ಫಿಂಗರ್ ಪ್ರಿಂಟ್ ಸುಳಿವು; ಕಳ್ಳನನ್ನು ಹಿಡಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು

ಕಳ್ಳತನವಾದ ಸ್ಥಳದಲ್ಲಿ ಸಿಕ್ಕ ಬೆರಳಚ್ಚಿನ ಸಹಾಯದಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬನಶಂಕರಿಯ ಹಳೆಯ ಕಳ್ಳ ಖಲೀಲ್ ಎಂಬಾತನನ್ನು ಬಂಧಿಸಿದ್ದಾರೆ.

news18-kannada
Updated:September 1, 2020, 9:00 AM IST
ಫಿಂಗರ್ ಪ್ರಿಂಟ್ ಸುಳಿವು; ಕಳ್ಳನನ್ನು ಹಿಡಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು
ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ
  • Share this:
ಬೆಂಗಳೂರು(ಸೆ. 01): ಮನೆಯಲ್ಲಿ ದಾಖಲಾಗಿದ್ದ ಫಿಂಗರ್ ಪ್ರಿಂಟ್​ನ ಸಹಾಯದಿಂದ ಕಳ್ಳನನ್ನ ಪೊಲೀಸರು ಸೆರೆ ಹಿಡಿದಿದ್ದಾರೆ. ನಗರದ ಬನಶಂಕರಿ ಎರಡನೇ ಹಂತದ ಶೇಖರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಶೇಖರ್ ಮನೆಯಲ್ಲಿದ್ದ ಸುಮಾರು 230 ಗ್ರಾಂ ಚಿನ್ನಾಭರಣ ದೋಚಿ ಅಸಾಮಿ ಎಸ್ಕೇಪ್ ಆಗಿದ್ದ.

ಮನೆಯಲ್ಲಿ ಕಳ್ಳತನವಾದ ಬಗ್ಗೆ ಮಾಲೀಕ ಶೇಖರ್ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳತನವಾದ ಮನೆಯಲ್ಲಿ ಎಫ್ಎಸ್ಎಲ್ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳತನವಾದ ಮನೆಯಲ್ಲಿ ಸಿಕ್ಕ ಬೆರಳಚ್ಚಿನ ಬಗ್ಗೆ ಕೆಲ ದಿನಗಳ ಬಳಿಕ ಎಫ್​ಎಸ್​ಎಲ್​ನಿಂದ ವರದಿ ಬಂದಿತ್ತು. ಈ ಫಿಂಗ್ ಪ್ರಿಂಟ್ ಆಧಾರದ ಮೇಲೆ ಪೊಲೀಸರು ಖಲೀಲ್ ಎಂಬಾತನನ್ನು ಹಿಡಿದಿದ್ದಾರೆ.

ಆರೋಪಿ, ಬನಶಂಕರಿ ನಿವಾಸಿ ಖಲೀಲ್ ಈ ಹಿಂದೆಯೂ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಖಲೀಲ್ ಬೆರಳಚ್ಚು ಮ್ಯಾಚ್ ಆಗಿದ್ದರಿಂದ ಪೊಲೀಸರು ಖಲೀಲ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಸಾಮಿ ಕಳ್ಳತನ ಮಾಡಿದ್ದು ತಾನೇ ಎಂದು ಬಾಯ್ಬಿಟ್ಟಿದ್ದಾನೆ.

ಆರೋಪಿ ಖಲೀಲ್​ನಿಂದ ಸುಮಾರು 340 ಗ್ರಾಂ ಚಿನ್ನ, ಒಂದು ಬೈಕ್ ಅನ್ನ ಸಿ‌ಕೆ ಅಚ್ಚುಕಟ್ಟು ಪೊಲೀಸರು ಜಪ್ತಿ ಮಾಡಿದ್ದಾರೆ. ಹಳೇ ಕಳ್ಳನ ಬೆರಳಚ್ಚಿನಿಂದ ಪೊಲೀಸರು ಹೊಸ ಕೇಸನ್ನ ಸುಲಭವಾಗಿ ಪತ್ತೆ ಹಚ್ಚಿದ್ದಾರೆ.

ವರದಿ: ಮುನಿರಾಜು ಹೊಸಕೋಟೆ
Published by: Vijayasarthy SN
First published: September 1, 2020, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading