ಡ್ರಗ್ಸ್‌ ಜಾಲ; ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ, ಪ್ರಶ್ನೆ ಕೇಳಿ ಬಾಯ್‌ಬಿಡಿಸಲು ಸಾಧ್ಯವಾಗದೆ ಹೈರಾಣಾದ ಅಧಿಕಾರಿಗಳು

ವಿಚಾರಣೆ ವೇಳೆ ಪ್ರಕರಣದಲ್ಲಿ ಬಂಧಿತರಾಗಿರುವ ರವಿಶಂಕರ್, ರಾಹುಲ್, ಪ್ರಶಾಂತ್ ರಾಂಕಾ, ಲೂಮ್ ಪೆಪ್ಪರ್ ಸೈಮನ್ ಇವರುಗಳ ಸಂಪರ್ಕದ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಮುಂದಿಡಲಾಗಿದೆ. ಆದರೆ, ಪಾರ್ಟಿ ಸಮಯದಲ್ಲಿ ಭೇಟಿಯಾಗಿರಬಹುದು ನನಗೆ ನೆನಪಿಲ್ಲ ಎಂದು ರಾಗಿಣಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

news18-kannada
Updated:September 6, 2020, 4:45 PM IST
ಡ್ರಗ್ಸ್‌ ಜಾಲ; ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ, ಪ್ರಶ್ನೆ ಕೇಳಿ ಬಾಯ್‌ಬಿಡಿಸಲು ಸಾಧ್ಯವಾಗದೆ ಹೈರಾಣಾದ ಅಧಿಕಾರಿಗಳು
ನಟಿ ರಾಗಿಣಿ
  • Share this:
ಬೆಂಗಳೂರು (ಸೆಪ್ಟೆಂಬರ್‌ 06); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಡ್ರಗ್ಸ್‌ ಜಾಲವನ್ನು ಬುಡ ಸಮೇತ ಕೀಳಲು ಮುಂದಾಗಿರುವ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ನಟಿ ದ್ವಿವೇದಿಯನ್ನು ವಿಚಾರಣೆಗೆ ಕರೆದಿದ್ದರು. ಆದರೆ, ವಿಚಾರಣೆ ನಡೆಸಿದ ನಂತರ ಅಂದು ಸಂಜೆಯೇ ಆಕೆಯನ್ನು ಬಂಧಿಸಲಾಯಿತು. ಅಲ್ಲದೆ, ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿ ಮೂರು ದಿನಗಳ ಕಾಲ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಪಡೆಯಲಾಗಿತ್ತು. ಆದರೆ, ಪೊಲೀಸರು ವಶಕ್ಕೆ ಪಡೆದು ಎರಡು ದಿನಗಳಾದರೂ ಸಹ ವಿಚಾರಣೆ ವೇಳೆ ನಟಿ ರಾಗಿಣಿ ತುಟಿ ಬಿಚ್ಚುತ್ತಿಲ್ಲ. ವಿಚಾರಣೆಗೆ ಸಹಕರಿಸುತ್ತಿಲ್ಲ. ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡದೆ ಸತಾಯಿಸುತ್ತಿದ್ದಾರೆ. ಪರಿಣಾಮ ಪೊಲೀಶರು ಪ್ರಶ್ನೆ ಕೇಳಿಯೇ ಹೈರಾಣಾಗಿದ್ದಾರೆ ಎನ್ನಲಾಗುತ್ತಿದೆ.

ಭಾನುವಾರವಾದ ಇಂದು ಪ್ರಕರಣದ ತನಿಖಾಧಿಕಾರಿ ಅಂಜುಮಾಲಾ ಮತ್ತು ಪುನೀತ್ ನಟಿ ರಾಗಿಣಿಗೆ ಕಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸತತ ಮೂರು ಗಂಟೆಗಳ ಕಾಲ ನಿರಂತರವಾಗಿ ಪ್ರಶ್ನಿಸಿದ್ರೂ ರಾಗಿಣಿ ಮಾತ್ರ ಕಮಕ್ ಕಿಮಕ್ ಎನ್ನದೆ ಸುಮ್ಮನೆ ಕುಳಿತಿದಿದ್ದರು ಎಂದು ನ್ಯೂಸ್‌18ಗೆ ಉನ್ನತ ಮೂಲದ ಮಾಹಿತಿ ದೊರೆತಿದೆ.

ವಿಚಾರಣೆ ವೇಳೆ ಪ್ರಕರಣದಲ್ಲಿ ಬಂಧಿತರಾಗಿರುವ ರವಿಶಂಕರ್, ರಾಹುಲ್, ಪ್ರಶಾಂತ್ ರಾಂಕಾ, ಲೂಮ್ ಪೆಪ್ಪರ್ ಸೈಮನ್ ಇವರುಗಳ ಸಂಪರ್ಕದ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಮುಂದಿಡಲಾಗಿದೆ. ಇಷ್ಟಕ್ಕೂ ಈ ಎಲ್ಲರನ್ನೂ ನಟಿ ರಾಗಿಣಿ ಭೇಟಿಯಾಗಿರುವುದಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡೇ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಆದರೆ, "ಪಾರ್ಟಿ ಸಮಯದಲ್ಲಿ ಭೇಟಿಯಾಗಿರಬಹುದು ನನಗೆ ನೆನಪಿಲ್ಲ" ಎಂದು ರಾಗಿಣಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮಾದಾವರ ಬಳಿಯ ಅತಿದೊಡ್ಡ ಕೋವಿಡ್‌ ಕೇರ್‌ ಮುಚ್ಚಲು ನಿರ್ಧಾರಿಸಿದ ಬಿಬಿಎಂಪಿ; ಸಾರ್ವಜನಿಕ ವಲಯದಿಂದ ಟೀಕೆ

ಕಳೆದ ಎರಡೂ ದಿನಗಳಿಂದ ನಟಿ ರಾಗಿಣಿ ಪೊಲೀಸ್‌ ವಿಚಾರಣೆಗೆ ಸರಿಯಾಗಿ ಸ್ಪಂದಿಸದೆ ಸತಾಯಿಸುತ್ತಿದ್ದಾರೆ. ನಾಳೆಗೆ ಸೋಮವಾರಕ್ಕೆ ಈ ಮೂರು ದಿನದ ಪೊಲೀಸ್‌ ಕಸ್ಟಡಿ ಮುಗಿಯಲಿದೆ. ಹೀಗಾಗಿ ಅಧಿಕಾರಿಗಳು ಇಂದು ಶತಾಯಗತಾಯ ಅವರ ಬಾಯಿ ಬಿಡಿಸುವ ಪ್ರಯತ್ನ ಮಾಡಲಿದ್ದು, ಇಂದು ಸಂಜೆ ತನಿಖಾಧಿಕಾರಿ ಅಂಜುಮಾಲಾ ಮತ್ತೊಮ್ಮೆ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ನಟಿ ರಾಗಿಣಿಯ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲದೆ, ನಾಳೆ ಸಂಜೆ ವೇಳೆಗೆ ನಟಿಯನ್ನು ಮತ್ತೊಮ್ಮೆ ನ್ಯಾಯಾಧೀಶರ ಎದುರು ಹಾಜರುಪಡಿಸಿ ಮತ್ತೆ ಕೆಲ ದಿನಗಳ ಕಾಲ ರಾಗಿಣಿಯನ್ನು ವಿಚಾರಣೆ ಸಲುವಾಗಿ ಪೊಲೀಸರ ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಶರು ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
Published by: MAshok Kumar
First published: September 6, 2020, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading