ಮಹಿಳಾ ವಿವಿ ಘಟಿಕೋತ್ಸವ: ಬಡ ರೈತ ಹಾಗೂ ಅನಕ್ಷರಸ್ಥನ ಮಕ್ಕಳಿಗೆ ತಲಾ ನಾಲ್ಕು ಚಿನ್ನದ ಪದಕ

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಚಿನ್ನದ ಪದಕ ವಿಜೇತರು ಮತ್ತು ಪಿಹೆಚ್​ಡಿ ಪಡೆದವರಿಗೆ ಮಾತ್ರ ಈ ಬಾರಿ ಘಟಿಕೋತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.  ಈ ಸಂದರ್ಭದಲ್ಲಿ 55 ಜನರಿಗೆ ಪಿ. ಎಚ್ ಡಿ, 67 ಜನರಿಗೆ 70 ಚಿನ್ನದ ಪದಕ ಸೇರಿ ನಾನಾ ಪದವಿ ಪ್ರದಾನ ಮಾಡಲಾಯಿತು. 

news18-kannada
Updated:September 19, 2020, 9:02 PM IST
ಮಹಿಳಾ ವಿವಿ ಘಟಿಕೋತ್ಸವ: ಬಡ ರೈತ ಹಾಗೂ ಅನಕ್ಷರಸ್ಥನ ಮಕ್ಕಳಿಗೆ ತಲಾ ನಾಲ್ಕು ಚಿನ್ನದ ಪದಕ
ವಿಜಯಪುರ ವಿಶ್ವವಿದ್ಯಾಲಯ ಘಟಿಕೋತ್ಸವ.
  • Share this:
ವಿಜಯಪುರ (ಸೆಪ್ಟೆಂಬರ್​. 19); ಬಡತನದಲ್ಲಿ ಬೆಂದ ಪ್ರತಿಭೆಗಳು ಚಿನ್ನದ ಪದಕ ಪಡೆಯುವ ಮೂಲಕ ತಮ್ಮ ಪೋಷಕರಷ್ಟೇ ಅಲ್ಲ, ತಮ್ಮ ಇಡೀ ಊರಿನ ಮತ್ತು ವಿಜಯಪುರ ಜಿಲ್ಲೆಯ ಜನತೆ ಹೆಮ್ಮೆ ಪಡುವ ಸಾಧನೆಯ ಮೂಲಕ ಈ ವಿದ್ಯಾರ್ಥಿನಿಯರು ಗಮನ ಸೆಳೆದಿದ್ದಾರೆ. ಬಡ ರೈತನ ಮಗಳು ಅರ್ಥ ಶಾಸ್ತ್ರದಲ್ಲಿ ಮತ್ತು ಅನಕ್ಷಕರಸ್ಥರ ಮಗಳು ಕನ್ನಡದಲ್ಲಿ ತಲಾ ನಾಲ್ಕು ಚಿನ್ನದ ಪದಕ ಪಡೆಯುವ ಮೂಲಕ ಕುಟುಂಬದಲ್ಲಿ ಸಂತಸಕ್ಕೆ ಕಾರಣರಾಗಿದ್ದಾರೆ. ಇದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕಷ್ಟಪಟ್ಟು ಓದಿ ಇಷ್ಟಪಟ್ಟ ಸಾಧನೆ ಮಾಡಿದ ಯುವತಿಯರ ಯಶೋಗಾಥೆ. ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಯಲಯದ 11ನೇ ಘಟಿಕೋತ್ಸವದಲ್ಲಿ ಈ ಯುವತಿಯರ ಸಾಧನೆ ಇತರರಿಗೆ ಮಾದರಿಯಾಗಿದೆ.  ಈ ಯುವತಿಯರಿಗೆ ತಲಾ ನಾಲ್ಕು ಚಿನ್ನದ ಪದಕ ಬಂದಿದ್ದು, ಚಿನ್ನದ ಮಹಿಳೆಯರಾಗಿ ಹೆಸರು ಮಾಡಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸೂರ ಗ್ರಾಮದ ಬಡ ಕೃಷಿಕನ ಮಗಳು ಪದ್ಮಾವತಿ ಯಾತಗಲ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಷ್ಟೇ ಅಲ್ಲ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.  ತನ್ನ ಸಾಧನೆಯನ್ನು ತಂದೆ-ತಾಯಿ, ವಿವಿಯ ಕನ್ನಡ ವಿಭಾಗದ ಬೋಧಕರಿಗೆ ಅರ್ಪಿಸಿದ್ದಾರೆ.

ಎಸ್. ಎಸ್. ಎಲ್. ಸಿ. ನಂತರ ವಿದ್ಯಾಭ್ಯಾಸ ಸಾಕು ಎಂದಾಗ ತನ್ನ ಪೋಷಕರು ಪ್ರೋತ್ಸಾಹ ನೀಡಿ ಓದಿಸಿದ್ದು ತನ್ನನ್ನು ಓದಿಸಿದ್ದು ಇಂದಿನ ಸಾಧನೆಗೆ ಕಾರಣ ಎಂದು ತಿಳಿಸಿದ್ದಾರೆ.

ಇನ್ನು ಅರ್ಥಶಾಸ್ತ್ರದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಯುವತಿ ಜಯಶ್ರೀ ಬಪಡಕಪ್ಪನವರ ತನ್ನ ಕುಟುಂಬದಲ್ಲಷ್ಟೇ ಅಲ್ಲ ಇಡೀ ಗ್ರಾಮದಲ್ಲಿ ಈಗ ಸ್ನಾತಕೋತ್ತರ ಪದವಿ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.  ಅಷ್ಟೇ ಅಲ್ಲ ಕಡು ಬಡತನವಿದ್ದರೂ ಮಗಳಿಗೆ ಕಷ್ಟಪಟ್ಟು ಓದಿಸಿದ್ದು ತಾನು ಈ ಸಾಧನೆ ಮಾಡಲು ಸಾಧ್ಯ ಎಂದು ನ್ಯೂಸ್ 18 ಕನ್ನಡದ ಜೊತೆ ಸಂತಸ ವ್ಯಕ್ತಪಡಿಸಿದ್ದಾಳೆ.

ತಾನು ಇದೇ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗುವ ಕನಸು ಹೊಂದಿದ್ದೇನೆ. ತನ್ನ ತಂದೆ-ತಾಯಿ, ಅಣ್ಣ, ತಂಗಿಯನ್ನು ಘಟಿಕೋತ್ಸವಕ್ಕೆ ಕರೆತರಬೇಕು ಎಂಬ ಮಹದಾಸೆಗೆ ಕೊರೋನಾ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯಸಭೆಯಲ್ಲಿ ಕೇಂದ್ರದ ಮೂರು ಕೃಷಿ ಮಸೂದೆ; ಬಿಜೆಪಿಗಿದೆಯೇ ಬಹುಮತ?, ಸಂಖ್ಯೆಗಳ ಆಟದಲ್ಲಿ ಸರ್ಕಾರ!

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಚಿನ್ನದ ಪದಕ ವಿಜೇತರು ಮತ್ತು ಪಿಹೆಚ್​ಡಿ ಪಡೆದವರಿಗೆ ಮಾತ್ರ ಈ ಬಾರಿ ಘಟಿಕೋತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.  ಈ ಸಂದರ್ಭದಲ್ಲಿ 55 ಜನರಿಗೆ ಪಿ. ಎಚ್ ಡಿ, 67 ಜನರಿಗೆ 70 ಚಿನ್ನದ ಪದಕ ಸೇರಿ ನಾನಾ ಪದವಿ ಪ್ರದಾನ ಮಾಡಲಾಯಿತು.

ಅಲ್ಲದೇ, 1087 ವಿದ್ಯಾರ್ಥಿನಿಯರಿಗೆ ನಾನಾ ವಿಷಯಗಳಲ್ಲಿ ಸ್ನಾತಕೋತ್ತರ, 8230 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು.  ನವದೆಹಲಿಯ ಅನುದಾನ ಆಯೋಗದ ಸದಸ್ಯ ಎಂ. ಕೆ. ಶ್ರೀಧರ ಘಟಿಕೋತ್ಸವ ಭಾಷಣ ಮಾಡಿದರು.
Published by: MAshok Kumar
First published: September 19, 2020, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading