ಶಿವಮೊಗ್ಗದಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ ; ಬರೋಬ್ಬರಿ 102 ಕೆಜಿ ಜಿಂಕೆ ಮಾಂಸ ವಶ

ಬಂಧಿತ ಆರೋಪಿಗಳು ಶಿವಮೊಗ್ಗ ನಗರದ ಶ್ರೀರಾಮಪುರ ಬಡಾವಣೆ ನಿವಾಸಿಯಾದ ಜಿಂಕೆ ಮಂಜ, ಮತ್ತು ಮಲ್ಲಿಗೇನಹಳ್ಳಿ ನಿವಾಸಿಯಾದ ಉಮೇಶ್ ನಾಯ್ಕ್ ಎಂದು ಗುರುತಿಸಲಾಗಿದೆ.

news18-kannada
Updated:September 7, 2020, 8:18 PM IST
ಶಿವಮೊಗ್ಗದಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ ; ಬರೋಬ್ಬರಿ 102 ಕೆಜಿ ಜಿಂಕೆ ಮಾಂಸ ವಶ
ಇಬ್ಬರು ಆರೋಪಿಗಳು
  • Share this:
ಶಿವಮೊಗ್ಗ(ಸೆಪ್ಟೆಂಬರ್​. 07): ಶಿವಮೊಗ್ಗ ನಗರದಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ ಪೊಲೀಸರ ದಾಳಿ 102 ಕೆ.ಜಿ ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಆಟೋದಲ್ಲಿ ಆರೋಪಿಗಳು ಜಿಂಕೆ ಮಾಂಸ ಸಾಗಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಶಿವಮೊಗ್ಗದ ತುಂಗಾ ನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಂಗಾ ನಗರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ನೇತೃತ್ವದ ತಂದ ಆಟೋದಲ್ಲಿ ಜಿಂಕೆ ಸಾಗಾಣಿಕೆ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರ ಆರೋಪಿಗಳ ಬಂಧಿಸಲಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ನಾಗಚೌಡೇಶ್ವರಿ ದೇವಾಲಯದ ಬಳಿ ಆಟೋ ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಟೋದಲ್ಲಿ ಜಿಂಕೆ ಮಾಂಸ ದೊರೆತಿದೆ.

5 ಚೀಲದಲ್ಲಿ ಜಿಂಕೆ ಮಾಂಸವನ್ನು ತುಂಬಿಕೊಂಡು ಆಟೋದಲ್ಲಿ ಸಾಗಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಶಿವಮೊಗ್ಗ ನಗರದ ಶ್ರೀರಾಮಪುರ ಬಡಾವಣೆ ನಿವಾಸಿಯಾದ ಜಿಂಕೆ ಮಂಜ, ಮತ್ತು ಮಲ್ಲಿಗೇನಹಳ್ಳಿ ನಿವಾಸಿಯಾದ ಉಮೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ ತಾಲೂಕಿನ ಆಯನೂರು ಬಳಿ ಚೆನ್ನಳ್ಳಿ ಅರಣ್ಯ ಪ್ರದೇಶದಲ್ಲಿ ಇವರು ಜಿಂಕೆ ಭೇಟೆಯಾಡಿ, ನಂತರ ಅಲ್ಲಿಂದ ಜಿಂಕೆ ಮಾಂಸ ತಂದಿದ್ದರು ಎನ್ನಲಾಗಿದೆ.

ಇದು ಕೇವಲ ಇವರಿಬ್ಬರೇ ಸೇರಿಕೊಂಡು ಮಾಡಿರುವುದಲ್ಲ, ಇವರ ಜೊತೆ ಇನ್ನೂ ಹಲವರು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪ್ರವಾಹದಿಂದ ರಾಜ್ಯಕ್ಕೆ 8071 ಕೋಟಿ ರೂ ನಷ್ಟ : ಕೇಂದ್ರದ ಅಧ್ಯಯನ ತಂಡಕ್ಕೆ ಸಿಎಂ ಯಡಿಯೂರಪ್ಪ ಮಾಹಿತಿ

ಇನ್ನು ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹ ಜಿಂಕೆ ಮಾಂಸ ಮಾರಾಟ ಮಾಡಲು ಯತ್ನ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಿಂಕೆ ಬೇಟೆಯಾಡಿ ಮಾಂಸದ ಜೊತೆಗೆ ಚರ್ಮ ಮಾರಾಟ ಮಾಡಲು ಪ್ರಯತ್ನ ನಡೆಸುತ್ತಿದ್ದ ವೇಳೆ ಸಿಕ್ಕಿ ಬಿದಿದ್ದಾರೆ.ಅನಿಲ್ ಹಾಗೂ ಹನುಮಂತ ಬಂಧಿತ ಆರೋಪಿಗಳಾಗಿದ್ದಾರೆ. ಭಾನುವಾರ ಜಿಂಕೆಗಳನ್ನು ಬೇಟೆಯಾಡಿ, ಸುಮಾರು 45 ಕೆಜಿಯಷ್ಟು ಮಾಂಸವನ್ನು ಮಾರಾಟ ಮಾಡಲು ಯತ್ನ ಮಾಡಿದಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾರೆ. ಬಂಧಿತ ಆರೋಪಿಗಳಿಂದ ಜಿಂಕೆಯ ತಲೆ ಹಾಗೂ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by: G Hareeshkumar
First published: September 7, 2020, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading