ಯಲಹಂಕ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಭಾರೀ ಪೈಪೋಟಿ

ಯಲಹಂಕಾ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಗೋಪಾಲಕೃಷ್ಣ ಮತ್ತು ಕೇಶವ ರಾಜಣ್ಣ ಬಣ ಮಧ್ಯೆ ತೀವ್ರ ಪೈಪೋಟಿ ಇದೆ.

news18-kannada
Updated:September 27, 2020, 9:20 AM IST
ಯಲಹಂಕ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಭಾರೀ ಪೈಪೋಟಿ
ಯಲಹಂಕಾದ ಯುವ ಕಾಂಗ್ರೆಸ್ ಮುಖಂಡರು
  • Share this:
ಯಲಹಂಕ: ಯುವ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಎಲ್ಲಾ ಹುದ್ದೆಗಳ ಅವಧಿ ಅಂತ್ಯವಾಗಿದ್ದು ಈ ಬಾರಿ ಚುನಾವಣಾ ಅಖಾಡ ರಂಗೇರಿದೆ. ಕಾಂಗ್ರೆಸ್ ಪಾಳಯದಲ್ಲೇ ಎರಡು ಮೂರು ತಂಡಗಳ ಮೂಲಕ ತಮ್ಮ ಬೆಂಬಲಿಗರನ್ನ ಗೆಲ್ಲಿಸಿಕೊಳ್ಳಲು ಸರ್ಕಸ್ ನಡೆಯುತ್ತಿದೆ. ಕಾಂಗ್ರೆಸ್ ತಳ ಮಟ್ಟದಿಂದಲೇ ಪಕ್ಷ ಕಟ್ಟಲು ಮುಂದಾಗಿದ್ದು, ಈ ಬಾರಿ ಚುನಾವಣೆಗೆ ಹೊಸ ಸಾಹಸಕ್ಕೆ ಕೈ ಹಾಕಿದೆ. ಮತದಾನ ಇಲ್ಲದೆ ಸದಸ್ಯತ್ವ ನೊಂದಣಿ ಆಧಾರದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ತುಂಬಲು ಮುಂದಾಗಿರುವುದು ಪಕ್ಷದ ಆಂತರಿಕ ಕಚ್ಚಾಟಕ್ಕೆ ವೇದಿಕೆ ಮಾಡಿಕೊಟ್ಟಂತಿದೆ. ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿದವರಿಗೆ ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಸೇರಿದಂತೆ ಮುಂದಿನ ರಾಜಕೀಯ ಭವಿಷ್ಯಗಳು ನಿರ್ಧಾರ ಆಗಲಿವೆ. ಪಕ್ಷದಲ್ಲಿನ ಮುಖಂಡರು ತಮ್ಮತಮ್ಮ ಬೆಂಬಲಿಗರನ್ನ ಗೆಲ್ಲಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಎದುರಾಗಿದ್ದು, ಮೂಲ ಮತ್ತು ವಲಸಿಗ ಎಂಬ ಕೂಗು ಹೆಚ್ಚಾಗಿದೆ. 

ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಎರಡು ಬಣಗಳು ತೀವ್ರ ಪ್ರಯತ್ನ ನಡೆಸಿವೆ. ಕಳೆದ ಮೂರು ಬಾರಿಯ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಕೇಶವ ರಾಜಣ್ಣ ಬಣಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಮೂಲ ಕಾಂಗ್ರೆಸ್ ಕಟ್ಟಾಳುಗಳ ಗುಂಪು ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಗೊಂದಲಕ್ಕೊಳಗಾಗಿದೆ. ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಹೊಸದೇನಲ್ಲ. ಆದರೆ ಮೂಲ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನಮಾನ ಹಾಗೂ ಮನ್ನಣೆ ಸಿಗುತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದೆ. ಆದ್ರೂ ಹೊಸ ಹುರುಪಿನಿಂದ ಬೇರು ಮಟ್ಟದಲ್ಲಿ ಪಕ್ಷ ಕಟ್ಟಲು ಮುಂದಾಗಿರುವ ಪ್ರದೇಶ ಕಾಂಗ್ರೆಸ್ ಈಗ ನೀಡಿರುವ ಟಾಸ್ಕ್ ನಲ್ಲಿ ಗುಂಪುಗಾರಿಕೆ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಮೂಲ ಕಾಂಗ್ರೆಸ್ಸಿಗರು ನಿಷ್ಠಾವಂತ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ಮನವಿ ಮಾಡ್ತಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಯುವ ಮೋರ್ಚಾ​ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ನೇಮಕ; ಹಿರಿಯರಿಗೆ ಕೊಕ್​​, ಹೊಸಬರಿಗೆ ಮನ್ನಣೆ

ಯಲಹಂಕ ಬ್ಲಾಕ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನೇಕರು ಸ್ಪರ್ಧೆ ಮಾಡಿದ್ದಾರೆ. ಗೆಲ್ಲದೇ ಹೋದರೂ ಪಕ್ಷಕ್ಕಾಗಿ ಹೋರಾಟ ಮಾಡುತ್ತೇವೆ ಎನ್ನುವ ಯುವ ಕಾರ್ಯಕರ್ತನ ಬೆನ್ನಿಗೆ ನೇರವಾಗಿ ಪಕ್ಷ ನಿಷ್ಠ ಕಾಂಗ್ರೇಸ್ ಕಾರ್ಯಕರ್ತರು ನಿಂತಿದ್ದಾರೆ. ಪಕ್ಷಕ್ಕಾಗಿ ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಹೊಂದಿರುವ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಗೆಲುವು ಸಿಗಲಿದೆ ಎಂದು ನಾಯಕ ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ಹೋರಾಟ ನಮ್ಮವರ ವಿರುದ್ದ ಅಲ್ಲ, ಪಕ್ಷದ ಬೆರು ಮಟ್ಟದಲ್ಲಿ ಗಟ್ಟಿ ಗೊಳಸಿ ಸಂಘಟನೆ ಮಾಡುವ ನಿಟ್ಟಿನಿಂದ ನೀಡುವ ಟಾಸ್ಕ್ ನಲ್ಲಿ ಯಾರೇ ಗೆದ್ದರೂ ಪಕ್ಷದ ಈ ಬಾರಿಯ ಟಾಸ್ಕ್ ನಿಂದ ಹೊಸ ನೊಂದಣಿಗಳು ಹೆಚ್ಚಾಗಿವೆ ಎಂದವರು ಅಭಿಕ್ರಾಯ ಪಟ್ಟಿದ್ದಾರೆ. ಬಹುತೇಕ ನೆಲ ಕಚ್ಚಿರುವ ಕಾಂಗ್ರೆಸ್ ಪಕ್ಷವನ್ನ ಬೇರು ಮಟ್ಟದಿಂದ ಸದೃಢಗೊಳಿಸಿ ಪಕ್ಷ ಸಂಘಟನೆಗೆ ಮುಂದಾಗಿರುವ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಈ ಯೋಜನೆ ಯಶಸ್ವಿ ಆಗಲಿದೆಯಾ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ನವೀನ್ ಕುಮಾರ್
Published by: Vijayasarthy SN
First published: September 27, 2020, 9:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading