ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆಹಾನಿ; ಕಂಗಾಲಾಗಿರುವ ಚಿಕ್ಕಮಗಳೂರು ರೈತ

ಕಳೆದ ವರ್ಷವೂ ಮಹಾಮಳೆಗೆ ಕಾಫಿ ತೋಟ ಸೇರಿದಂತೆ ಗದ್ದೆಗಳು ಮುಳುಗಡೆಯಾಗಿದ್ದವು. ಆಗ ಇಡೀ ಊರನ್ನೇ ಸ್ಥಳಾಂತರ ಮಾಡುವ ಭರವಸೆಯನ್ನ ಜಿಲ್ಲಾಡಳಿತ, ಜನಪ್ರತಿನಿಧಿಗಳು ನೀಡಿದ್ದರು. ಆದ್ರೆ ಕೊಟ್ಟ ಮಾತನ್ನ ಮರೆತಿರುವ ಅಧಿಕಾರಿವರ್ಗ ಅಲೇಖಾನ್ ಹೊರಟ್ಟಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳನ್ನ ಕಗ್ಗತ್ತಲಲ್ಲಿ ದೂಡಿವೆ.

news18-kannada
Updated:September 27, 2020, 7:15 AM IST
ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆಹಾನಿ; ಕಂಗಾಲಾಗಿರುವ ಚಿಕ್ಕಮಗಳೂರು ರೈತ
ಆನೆ ದಾಳಿಗೆ ಹಾಳಾಗಿರುವ ತೋಟ.
  • Share this:
ಚಿಕ್ಕಮಗಳೂರು: ಮೊದಲೇ ಕಾಫಿನಾಡ ಮಲೆನಾಡ ಭಾಗದ ಜನರು ಜೀವನ ಮಳೆಯಿಂದ ಮೂರಾಬಟ್ಟೆಯಾಗಿದೆ. ಇನ್ನೇನು ಮಳೆ ಆರ್ಭಟ ಮುಗೀತು ಅಲ್ಪ ಸ್ವಲ್ಪನಾದ್ರೂ ಬೆಳೆಯನ್ನ ಉಳಿಸಿಕೊಳ್ಳಬೇಕು ನಂಬಿಕೊಂಡಿದ್ದ ರೈತರಿಗೆ ಆಶಾಭಂಗವಾಗಿದೆ. ಕಾಫಿ ತೋಟ, ಏಲಕ್ಕಿ, ಅಡಿಕೆ ಸೇರಿದಂತೆ ನಾಟಿ ಮಾಡಿದ ಭತ್ತದ ಗದ್ದೆಗಳು ಕೂಡ ಉಡೀಸ್ ಆಗಿದೆ. ಅಷ್ಟಕ್ಕೂ ಈ ಬಾರಿ ರೈತರ ಬದುಕಲ್ಲಿ ಆಟವಾಡ್ತಿರೋದು ಮಳೆಯಲ್ಲ, ಬದಲಾಗಿ ಕಾಡಾನೆಗಳ ಗ್ಯಾಂಗ್.!  ಕಾಡಾನೆಗಳ ಆರ್ಭಟಕ್ಕೆ ಮಲೆನಾಡಿನರಗು ಬೆಚ್ಚಿಬಿದ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿ, ಮೇಗೂರು, ಮಲೆಮನೆ, ಜಾವಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಹೇಳತೀರದಾಗಿದೆ. ಈ ಭಾಗದಲ್ಲಿ ಪ್ರತಿನಿತ್ಯ ರಾತ್ರಿಯ ವೇಳೆ ಕಾಫಿತೋಟಗಳ ಮೇಲೆ ದಾಳಿ ಮಾಡುವ ಕಾಡಾನೆಗಳ ಗ್ಯಾಂಗ್ ತೋಟದಲ್ಲಿ, ಕಾಫಿ, ಅಡಿಕೆ, ಏಲಕ್ಕಿ, ಬಾಳೆ ಸೇರಿದಂತೆ ಎಲ್ಲಾ ಬೆಳೆಗಳನ್ನ ತಿಂದು ಹಾಕ್ತಿವೆ. ಅದು ಒಂದಲ್ಲ ಎರಡಲ್ಲ, ಹತ್ತಕ್ಕೂ ಹೆಚ್ಚು ಕಾಡಾನೆಗಳ ಗ್ಯಾಂಗ್ ನೋಡಿ ರೈತರು ಆತಂಕಕ್ಕೀಡಾಗಿದ್ದಾರೆ. ನಾವು ಯಾವ ರೀತಿ ಬೆಳೆಗಳನ್ನ ಉಳಿಸಿಕೊಳ್ಳೋದು ಅಂತಾ ಸ್ಥಳೀಯರು ಕಂಗಲಾಗಿ ಹೋಗಿದ್ದಾರೆ. ಕೇವಲ ಕಾಫಿ ತೋಟವಲ್ಲದೇ ಗದ್ದೆಗಳ ಮೇಲೂ ದಾಳಿ ಮಾಡಿರೋ ಗಜಪಡೆ, ನಾಟಿ ಮಾಡಿರೋ ಭತ್ತದ ಸಸಿಯನ್ನ ಸಂಪೂರ್ಣ ನಾಶ ಮಾಡಿದೆ.

ಇತ್ತೀಚಿಗಂತೂ ಪ್ರತಿನಿತ್ಯ ಕಾಡಾನೆಗಳ ಸಮಸ್ಯೆ ಆಗ್ತಿರೋದ್ರಿಂದ ರೈತರು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿಯ ಪ್ರವಾಹದಲ್ಲಿ ಇಡೀ ಊರಿನ ಜನರೇ ಹೊರಗಡೆ ಬರಲಾರದೇ ಸಂಕಷ್ಟದಲ್ಲಿ ಸಿಲುಕಿದ್ರು. ಕೊನೆಗೆ ಅಲೇಖಾನ್ ಹೊರಟ್ಟಿ ಗ್ರಾಮಕ್ಕೆ ಹೋಗಲು ಭಾರತೀಯ ಸೇನೆಯೇ ಬರಬೇಕಾಗಿತ್ತು.

ಕಳೆದ ವರ್ಷವೂ ಮಹಾಮಳೆಗೆ ಕಾಫಿ ತೋಟ ಸೇರಿದಂತೆ ಗದ್ದೆಗಳು ಮುಳುಗಡೆಯಾಗಿದ್ದವು. ಆಗ ಇಡೀ ಊರನ್ನೇ ಸ್ಥಳಾಂತರ ಮಾಡುವ ಭರವಸೆಯನ್ನ ಜಿಲ್ಲಾಡಳಿತ, ಜನಪ್ರತಿನಿಧಿಗಳು ನೀಡಿದ್ದರು. ಆದ್ರೆ ಕೊಟ್ಟ ಮಾತನ್ನ ಮರೆತಿರುವ ಅಧಿಕಾರಿವರ್ಗ ಅಲೇಖಾನ್ ಹೊರಟ್ಟಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳನ್ನ ಕಗ್ಗತ್ತಲಲ್ಲಿ ದೂಡಿವೆ.

ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ಹಾಕಿ; ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ

ಆನೆಗಳು ಕೂಡ ನಮ್ಮಂತೆ ಪ್ರಾಣಿಗಳು, ಒಂದು ಅವುಗಳನ್ನ ಸ್ಥಳಾಂತರ ಮಾಡಿ ಇಲ್ಲಾ ನಮ್ಮನ್ನ ಸ್ಥಳಾಂತರ ಮಾಡಿ ಅನ್ನೋದು ಈ ಭಾಗದ ಜನರ ಆಗ್ರಹ. ಆದ್ರೆ ಇದ್ಯಾವ್ದರ ಬಗ್ಗೆ ತಲೆಕೆಡಿಸಿಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಬಗ್ಗೆ ಗಮನವೇ ಹರಿಸ್ತಾ ಇಲ್ಲ. ಈ ಕುರಿತು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದ್ರೆ ಯಾವಾಗ್ಲೋ ಬರ್ತಾರೆ, ಎಲ್ಲೋ ನಿಂತು ಪಟಾಕಿ ಸಿಡಿಸಿ ಹೋಗ್ತಾರೆಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ರೈತರನ್ನ ಒಂದೆಡೆ ಮಳೆ, ಮತ್ತೊಂದೆಡೆ ಕಾಡಾನೆಗಳು ಅರ್ಧ ಜೀವ ಮಾಡ್ತಿದ್ರೆ, ಸರ್ಕಾರ-ಅಧಿಕಾರಿಗಳು-ಜನಪ್ರತಿನಿಧಿಗಳು ಜೀವಂತ ಹೆಣ ಮಾಡ್ತಿದ್ದಾರೆ. ಹಾಗಾಗಿ, ಸ್ಥಳೀಯರು ಒಂದು ನಮ್ಮನ್ನ ಈ ಊರಿಂದ ಕಳಿಸಿ, ಇಲ್ಲ ಕಾಡಾನೆಗಳನ್ನ ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Published by: MAshok Kumar
First published: September 27, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading