ಸಿಎಂ ಯಡಿಯೂರಪ್ಪ ಮಂಡ್ಯದಿಂದ ಶಿವಮೊಗ್ಗಕ್ಕೆ ನಿಂಬೆಹಣ್ಣು ಮಾರುವುದಕ್ಕೆ ಬಂದವರು ; ಬೇಳೂರು ಗೋಪಾಲಕೃಷ್ಣ

ಹಿಂದೆ ಚೆಕ್ ಮೂಲಕ ಹಣ ಪಡೆದು ಸಿಎಂ ಬಿಎಸ್​ವೈ ಜೈಲಿಗೆ ಹೋಗಿದ್ದರು. ಈಗ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಇದೊಂದು ನಾಚಿಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

news18-kannada
Updated:September 29, 2020, 7:42 PM IST
ಸಿಎಂ ಯಡಿಯೂರಪ್ಪ ಮಂಡ್ಯದಿಂದ ಶಿವಮೊಗ್ಗಕ್ಕೆ ನಿಂಬೆಹಣ್ಣು ಮಾರುವುದಕ್ಕೆ ಬಂದವರು ; ಬೇಳೂರು ಗೋಪಾಲಕೃಷ್ಣ
ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲ ಕೃಷ್ಣ
  • Share this:
ಶಿವಮೊಗ್ಗ(ಸೆಪ್ಟೆಂಬರ್​. 29): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ರೈತ ನಾಯಕರಲ್ಲ, ಮಂಡ್ಯದಿಂದ ಶಿವಮೊಗ್ಗಕ್ಕೆ ರೈತ ನಾಯಕರಾಗಿ ಬರಲಿಲ್ಲ, ರೈತರು ಬೆಳೆದ ನಿಂಬೆಹಣ್ಣು ಮಾರಾಟಕ್ಕೆ ಬಂದವರು ಎಂದು ಸಿಎಂ ಬಿಎಸ್ ವೈ ವಿರುದ್ದ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲ ಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಭೂ ಕಾಯ್ದೆ ತಿದ್ದುಪಡಿ ಕುರಿತು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದೆ ಚೆಕ್ ಮೂಲಕ ಹಣ ಪಡೆದು ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು, ಈಗ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ ಎಂದು ಆರೋಪಿಸಿದರು. ಶಿವಮೊಗ್ಗದ ಕಾಂಗ್ರೇಸ್ ಕಚೇರಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿ ಯಡೂಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಕಿಡಿಕಾರಿದರು. ಸಿಎಂ ಬಿಎಸ್ ವೈ ಮತ್ತು ಅವರ ಮಕ್ಕಳು ಹಾಗೂ ಸಚಿವ ಅಶೋಕ್ ಕಾರ್ಪೋರೇಟರ್ ಕಂಪನಿಯ ಗುಲಾಮರು. ಅವರಿಗೆ ಅನುಕೂಲ ಮಾಡಿಕೊಡಲು ಭೂ ಸುಧಾರಾಣ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಆರೋಪಿಸಿದರು.

ಸಿಎಂ ಯಡಿಯೂರಪ್ಪನವರ ಮಕ್ಕಳಾದ ಬಿ ವೈ ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಹಾಗೂ ಕುಟುಂಬದವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಮುಂದೆ ಅಧಿಕಾರ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಈ ಹಿನ್ನೆಲೆಯಲ್ಲಿ ನಿರಂತರವಾಗಿ  ಭ್ರಷ್ಟಾಚಾರದಲ್ಲಿ ಸಿಎಂ ಮತ್ತು ಅವರ ಕುಟುಂಬ ತೊಡಗಿದೆ. ಹಿಂದೆ ಚೆಕ್ ಮೂಲಕ ಹಣ ಪಡೆದು ಸಿಎಂ ಬಿಎಸ್​ವೈ ಜೈಲಿಗೆ ಹೋಗಿದ್ದರು. ಈಗ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಇದೊಂದು ನಾಚಿಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

ಇನ್ನು ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ. ಸರ್ಕಾರ ಬಂದು ಒಂದು ವರ್ಷ ಆಗಿದೆ. ಇನ್ನೂ ಕಾಯ್ದೆ ಯಾಕೆ ಜಾರಿಯಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಮುಂದಿನ ನಾಲ್ಕು ತಿಂಗಳಲ್ಲಿ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ದರು ; ಸೋದರ ಮಾವ ಲಿಂಗರಾಜ್ ಪಾಟೀಲ್ ಹೇಳಿಕೆ

ಈಗ ಸಚಿವ ಈಶ್ವರಪ್ಪನವರು ಇದರ ಬಗ್ಗೆ ಮಾತನಾಡುತ್ತಲೇ ಇಲ್ಲ. ಬಿಜೆಪಿ ಇವರೆಲ್ಲರೂ ಸೀರೆ ತೊಟ್ಟುಕೊಳ್ಳಬೇಕು ಎಂದು ಬೇಳೂರು ಹೇಳಿದ್ದಾರೆ. ಸಚಿವ ಈಶ್ವರಪ್ಪನವರಿಗೆ ಮತ್ತು  ಅವರ ಮಗನಿಗೆ ಮಾತ್ರ ಅಧಿಕಾರ ಬೇಕು. ಅವರು ಯಾರಿಗೂ ಅಧಿಕಾರ ಕೊಡುವುದಿಲ್ಲ. ನಿಮ್ಮ ಸರಕಾರಕ್ಕೆ ತಾಕತ್ತು ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿರು.

ಸಂಸದ ತೇಜಸ್ವಿ ಸೂರ್ಯ ರಾಜ್ಯಕ್ಕೆ ಭಯೋತ್ಪಾದನೆ ಪಟ್ಟ ಕಟ್ಟಿದ್ದಾರೆ. ರಾಜ್ಯದ ಹೆಸರು ವಿನಾಕಾರಣ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ಅವರ ನಡವಳಿಕೆ ಸರಿಪಡಿಸಿ ಕೊಳ್ಳಬೇಕು ಎಂದು ಗೋಪಾಲಕೃಷ್ಣ ಆಗ್ರಹಿಸಿದರು.
Published by: G Hareeshkumar
First published: September 29, 2020, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading