HOME » NEWS » District » GADAG FARMERS LOST CROP FOR WILD BOAR ATTACK SKG MAK

ಗದಗ; ಕಾಡುಹಂದಿಗಳ ದಾಳಿಯಿಂದ ಗೋವಿನ ಜೋಳದ ಬೆಳೆ ಹಾನಿ, ರೈತ ಕಂಗಾಲು!

ಕಾಡು ಹಂದಿಗಳ ಹಿಂದು ಕಡಲೆ,ಸೂರ್ಯಕಾಂತಿ, ಮೆಕ್ಕೆಜೋಳ ಶೇಂಗಾ ಮೊದಲಾದ ಬೆಳೆಗಳನ್ನು ಸಹ ಹಾನಿ ಮಾಡುತ್ತಿವೆ. ಇದರಿಂದ ಅನ್ನದಾತರು ನರಳಾಡುವಂತಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಂದಿಗಳ ಹಾವಳಿಗೆ ಬ್ರೇಕ್‌ ಹಾಕಿ, ಅನ್ನದಾತರ ಬೆಳೆ ಉಳಿಸಬೇಕಿದೆ ಎಂಬುದೇ ರೈತರ ಕೋರಿಕೆ.

news18-kannada
Updated:December 5, 2020, 7:29 AM IST
ಗದಗ; ಕಾಡುಹಂದಿಗಳ ದಾಳಿಯಿಂದ ಗೋವಿನ ಜೋಳದ ಬೆಳೆ ಹಾನಿ, ರೈತ ಕಂಗಾಲು!
ಕಾಡು ಹಂದಿಗಳ ದಾಳಿಯಿಂದ ಹಾಳಾಗಿರುವ ರೈತರ ಬೆಳೆ.
  • Share this:
ಗದಗ: ಸಮೃದ್ದಿಯಾಗಿ ಬೆಳೆದಿದ್ದ ಮೆಕ್ಕೆ ಜೋಳ ಬೆಳೆಗೆ ಹಂದಿಗಳ ಹಾವಳಿ ಗದಗ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದ ಚಂದ್ರಗೌಡ ಕರೆಗೌಡ್ರ ಎಂಬ ರೈತ ಸುಮಾರು ಎರಡು ಎಕರೆ ಜಮೀನಿನಲ್ಲಿ ಗೋವಿನ ಜೋಳ ಬೆಳೆದಿದ್ದರು. ಅವರು ಕಷ್ಟ ಪಟ್ಟು ಬೆಳೆದ ಗೋವಿನ ಜೋಳ ಬೆಳೆಗೆ ಈಗ ಹಂದಿಗಳ ಪಾಲಾಗಿದ್ದು, ಹಂದಿಗಳು ಎಲ್ಲಾ ಎಲ್ಲಾ ಬೆಳೆಯನ್ನು ನಾಶ ಪಡೆಸುತ್ತಿವೆ. ರಾತ್ರಿಯಾದ್ರೆ ಸಾಕು ಜಮೀನಿಗೆ ಏಕಾಏಕಿ ನುಗ್ಗಿ ಫಸಲು ತಿಂದು ಹಾಕಿ ಹಾನಿಯನ್ನು ಜಾಸ್ತಿ ಮಾಡುತ್ತಿವೆ. ಹೀಗಾಗಿ ಫಸಲು ರೈತನ ಕೈಗೆ ಸೇರುವ ಮುನ್ನವೇ ಹಂದಿ ಪಾಲಾಗುತ್ತಿದೆ ಇದ್ದರಿಂದ ರೈತ ಕಂಗಾಲಾಗಿದ್ದಾನೆ.

ಚಂದ್ರಗೌಡ ಕರೆಗೌಡ್ರ ಅವರು ಸಾಲಾಸೂಲ ಮಾಡಿ ಗೋವಿನ ಜೋಳ ಬೆಳೆದಿದ್ದರು. ಬೆಳೆ ಸಹ ಸಮೃದ್ಧಿಯಾಗಿ ಬೆಳೆ ಬಂದಿತ್ತು. ಬಂದ ಫಸಲಿನಿಂದ ಈ ಬಾರಿ ಉತ್ತಮ ಆದಾಯ ಬರುವ ನಿರೀಕ್ಷೇಯಲ್ಲಿದ್ದ ರೈತ ಜಮೀನಿಗೆ ಹೋಗಿ ಈಗ  ಗೋವಿನ ಜೋಳ ನೋಡಿದ್ರೆ ಎಲ್ಲವೂ ನೆಲಸಮವಾಗಿ ಬಿದ್ದು ಬಿಟ್ಟಿತ್ತು. ಹೀಗಾಗಿ ರೈತ‌ನಿಗೆ ಬರ ಸಿಡಿಲು ಬಡದಂತಾಗಿತ್ತು. ಹಗಲು ಇರುಳು ಶ್ರಮವಹಿಸಿ ಕಷ್ಟ ಪಟ್ಟು ಬೆಳೆದ ಬೆಳೆಗೆ ಇವಾಗ ಹಂದಿಗಳು ಏಕಾಏಕಿ ನುಗ್ಗಿ ಹಾನಿ ಮಾಡುತ್ತಿರುವುದು ರೈತ ಕುಲ ಗೋಳಾಡುವಂತೆ ಮಾಡುತ್ತಿವೆ.

ಇದನ್ನೂ ಓದಿ: 3 ವರ್ಷದಿಂದ ಸಗಣಿ ಎತ್ತಿಕೊಂಡು ಜೀವನ ಮಾಡುತ್ತಿದ್ದೇನೆ, ಸುಳ್ಳುಸುದ್ದಿ ಹಬ್ಬಿಸಿ ನನ್ನ ಜೀವನ ಹಾಳು ಮಾಡಬೇಡಿ; ವರ್ತೂರು ಪ್ರಕಾಶ್

ಆದರೆ, ಈ ಹಂದಿಗಳು ಎಲ್ಲಿಂದ ಎಂಟ್ರಿ ಕೊಡುತ್ತವೋ ಗೊತ್ತಿಲ್ಲ. ರಾತ್ರಿಯಾದ್ರೆ ಸಾಕು  ಸಮೃದ್ದಿಯಾಗಿ ಬೆಳೆದ ಬೆಳೆಯನ್ನು ನಾಶ ಪಡಿಸಿ ಬಿಡುತ್ತವೆ. ಇದರಿಂದ  ಬೆಳೆಗೆ ಒಳ್ಳಗಾದ ರೈತ ಚಂದ್ರಗೌಡ ಕರೆಗೌಡ್ರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಇದಲ್ಲದೆ, ಕಾಡು ಹಂದಿಗಳ ಹಿಂದು ಕಡಲೆ,ಸೂರ್ಯಕಾಂತಿ, ಮೆಕ್ಕೆಜೋಳ ಶೇಂಗಾ ಮೊದಲಾದ ಬೆಳೆಗಳನ್ನು ಸಹ ಹಾನಿ ಮಾಡುತ್ತಿವೆ. ಇದರಿಂದ ಅನ್ನದಾತರು ನರಳಾಡುವಂತಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಂದಿಗಳ ಹಾವಳಿಗೆ ಬ್ರೇಕ್‌ ಹಾಕಿ, ಅನ್ನದಾತರ ಬೆಳೆ ಉಳಿಸಬೇಕಿದೆ ಎಂಬುದೇ ರೈತರ ಕೋರಿಕೆ.
Published by: MAshok Kumar
First published: December 5, 2020, 7:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading