ಈಸೂರು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ ಹುಚ್ಚರಾಯಪ್ಪ ವಿಧಿವಶ

ಈಸೂರು ಹೋರಾಟದಲ್ಲಿ  ಪಾಲ್ಗೊಂಡಿದ್ದ ಹುಚ್ಚರಾಯಪ್ಪ ನವರಿಗೆ ಅಂದಿನ ಬ್ರಿಟೀಷ್ ಸರ್ಕಾರ ಮರಣ ದಂಡಣೆ ವಿಧಿಸಿತ್ತು. ಅದರೆ ನಂತರದಲ್ಲಿ ಹುಚ್ಚರಾಯಪ್ಪನವರಿಗೆ ಮರಣದಂಡನೆಯನ್ನು ಬದಲಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು

news18-kannada
Updated:August 18, 2020, 9:48 PM IST
ಈಸೂರು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ ಹುಚ್ಚರಾಯಪ್ಪ ವಿಧಿವಶ
ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ
  • Share this:
ಶಿವಮೊಗ್ಗ(ಆಗಸ್ಟ್​. 18): ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದಲ್ಲೇ ತನ್ನದೇ ಆದ ಚಾವು ಮೂಡಿಸಿದವರು ಈ ಗ್ರಾಮದ ಜನರು. ದೇಶದಲ್ಲೇ ಮೊದಲ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಂಡಿದ್ದರು ಇಲ್ಲಿನ ಸ್ವಾತಂತ್ರ್ಯ ಹೋರಾಟದ ಯೋಧರು. ಈ ಹಳ್ಳಿಗೆ ತಾವೇ ಸರ್ಕಾರ ರಚಿಸಿಕೊಂಡಿದ್ದರು. ಬ್ರಿಟೀಷ್ ಆಳ್ವಿಕೆ ಇದ್ದರೂ ಗ್ರಾಮದಲ್ಲಿ ತಮ್ಮದೇ ಆದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದರು. ಅಂತಹ ಹೋರಾಟದಲ್ಲಿ ಭಾಗವಹಿಸಿದ್ದ ಹುಚ್ಚರಾಯಪ್ಪ ಅವರು ಇಂದು ವಿಧಿವಶರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಎಂಬ ಪುಟ್ಟಹಳ್ಳಿ ಬ್ರಿಟೀಷರ ವಿರುದ್ಧ ಸೇಟೆದು ನಿಂತ ಊರು. ಗ್ರಾಮಕ್ಕೆ ಗ್ರಾಮವೇ ಚಳುವಳಿಗೆ ಧುಮುಕಿತ್ತು. ಮಕ್ಕಳು, ವಯಸ್ಸಾದರೂ, ಮಹಿಳೆಯರೂ, ಯುವಕರು ಸೇರಿದಂತೆ ಎಲ್ಲರೂ ಒಟ್ಟಾಗಿ ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ, ಬ್ರಿಟೀಷ್ ಸರ್ಕಾರದ ಅಧಿಕಾರಿಗಳನ್ನು ಊರಿಗೆ ಬರದಂತೆ ತಡೆ ಹಾಕಿ, ಬೋರ್ಡ್ ಹಾಕುತ್ತಾರೆ. ಅವರಿಗೆ ಕಂದಾಯ ಕಟ್ಟುವುದನ್ನು ನಿಲ್ಲಿಸುತ್ತಾರೆ.ಬ್ರಿಟೀಷ್ ಸರ್ಕಾರದ ನಿಯಮಗಳನ್ನು ಪಾಲಿಸದೇ ಗಾಳಿಗೆ ತೂರುತ್ತಾರೆ. ಆ ಮೂಲಕ ಅವರ ವಿರುದ್ಧ ತಮ್ಮದೇ ಆದ ಸರ್ಕಾರವನ್ನು ಮಕ್ಕಳಿಂದ ರಚಿಸುತ್ತಾರೆ. ಈ ಮೂಲಕ ಬ್ರಿಟೀಷ್ ಸರ್ಕಾರಕ್ಕೆ ಬಂಡಾಯದ ರಣ ಕಹಳೆ ಊದುತ್ತಾರೆ. ಇಂತಹ ಹೋರಾಟದಲ್ಲಿ ಭಾಗವಹಿಸಿದ್ದ ಹುಚ್ಚರಾಯಪ್ಪನವರು ಇಂದು ಈಸೂರು ಗ್ರಾಮದ ತಮ್ಮ  ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 106 ವರ್ಷ ವಯಸ್ಸಾಗಿತ್ತು. 4 ಜನ ಗಂಡು ಮಕ್ಕಳು,  ಓರ್ವ ಮಗಳು ಮತ್ತು ಮೊಮ್ಮಕ್ಕಳು ಇದ್ದಾರೆ.ಈಸೂರು ಹೋರಾಟದಲ್ಲಿ  ಪಾಲ್ಗೊಂಡಿದ್ದ ಹುಚ್ಚರಾಯಪ್ಪ ನವರಿಗೆ ಅಂದಿನ ಬ್ರಿಟೀಷ್ ಸರ್ಕಾರ ಮರಣ ದಂಡಣೆ ವಿಧಿಸಿತ್ತು. ಅದರೆ ನಂತರದಲ್ಲಿ ಹುಚ್ಚರಾಯಪ್ಪನವರಿಗೆ ಮರಣ ದಂಡನೆಯನ್ನು ಬದಲಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಕಂದಾಯ ವಸೂಲಿ ವಿರೋಧಿಸಿ ನಡೆದ ಈಸೂರು ಹೋರಾಟದಲ್ಲಿ  ಪ್ರಮುಖಪಾತ್ರ ವಹಿಸಿದ್ದ  ಈಸೂರು ಗ್ರಾಮದ ಜನರಲ್ಲಿ ಹುಚ್ಚರಾಯಪ್ಪ ಕೂಡ ಒಬ್ಬರು.

ಇದನ್ನೂ ಓದಿ : ಅಲ್ಪಾವಧಿ ಬೆಳೆಗಳ ಜೊತೆ ತೊಗರಿಗೂ ಕುತ್ತು ; ಸಾಕೋ ಸಾಕೋ ಮಳೆರಾಯ ಎನ್ನುತ್ತಿರುವ ಕಲಬುರ್ಗಿ ರೈತರುಈಸೂರಿನಲ್ಲಿ ಬ್ರಿಟೀಷರ ವಿರುದ್ಧ ನಡೆದ ಹೋರಾಟದಲ್ಲಿ ಗ್ರಾಮಸ್ಥರ ಬ್ರಿಟೀಷ್ ಸರ್ಕಾರದ ಇಬ್ಬರ ಅಧಿಕಾರಿಗಳನ್ನು ದೊಣ್ಣೆಯಿಂದ ಹೊಡೆದು ಸಾಯಿಸುತ್ತಾರೆ. ಹವಾಲ್ದಾರ್ ಮತ್ತು ಪೊಲೀಸ್ ಅಧಿಕಾರಿಯನ್ನು ಕೊಲ್ಲುತ್ತಾರೆ. ಈ ಘಟನೆ ನಂತರ ಬ್ರಿಟೀಷರು ಹಳ್ಳಿಗೆ ಅವರ ಮಿಲಿಟರಿ ಪಡೆ ನುಗ್ಗಿಸಿ ಸಾಕಷ್ಟು ಅನಾಹುತ ಮಾಡುತ್ತಾರೆ. ಹಳ್ಳಿಯ ಜನರ ವಿರುದ್ದ ದೌರ್ಜನ್ಯ ನಡೆಸುತ್ತಾರೆ. 5 ಮಂದಿ ಹೋರಾಟಗಾರನ್ನು  ಗಲ್ಲಿಗೇರಿಸುತ್ತಾರೆ.

ಕೆಲ ತಿಂಗಳುಗಳ ಸೆರೆ ವಾಸದ ನಂತರ ಈಸೂರು ಗ್ರಾಮದ 12 ಜನರು ಸೆರೆ ವಾಸದ ಶಿಕ್ಷೆಯಿಂದ ಬಿಡುಗಡೆಯಾಗುತ್ತಾರೆ. ಇದರಲ್ಲಿ ಹುಚ್ಚರಾಯಪ್ಪ ಸಹ ಒಬ್ಬರಾಗಿದ್ದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದ ಹುಚ್ಚರಾಯಪ್ಪ ಅವರನ್ನು ದೇಶದ ಪ್ರಧಾನಮಂತ್ರಿಯಿಂದ ತಾಮ್ರ ಪತ್ರ ಗೌರವ ಸ್ವೀಕರಿಸಿದ್ದಾರೆ. ಹುಚ್ಚರಾಯಪ್ಪ ಅವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಸರ್ಕಾರಗಳು ಗೌರವಿಸಿವೆ. ಹುಚ್ಚುರಾಯಪ್ಪನವರ ಅಂತ್ಯ ಕ್ರಿಯೆ ಇಂದು ಈಸೂರು ಗ್ರಾಮದಲ್ಲಿ ನಡೆಯಿತು.
Published by: G Hareeshkumar
First published: August 18, 2020, 9:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading