ರಾಮನಗರ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಜನರಿಂದ ಹಣ ದೋಚಲು ಖದೀಮರ ಮಾಸ್ಟರ್ ಪ್ಲ್ಯಾನ್ 

ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೇ ನಮ್ಮ ಬಳಿ ಸಹಾಯದ ನೆಪದಲ್ಲಿ ಹಣ ಕೇಳುತ್ತಿದ್ದಾರಲ್ಲ ಎಂದು ಅನುಮಾನಗೊಂಡ ಅನೇಕರು ಈ ಕುರಿತು ದೂರು ಕೂಡ ನೀಡಿದ್ದಾರೆ.

news18-kannada
Updated:September 18, 2020, 10:13 PM IST
ರಾಮನಗರ ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಜನರಿಂದ ಹಣ ದೋಚಲು ಖದೀಮರ ಮಾಸ್ಟರ್ ಪ್ಲ್ಯಾನ್ 
ಸಾಂದರ್ಭಿಕ ಚಿತ್ರ
  • Share this:
ರಾಮನಗರ (ಸೆ.18): ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಹಣ ದೋಚಿದರೆ, ಸುರಕ್ಷಿತ ಎಂದು ತಿಳಿದ ಖದೀಮರು ಪೊಲೀಸ್​ ಅಧಿಕಾರಿಗಳ ಸೋಗಿನಲ್ಲಿ ಜಾಲತಾಣದಲ್ಲಿ ಅಮಾಯಕರಿಂದ, ಹಣ ವಸೂಲಿಗೆ ಇಳಿದಿದ್ದಾರೆ. ಇದು ಪೊಲೀಸ್​ ಇಲಾಖೆಗೂ ಕೂಡ ಬಿಸಿ ತುಪ್ಪವಾಗಿ ಪರಿಗಣಿಸಿದ್ದು, ತಲೆನೋವು ಸೃಷ್ಟಿಸಿದೆ. ಜಿಲ್ಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ  ಪೊಲೀಸ್​ ವರಿಷ್ಠಾಧಿಕಾರಿ ಹೆಸರಲ್ಲಿ ಈ ರೀತಿ ನಕಲಿ ಖಾತೆ ಸೃಷ್ಟಿಸಲಾಗಿದೆ. ಜಿಲ್ಲೆಯಲ್ಲಿ ಹೆಸರು ಮಾಡಿದ್ದ ಅಧಿಕಾರಿಯ ಫೋಟೋ ವನ್ನು ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿದ್ದಾರೆ.  ಬಳಿಕ ಜಾಲತಾಣದಲ್ಲಿ ಪರಿಚಿತರಾದ ಸ್ನೇಹಿತರಿಗೆ ಮೇಸೆಂಜರ್​ ಮೂಲಕ ಹಣದ ಸಹಾಯವನ್ನು ಯಾಚಿಸಿದ್ದಾರೆ. ಉನ್ನತ ಅಧಿಕಾರಿಗಳು ಯಾವುದೋ ಸಂಕಷ್ಟದಿಂದ ಹಣ ಕೇಳುತ್ತಿದ್ದಾರೆ ಎಂದು ತಿಳಿದು ಹಲವರು ಮೋಸ ಹೋಗಿ ಹಣ ನೀಡಿದ್ದಾರೆ. ಬಳಿಕ ಹಣ ಮರಳಿ ಕೇಳಿದಾಗ ಅಸಲಿ ವಿಷಯ ಬಹಿರಂಗವಾಗಿದೆ.  

ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೇ ನಮ್ಮ ಬಳಿ ಸಹಾಯದ ನೆಪದಲ್ಲಿ ಹಣ ಕೇಳುತ್ತಿದ್ದಾರಲ್ಲ ಎಂದು ಅನುಮಾನಗೊಂಡ ಅನೇಕರು ಈ ಕುರಿತು ದೂರು ಕೂಡ ನೀಡಿದ್ದಾರೆ.

Fake Facebook Account Created in the name of ramangara ex sp

ಪೊಲೀಸ ಅಧಿಕಾರಿ ಅಕೌಂಟ್​ನಿಂದ  ನನಗೊಂದು ಸಹಾಯವಾಗಬೇಕು 20 ಸಾವಿರ ರೂ,ಗಳು ಬೇಕಿತ್ತು ಎಂಬ ಸಂದೇಶ ಕಳುಹಿಸಲಾಗುತ್ತಿದೆ.  ಇದನ್ನೇ ನಂಬಿದ ಬಹುತೇಕರು ಹಣ ಕೊಟ್ಟು ಮೋಸ ಹೋಗಿದ್ದಾರೆ. ಕಳೆದೊಂದು ವರ್ಷದ ಅಂತರದಲ್ಲಿ ಜಿಲ್ಲೆಯಲ್ಲಿ ಬರೊಬ್ಬರಿ 135 ಪ್ರಕರಣಗಳು ದಾಖಲಾಗಿವೆ. ಇದು ಸೈಬರ್ ಪೊಲೀಸರ ಲೆಕ್ಕವಷ್ಟೆ. ಇದಕ್ಕಿಂತ 10 ಪಟ್ಟು ಹೆಚ್ಚಿನ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿದ್ದರೂ, ದೂರು ನೀಡುವವರ ಸಂಖ್ಯೆ ಮಾತ್ರ ವಿರಳ.

ಇದನ್ನು ಓದಿ:  ದೆಹಲಿಯಿಂದ ಸಿಎಂ ಯಡಿಯೂರಪ್ಪ ಎಷ್ಟು ಅನುದಾನ ತರ್ತಾರೆ ನೋಡೋಣ: ಸಿದ್ದರಾಮಯ್ಯ

ಇನ್ನು ಈ ಬಗ್ಗೆ ಎಸ್ಪಿ ಎಸ್.ಗಿರೀಶ್ ಈ ಬಗ್ಗೆ ನಾವು ಕಟ್ಟುನಿಟ್ಟಿನ ಕ್ರಮವಹಿಸಿದ್ದೇವೆ. ಈಗ ಆ ಅಕೌಂಟ್ ಕೂಡ ಬ್ಲಾಕ್ ಮಾಡುಸಲಾಗಿದ್ದು, ಆದಷ್ಟು ಬೇಗ ಅಪರಾಧಿಗಳನ್ನ ಬಂಧಿಸಲಾಗುತ್ತದೆ. ಆದರೆ ಸಾರ್ವಜನಿಕರು ಇಂತಹ ನಕಲಿ ಖಾತೆಗಳನ್ನ ನಂಬಬೇಡಿ ಎಂದು ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ ಕೂಡ ಈ ರೀತಿ ಪೊಲೀಸರ ಹೆಸರಿನಲ್ಲಿ ಹಣ ದೋಚುವ ಯತ್ನ ನಡೆಸಲಾಗುತ್ತಿದೆ. ಸೈಬರ್​ಕ್ರೈಂ ಈಗ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
Published by: Seema R
First published: September 18, 2020, 10:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading