದರ ಕೆಲಸಗಾರರ ಮುಖದಲ್ಲಿ ಮಂದಹಾಸ ತಂದಿದೆ. ರಾಜ್ಯದ ಆರ್ಥಿಕತೆಗೂ ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ನೀರಾ ಐಸ್ ಕ್ರೀಂ, ಜೂಸ್ ತಯಾರಿ ನಡೆದಿದೆ. ಉತ್ತರ ಭಾರತ, ಯೂರೋಪ ಹಾಗೂ ಅಮೇರಿಕಾದಿಂದ ನೀರಾಗೆ ಬೇಡಿಕೆ ಹೆಚ್ಚಿದೆ ಎಂದು ಮಲೆನಾಡು ನೆಟ್‌ ಅಂಡ್‌ ಸ್ಪೈಸ್‌ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮನೋಹರ್ ಮಸ್ಕಿ ತಿಳಿಸಿದ್ದಾರೆ.

ಇದನ್ನೂ ಓದಿ :  ಬೆಂಗಳೂರಿನ ಸೌಂದರ್ಯ ಹಾಳಾಗದಂತೆ ತಡೆಯಲೇಬೇಕಿದೆ ; ಅಪಾರ್ಟ್‌ಮೆಂಟ್‌ ಮಾಲೀಕರ ಜತೆ ಡಿಸಿಎಂ ಸಂವಾದರಾಜ್ಯದ 13 ಜಿಲ್ಲೆಗಳಲ್ಲಿ ಪ್ರಮುಖವಾಗಿ ತೆಂಗು ಬೆಳೆಯಲಾಗುತ್ತಿದ್ದು ಒಟ್ಟು 5.11 ಲಕ್ಷ ಹೆಕ್ಟೇರ್‌ ತೆಂಗು ಬೆಳೆ ಇದ್ದು, 7.665 ಕೋಟಿ ತೆಂಗಿನ ಮರಗಳಿವೆ. 13 ಜಿಲ್ಲೆಗಳಲ್ಲಿ ಶೇ.81ರಷ್ಟು ಬೆಳೆ ಇದೆ. ತುಮಕೂರು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು, 1,94,12,400 ಮರಗಳಿವೆ. ಶಿವಮೊಗ್ಗದಲ್ಲಿ 8,87,460 ಮರಗಳಿವೆ.ವರ್ಷಕ್ಕೆ ಒಂದು ತೆಂಗಿನ ಮರ ಹೆಚ್ಚೆಂದರೆ 100 ಕಾಯಿ ಬಿಡಬಹುದು. ಈಗಿನ ಮಾರ್ಕೆಟ್‌ ದರದಲ್ಲಿ ವರ್ಷಕ್ಕೆ ಒಂದು ಮರದಿಂದ 1,300, 1,400ರೂಪಾಯಿ ಆದಾಯ ಗಳಿಸಬಹುದು. ಆದರೆ ನೀರಾದಿಂದ ತಿಂಗಳಿಗೆ ಒಂದು ಮರದಿಂದ ಕನಿಷ್ಠ 1,600 ರೂಪಾಯಿ. ಸಂಪಾದಿಸಬಹುದು. ಒಂದು ಮರ ದಿನಕ್ಕೆ ಕನಿಷ್ಠ 2 ರಿಂದ 3.5 ಲೀಟರ್‌ ನೀರಾ ಕೊಡುತ್ತದೆ. ಒಂದು ಕೆಜಿ ನೀರಾಗೆ 40 ರೂಪಾಯಿ ಇದೆ.
Published by: G Hareeshkumar
First published: September 22, 2020, 7:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading