ಟಿಸಿ ಸುಟ್ಟು ಒಣಗುತ್ತಿರುವ ಬೆಳೆ: ಬೇಸತ್ತ ರೈತರಿಂದ ಆತ್ಮಹತ್ಯೆ ಬೆದರಿಕೆ

ವಿದ್ಯುತ್ ಟ್ರಾನ್ಸ್​ಫಾರ್ಮರ್ ಸುಟ್ಟುಹೋಗಿ ರೈತರಿಗೆ ಪಂಪ್ಸೆಟ್ ಚಲಾಯಿಸಲು ವಿದ್ಯುತ್ ಇಲ್ಲದೆ ಬೆಳೆಗಳೆಲ್ಲಾ ಒಣಗಿಹೋಗುತ್ತಿದೆ. ತಮ್ಮ ಮನವಿಗೆ ಕಿವಿಗೊಡದ ಚೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹನೂರು ತಾಲೂಕಿನ ಈ ಗ್ರಾಮಸ್ಥರು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.

news18-kannada
Updated:August 18, 2020, 11:32 AM IST
ಟಿಸಿ ಸುಟ್ಟು ಒಣಗುತ್ತಿರುವ ಬೆಳೆ: ಬೇಸತ್ತ ರೈತರಿಂದ ಆತ್ಮಹತ್ಯೆ ಬೆದರಿಕೆ
ಚಾಮರಾಜನಗರದ ರೈತರು
  • Share this:
ಚಾಮರಾಜನಗರ(ಆ. 18): ವಿದ್ಯುತ್ ಟ್ರಾನ್ಸ್​ಫಾರ್ಮರ್ ಸುಟ್ಟು ಬೆಳೆಗಳು ಒಣಗಿಹೋಗುತ್ತಿರುವುದರಿಂದ ಬೇಸತ್ತ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ  ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಉಯಿಲಿನತ್ತ ಗ್ರಾಮದಲ್ಲಿ ನಡೆದಿದೆ. ಹತ್ತು ದಿನ ಕಳೆದರೂ ಹೊಸ ಟಿ.ಸಿ ಅಳವಡಿಸದೆ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ಬೆಳ್ಳುಳ್ಳಿ, ಆಲೂಗೆಡ್ಡೆ, ಜೋಳದ ಬೆಳೆಗಳು ಒಣಗಿ ಹೋಗತೊಡಗಿವೆ.

ಕೆಲ ದಿನಗಳ ಹಿಂದೆ ಈ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿತ್ತು. ಚೆಸ್ಕಾಂ ಅಧಿಕಾರಿಗಳು ಕಳಪೆ ಗುಣಮಟ್ಟದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸಿದ್ದರು. ಒಂದೆರೆಡು ದಿನಗಳಲ್ಲೆ ಅದು ಸಹ ಸುಟ್ಟು ಹೋಯ್ತು. ಇದರಿಂದ ಕೃಷಿ ಪಂಪ್​ಸೆಟ್​ಗಳಿಗೆ ವಿದ್ಯುತ್ ಕಡಿತಗೊಂಡು ಬೆಳಗೆಳು ಒಣಗಿ ಹೋಗುತ್ತಿವೆ.

ಚೆಸ್ಕಾಂ‌ ಅಧಿಕಾರಿಗಳಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ನಮಗೆ ಬೇರೆ ದಾರಿ ಕಾಣದಂತಾಗಿದೆ ಎಂದು ರೈತರು ನ್ಯೂಸ್ 18 ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಹೇಮಾವತಿ ನಾಲಾ ದುರಸ್ತಿ ಕಾಮಗಾರಿ ಟೆಂಡರ್​ನಲ್ಲಿ ಗೋಲ್​ಮಾಲ್ ಆರೋಪ; ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಚಿನ್ನಾಭರಣ ಗಿರಿವಿ ಇಟ್ಟು ಸಾಲಸೋಲಾ ಬೆಳೆ ಬೆಳೆದ ರೈತರು ಫಸಲು ಕೈ ಸೇರುವ ಸಾಕಷ್ಟು ನಿರೀಕ್ಷೆಯಲ್ಲಿದ್ದರು. ಆದರೆ ಹತ್ತು ದಿನಗಳಿಂದ ನೀರಿಲ್ಲದೆ ಬೆಳೆಗಳು ಬಿಸಿಲಿಗೆ ಬಾಡಿ ಒಣಗುತ್ತಿವೆ. ಇಂದೂ ಸಹ ನೀರುಣಿಸದಿದ್ದರೆ ನೂರು ಎಕರೆಗೂ ಹೆಚ್ಚು ಬೆಳೆ ನಾಶವಾಗುವ ಆತಂಕ ಎದುರಾಗಿದೆ. ಇದರಿಂದ ಬೇಸತ್ತಿರುವ ರೈತರು ಇಂದು ಸಂಜೆಯೊಳಗೆ ಹೊಸ ಟಿ.ಸಿ. ಅಳವಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಹೊಲದಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 15 ಕ್ಕೂ ಹೆಚ್ಚು ರೈತರು ತಮ್ಮ ಹೊಲಗಳಲ್ಲೇ ಮೊಕ್ಕಾಂ ಮಾಡಿದ್ದಾರೆ. ಕೊಳವೆಬಾವಿ ಇದ್ದರೂ ಅದನ್ನು ಬಳಕೆ ಮಾಡಲು ವಿದ್ಯುತ್ ಸಂಪರ್ಕ ಇಲ್ಲದೆ ಹತಾಶೆಯಲ್ಲಿರುವ ಈ ರೈತರ ಧ್ವನಿ ಚೆಸ್ಕಾಂ ಅಧಿಕಾರಿಗಳಿಗೆ ಕೇಳಿಸಲಿ ಎಂಬುದು ನಮ್ಮ ಆಶಯ.ವರದಿ: ಎಸ್.ಎಂ. ನಂದೀಶ್
Published by: Vijayasarthy SN
First published: August 18, 2020, 11:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading