HOME » NEWS » District » ENGINEER FINDS A LIVING IN HIS FARM AT KARWAR AFTER LOSING JOB DKK SNVS

ಗೋವಾದಲ್ಲಿ ಎಂಜಿನಿಯರ್ ಆಗಿದ್ದ ಕಾರವಾರ ಯುವಕನದ್ದು ಈಗ ಅಪ್ಪಕ ಕೃಷಿ ಕಾಯಕ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಖಾರ್ಗಾ ಗ್ರಾಮದ ಲಕ್ಷ್ಮೀಕಾಂತ ನಾಯ್ಕ್ ಲಾಕ್ಡೌನ್ ವೇಳೆ ಎಂಜಿನಿಯರಿಂಗ್ ಕೆಲಸ ಕಳೆದುಕೊಂಡು ಹತಾಶನಾಗಿದ್ದಾಗ ಬದುಕಿಗೆ ಹೊಸ ಬೆಳಕಾಗಿದ್ದು ಆತನ ಕೃಷಿ ಭೂಮಿ.

news18-kannada
Updated:October 29, 2020, 2:58 PM IST
ಗೋವಾದಲ್ಲಿ ಎಂಜಿನಿಯರ್ ಆಗಿದ್ದ ಕಾರವಾರ ಯುವಕನದ್ದು ಈಗ ಅಪ್ಪಕ ಕೃಷಿ ಕಾಯಕ
ಲಕ್ಷ್ಮೀಕಾಂತ ನಾಯ್ಕ್
  • Share this:
ಕಾರವಾರ: ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್ ಡೌನ್​ನಿಂದ ಜನರು ಸಾಕಷ್ಟು ಉತ್ತಮ ಪಾಠ ಕಲಿತಿದ್ದಾರೆ. ಕೆಲವರ ಬದುಕು ಮೂರಾಬಟ್ಟೆ ಆಗಿದೆ. ಸಾಕಷ್ಟು ಕಷ್ಟದ ದಿನದಲ್ಲಿ ಒಂದಿಷ್ಟು ಜನ ಬದುಕಿಗಾಗಿ ಹೊಸ ದಾರಿ ಆರಂಭಿಸಿದ್ದಾರೆ. ಈ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಖಾರ್ಗಾ ಗ್ರಾಮದ ವೈಲವಾಡದ ಯುವಕ ಲಕ್ಷಿಕಾಂತ ನಾಯ್ಕ್ ಕೂಡಾ ಒಬ್ಬ. ಲಕ್ಷ್ಮಿಕಾಂತ ನಾಯ್ಕ್ ಎಂಜಿನಿಯರ್ ಆಗಿ ಗೋವಾ ರಾಜ್ಯದ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂತು. ಕೂಡಲೇ ತನ್ನ ತವರು ಗ್ರಾಮ ವೈಲವಾಡಕ್ಕೆ ಬಂದು ಕಳೆದ ಹತ್ತು ವರ್ಷದಿಂದ ಬಂಜರು ಬಿದ್ದ ಎರಡು ಎಕರೆ ಭೂಮಿಯಲ್ಲಿ ಭತ್ತ ಬೆಳೆದು ಉತ್ತಮ ಇಳುವರಿ ಪಡೆದುಕೊಂಡಿದ್ದಾನೆ. ಇನ್ನೇನು ನಾಲ್ಕೈದು ದಿನದಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಹೊಸ ಸಾಧನೆಯ ಹಾದಿಗೆ ಬಲ ಬಂದಂತಾಗಿದೆ.

ಅಕ್ಕಪಕ್ಕದ ಪರಿಚಯದವರಿಂದ ಭತ್ತದ ಬೀಜ ಪಡೆದು ಬಿತ್ತನೆ ಮಾಡಿ ಸ್ವತಃ ತಾನೆ ಭತ್ತದ ಗದ್ದೆಯಲ್ಲಿ ದುಡಿದು ಈ ಸಾಧನೆ ಮಾಡಿದ್ದಾನೆ. ಭತ್ತದ ಬೆಳೆಯ ಜೊತೆಗೆ ಜೇನು ಸಾಕಾಣಿಕೆ ಕೂಡಾ ಮಾಡುತ್ತಿದ್ದು ಇಂಜಿನಿಯರಿಂಗ್ ಹುದ್ದೆ ತೊರೆದು ಪ್ರಗತಿಪರ ಕೃಷಿಕನಾಗುವತ್ತ ಹಾದಿ ತುಳಿದಿದ್ದಾನೆ. ಇದು ಲಾಕ್ ಡೌನ್ ತನಗೆ ಕಲಿಸಿದ ಪಾಠ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಲಕ್ಷ್ಮಿಕಾಂತ ಮುಂದಿನ ದಿನದಲ್ಲಿ ಇನ್ನಷ್ಟು ಹೊಸ ಬೆಳೆ ಬೆಳೆಯುವ ಆಸಕ್ತಿಯೊಂದಿಗೆ ಕೃಷಿಯಲ್ಲಿ ಸಾಧನೆ ಮಾಡುವ ಬಯಕೆ ಹೊಂದಿದ್ದಾನೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಚಾಮರಾಜನಗರದ ಆರೋಪಿಗೆ ಜೀವಾವಧಿ ಶಿಕ್ಷೆ

ಕೃಷಿಕನಾಗುವ ಹಂಬಲ:

ಲಕ್ಷ್ಮಿಕಾಂತ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಗೋವಾದಿಂದ ಕಾರವಾರದ ವೈಲವಾಡದಲ್ಲಿರುವ ತನ್ನ ಮನೆಗೆ ಬಂದಾಗ ಕೆಲವು ದಿನ ಖಿನ್ನತೆಗೆ ಒಳಗಾಗಿದ್ದ. ಮುಂದಿನ ಜೀವಕ್ಕೆ ದಾರಿ ಏನು ಎಂಬ ಬಗ್ಗೆ ಯೋಚನೆಗಳು ಕಾಡತೊಡಗಿದ್ದವು. ಈ ಸಮಯದಲ್ಲಿ ಕಂಡಿದ್ದು ಕಳೆದ ಹತ್ತು ವರ್ಷಗಳಿಂದ ಬಂಜರು ಬಿದ್ದಿದ ಕೃಷಿ ಭೂಮಿ. ಹತ್ತಿರದ ಹಿರಿಯ ರೈತರ ಹತ್ತಿರ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡು ತನ್ನ ಎರಡು ಎಕೆರೆ ಜಾಗದಲ್ಲಿ ಭತ್ತದ ಬೀಜ ಬಿತ್ತನೆ ಮಾಡಿ ಕೃಷಿಯ ಬದುಕು ಕಟ್ಟಿಕೊಳ್ಳುವ ದಾರಿ ಕಂಡುಕೊಂಡ. ಜೂನ್ ಜುಲೈನಲ್ಲಿ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಸಸಿಯಾಗಿ ಈಗ ಉತ್ತಮ ಬೆಳೆ ಬಂದಿದೆ. ಮುಂದಿನ ಕೆಲವೇ ದಿನದಲ್ಲಿ ಬೆಳೆ ಬಂದ ಭತ್ತದ ಪೈರನ್ನ ಕಟಾವು ಮಾಡಲಿದ್ದಾರೆ. ಲಾಕ್ ಡೌನ್​ನ ಎರಡು ತಿಂಗಳುಗಳ ಕಾಲ ಸಾಕಷ್ಟು ಸಮಸ್ಯೆ ಎದುರಿಸಿದ್ದೆ. ಈಗ ಕೃಷಿಯಲ್ಲಿ ಭತ್ತದ ಬೆಲೆ ಕೈ ಹಿಡಿದಿದೆ. ಮುಂದೆ ಇದೇ ಜಾಗದಲ್ಲಿ ಇನ್ನೂ ಮಿಶ್ರ ಬೆಳೆ ಬೆಳೆದು ಉತ್ತಮ ಬೆಳೆ ತೆಗೆಯುವ ಮಹಾದಾಸೆ ಮತ್ತು ಗುರಿ ಹೊಂದಿದ್ದೆನೆ ಅಂತಾನೆ ಲಕ್ಷ್ಮಿಕಾಂತ ನಾಯ್ಕ್.

ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಉತ್ತಮ ಗಾಳಿಗಾಗಿ ಗಿಡನೆಟ್ಟು ಹಸಿರು ಪ್ರೇಮ ಮೆರೆದ​ ವೈದ್ಯರು

ಇಂಜಿನಿಯರ್ ಈಗ ರೈತ:ಕೊರೋನಾ ಮಾಹಾಮಾರಿ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿದೆ. ಒಂದು ದಿನವೂ ಹೊಲಗದ್ದೆ ನೋಡದ ಯುವ ಸಮುದಾಯ ಈಗ ಕೃಷಿ ಮಾಡುವತ್ತ ಒಲವು ತೋರುತ್ತಿದ್ದಾರೆ. ಇನ್ನೂ ಕೆಲವರು ಖಾಸಗಿ ಕಂಪನಿ ತೊರೆದು ಸ್ವಂತ ಉದ್ಯೋಗದತ್ತ ಮುಖ ಮಾಡಿದ್ದಾರೆ. ಹೀಗೆ ಕೊರೋನಾ ಮಾಹಾಮಾರಿ ಕೆಲವರ ಬದುಕು ಮೂರಾಬಟ್ಟೆ ಮಾಡಿದರೆ, ಮತ್ತಿನ್ನು ಕೆಲವರಿಗೆ ಬದುಕಿನ ಹೊಸ ದಾರಿ ಕೊಟ್ಟಿದೆ. ಲಕ್ಷ್ಮಿಕಾಂತ ಕೂಡಾ ಕೊರೋನಾ ದಿಂದ ಬದುಕಲು ಹೊಸ ದಾರಿ ಕಂಡುಕೊಂಡಿದ್ದಾನೆ. ಜತೆಗೆ ಕಳೆದ ಹತ್ತು ವರ್ಷದಿಂದ ಬಂಜರು ಬಿದ್ದ ಕೃಷಿ ಭೂಮಿಯಲ್ಲಿ ಬೆಳೆ ತೆಗೆದ ಸಾಧನೆ ಕೂಡಾ ಸಲ್ಲುತ್ತದೆ ಈತನಿಗೆ. ಕೃಷಿ ಎಂದ್ರೆ ಮೂಗು ಮುರಿಯುವ ಯುವ ಸಮುದಾಯಕ್ಕೆ ಕೊರೋನಾ ಮಹಾಮಾರಿ ಕೃಷಿ ಪಾಠ ಕಲಿಸಿದಂತೂ ನಿಜ ಎನ್ನುವ ಮಾತನ್ನ ಸ್ವತಃ ಲಕ್ಷ್ಮಿಕಾಂತ ಒಪ್ಪಿಕೊಳ್ಳುತ್ತಿದ್ದಾನೆ. ಇಂಜಿನಿಯರ್ ಆಗಿ ಕೆಲಸ ಮಾಡುವಾಗ ಕೇವಲ ಆರ್ಥಿಕವಾಗಿ ಸಬಲನಾಗಿದ್ದೆ. ಆದ್ರೆ ಈಗ ಆರ್ಥಿಕತೆಯ ಜತೆ ಮಾನಸಿಕವಾಗಿಯೂ ಖುಷಿ ಇದೆ ಕೃಷಿಯಲ್ಲಿ ಆಂತಾನೆ ಈತ.

ಇದನ್ನೂ ಓದಿ: ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಯವರ ಅಮೋಘ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ

ಜೇನು ಸಾಕಾಣಿಕೆ:

ಕೇವಲ ಭತ್ತದ ಬೆಳೆ ಬೆಳೆದು ಸೈ ಎನಿಸಿಕೊಳ್ಳದ ಲಕ್ಷ್ಮಿಕಾಂತ ಮನೆಯಲ್ಲಿ ಜೇನು ಸಕಾಣಿಕೆ ಮಾಡುವ ಹೊಸ ದಾರಿಗೆ ನಾಂದಿ ಹಾಡಿದ್ದಾನೆ. ಜೇನನ್ನ ಹಿಡಿದು ತಂದು ಹೊಸ ತಂತ್ರಜ್ಞಾನ ಬಳಸಿ ಜೇನು ಸಾಕಾಣಿಕೆ ಮಾಡಲಾರಂಭಿಸಿದ್ದಾನೆ. ಜೇನು ಸಾಕಾಣಿಕೆ ಕೈ ಹಿಡಿದರೆ ಮುಂದೆ ಇದನ್ನ ದೊಡ್ಡ ಪ್ರಮಾಣದಲ್ಲಿ ಮುಂದುವರೆಸಿಕೊಂಡು ಹೋಗುವುದಾಗಿ ಹೇಳುತ್ತಿದ್ದಾನೆ. ಹೀಗೆ ಕೃಷಿಯಲ್ಲಿ ಹತ್ತು ಹಲವು ಗುರಿಯನ್ನ ಮುಂದಿಟ್ಟುಕೊಂಡು ಮುಂದೆ ಸಾಗುತ್ತಿರುವ ಈತ ಯುವ ಸಮುದಾಯಕ್ಕೆ ಆದರ್ಶ ಕೂಡ ಹೌದು.

ವರದಿ: ದರ್ಶನ್ ನಾಯ್ಕ್
Published by: Vijayasarthy SN
First published: October 29, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories