ಬೆಳಗಾವಿಯಲ್ಲಿ ಹಾಡ ಹಗಲೇ ವಿವಾಹಿತ ಯುವತಿಯರಿಬ್ಬ ಬರ್ಬರ ಹತ್ಯೆ..!

ಇತ್ತೀಚಿಗೆ ಇಬ್ಬರು ಮದುವೆಯಾಗಿದ್ದ, ಮಚ್ಛೆ ಗ್ರಾಮದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಿದ್ದರು. ಸಂಜೆ ಸಮಯದಲ್ಲಿ ಮನೆಯ ಸ್ವಲ್ಪವೇ ದೂರದಲ್ಲಿ ವಾಕಿಂಗ್ ಹೋಗಿದ್ದರು. ಈ ವೇಳೆಯಲ್ಲಿ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

news18-kannada
Updated:September 26, 2020, 8:26 PM IST
ಬೆಳಗಾವಿಯಲ್ಲಿ ಹಾಡ ಹಗಲೇ ವಿವಾಹಿತ ಯುವತಿಯರಿಬ್ಬ ಬರ್ಬರ ಹತ್ಯೆ..!
ಸಾಂದರ್ಭಿಕ ಚಿತ್ರ.
  • Share this:
ಬೆಳಗಾವಿ (ಸೆಪ್ಟೆಂಬರ್,26)- ಬೆಳಗಾವಿಯಲ್ಲಿ ಹಾಡ ಹಗಲೇ ಯುವತಿಯರಿಬ್ಬರು ಬರ್ಬರ ಹತ್ಯೆ ಮಾಡಲಾಗಿದೆ.  ಮನೆಯಿಂದಲೇ ಸ್ವಲ್ಪ ದೂರದಲ್ಲಿ ವಾಕಿಂಗ್ ಅಂತ ಹೋಗಿದ್ದವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆಯನ್ನು ಕೈಗೆತುಕೊಂಡಿದ್ದಾರೆ. ಸಂಜೆ ಸಮಯದಲ್ಲಿ ವಾಕಿಂಗ್ ಹೋಗಿದ್ದ ಯುವತಿಯರಿಬ್ಬರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ  ಲಕ್ಷ್ಮೀ ನಗರದಲ್ಲಿ ಘಟನೆ ನಡೆದಿದೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ರೋಹಿಣಿ (21) ಹಾಗೂ ರಾಜಶ್ರೀ(21) ಭೀಕರವಾಗಿ ಹತ್ಯೆಯಾದ ನವ ವಿವಾಹಿತರು.

ಇತ್ತೀಚಿಗೆ ಇಬ್ಬರು ಮದುವೆಯಾಗಿದ್ದ, ಮಚ್ಛೆ ಗ್ರಾಮದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಿದ್ದರು. ಸಂಜೆ ಸಮಯದಲ್ಲಿ ಮನೆಯ ಸ್ವಲ್ಪವೇ ದೂರದಲ್ಲಿ ವಾಕಿಂಗ್ ಹೋಗಿದ್ದರು. ಈ ವೇಳೆಯಲ್ಲಿ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ಹಾಕಿ; ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ

ಪತ್ನಿಯರ ಹತ್ಯೆ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಇಬ್ಬರ ಪತಿಯವರು ರೋಧಿಸುವ ದೃಶ್ಯ ಮನಕಲಕುವಂತೆ ಇತ್ತು. ಸ್ಥಳಕ್ಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಶ್ವಾನದಳ ಸೇರಿ ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಬೈಕ್ ಮೇಲೆ ಬಂದ ದುಷ್ಕರ್ಮಿಗಳ ಪತ್ತೆಗೆ ಬಲೆಯನ್ನು ಬೀಸಲಾಗಿದೆ. ಹತ್ಯೆಗೆ ಕಾರಣ ಏನು ಎಂಬುದು ಇದೀಗ ನಿಗೂಢವಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ.
Published by: MAshok Kumar
First published: September 26, 2020, 8:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading