HOME » NEWS » District » FORMER MINISTER RAMESH JARKIHOLI TRY TO GET A SEAT IN THE CABINET CSB MAK

Ramesh Jarkiholi: ಸಂಪುಟದಲ್ಲಿ ಸ್ಥಾನ ಪಡೆಯಲು ತೆರೆ ಮರೆಯಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಕಸರತ್ತು!

ಸಿಡಿ ಪ್ರಕರಣ ಸಂಬಂಧ ಇನ್ನೂ ಎಸ್ ಐ ಟಿ ತನಿಖೆ ಮುಂದುವರೆದಿದೆ. ಪ್ರಕರಣ ಆರೋಪಿಗಳು ಇನ್ನು ತಲೆಮರಿಸಿಕೊಂಡಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಇನ್ನೂ ಬಂದಿಲ್ಲ. ಈ ನಡುವೆ ರಮೇಶ ಜಾರಕಿಹೊಳಿ ಹಲವು ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

news18-kannada
Updated:June 3, 2021, 7:19 PM IST
Ramesh Jarkiholi: ಸಂಪುಟದಲ್ಲಿ ಸ್ಥಾನ ಪಡೆಯಲು ತೆರೆ ಮರೆಯಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಕಸರತ್ತು!
ರಮೇಶ್​ ಜಾರಕಿಹೊಳಿ.
  • Share this:
ಬೆಳಗಾವಿ (ಜೂನ್. 3); ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜತೆಗೆ ಸಿಡಿ ಪ್ರಕರಣ ಬಹಿರಂಗದಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದರು. ಸಿಡಿ ಪ್ರಕರಣ ತನಿಖೆಯನ್ನು ಎಸ್ ಐಟಿ ತಂಡ ನಡೆಸುತ್ತಿದೆ. ಇತ್ತೀಚೆಗೆ ಪೊಲೀಸರ ವಿಚಾರಣೆ ವೇಳೆ ಸಿಡಿಯಲ್ಲಿ ಕಾಣಿಸಿಕೊಂಡಿ ರುವುದು ನಾನೇ, ಅದು ತಮ್ಮತಿ ಸೆಕ್ಸ್​ ಎಂದು ಒಪ್ಪಿಕೊಂಡಿದ್ದ ರಮೇಶ್ ಜಾರಕಿಹೊಳಿ, ಇದೀಗ ಮತ್ತೆ ಸಿಎಂ ಬಿ ಎಸ್ ಯಡಿಯೂರಪ್ಪ ಸಂಪುಟವನ್ನು ಸೇರಲು ತೆರೆ ಮರೆಯಲ್ಲೇ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗು ತ್ತಿದೆ. ಹಲವು ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗುವ ಮೂಲಕ ಸಂಪುಟ ಸೇರುವ ಲಾಭಿ ನಡೆಸುತ್ತಿದ್ದಾರೆ. ರಮೇಶ ಜಾರಕಿಹೊಳಿಗೆ ಪರ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಿಡಿ ಪ್ರಕರಣ ಸಂಬಂಧ ಇನ್ನೂ ಎಸ್ ಐ ಟಿ ತನಿಖೆ ಮುಂದುವರೆದಿದೆ. ಪ್ರಕರಣ ಆರೋಪಿಗಳು ಇನ್ನು ತಲೆಮರಿಸಿಕೊಂಡಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಇನ್ನೂ ಬಂದಿಲ್ಲ. ಈ ನಡುವೆ ರಮೇಶ ಜಾರಕಿಹೊಳಿ ಹಲವು ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕೆಲ ದಿನಗಳಲ್ಲಿ ಮತ್ತೆ ಸಂಪುಟಕ್ಕೆ ಸೇರಿಕೊಳ್ಳುವಂತೆ ಸಿಎಂ ಮೇಲೆ ಪರೋಕ್ಷಕವಾಗಿ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಯಾವ ರೀತಿ ಸ್ಪಂಧನೆ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕು.

ರಮೇಶ ಜಾರಕಿಹೊಳಿ ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಭಲ ಜಲಸಂಪನ್ಮೂಲ ಖಾತೆಯನ್ನು ನಿರ್ವಹಣೆ ಮಾಡಿದ್ದರು. ಜಾರಕಿಹೊಳಿ ರಾಜೀನಾಮೆ ನಂತರ ಯಾರಿಗೂ ಖಾತೆಯನ್ನು ಸಿಎಂ ನೀಡಿಲ್ಲ. ಬದಲಾಗಿ ತಮ್ಮ ಬಳಿಯೇ ಜಲಸಂಪನ್ಮೂಲ ಖಾತೆಯನ್ನು ಸಿಎಂ ಉಳಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಸಹ ಡಿಸಿಎಂ ಗೋವಿಂದ ಕಾರಜೋಳ ಹೆಗಲಿಗೆ ಹಾಕಲಾಗಿದೆ. ಈ ಬೆಳವಣೆ ಹಿಂದೆ ಸಹ ರಮೇಶ ಜಾರಕಿಹೊಳಿ ಇದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಓರ್ವ ಡಿಸಿಎಂ ಹಾಗೂ ಮೂರು ಜನ ಸಚಿವರು ಇದ್ದರೂ ಗೋವಿಂದ ಕಾರಜೋಳಗೆ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: Karnataka Lockdown Extension: ಲಾಕ್​ಡೌನ್ ವಿಸ್ತರಣೆ ಖಚಿತಪಡಿಸಿದ ಸಿಎಂ ಯಡಿಯೂರಪ್ಪ; 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

ರಮೇಶ ಜಾರಕಿಹೊಳಿ ಮತ್ತೆ ಸಂಪುಟ ಸೇರಲು ಕಸರತ್ತು ಆರಂಭಿಸಿದ ಹಿನ್ನೆಲೆಯಲ್ಲಿ ಹಲವು ಶಾಸಕರು ಹಾಗೂ ಸಚಿವರು ಸಹ ಬೆಂಬಲವಾಗಿ ನಿಂತಿದ್ದಾರೆ. ಜತಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹ ಬೆಂಗಳೂರಿನಲ್ಲಿ ಬಿಡು ಬಿಟ್ಟು ರಮೇಶ ಜಾರಕಿಹೊಳಿ ಪರ ಲಾಭಿಯನ್ನು ಮಾಡುತ್ತಿದ್ದಾರೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ಹೆಚ್ಚು ಲಿಡ್ ಬಂದಿದೆ.

ಇದನ್ನೂ ಓದಿ: Kannada Google: ಕನ್ನಡ ಭಾಷೆಗೆ ಅವಮಾನ ಮಾಡಿದ ಗೂಗಲ್ ಸಂಸ್ಥೆಯ ವಿರುದ್ಧ ಕ್ರಮ: ಸಚಿವ ಅರವಿಂದ ಲಿಂಬಾವಳಿ

ಉಪ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿ ಮುಂದೆ ನಿಮಗೆ ಅನಕೂಲ ಮಾಡುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ರು. ಸಿಎಂ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತುಕತೆ ವೇಳೆಯಲ್ಲಿ ಭರವಸೆ ನೀಡಿದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿಯನ್ನು ಮಂತ್ರಿ ಮಾಡಲು ಬಾಲಚಂದ್ರ ಜಾರಕಿಹೊಳಿ ಪ್ರಯತ್ನವನ್ನು ಆರಂಭಿಸಿದ್ದಾರೆ. ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿದ್ದರು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ ಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 3, 2021, 7:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories