ಇಂದಿನಿಂದ ವಾರದ ಎಲ್ಲಾ ದಿನಗಳಲ್ಲೂ ಮಲೆಮಹದೇಶ್ವರನ ದರ್ಶನಕ್ಕೆ ಅವಕಾಶ

ಸೋಮವಾರದಿಂದ ಬೆಳಿಗ್ಗೆ 4 ಗಂಟೆ,  ಬೆಳಿಗ್ಗೆ‌ 10.30 ಹಾಗು ಸಂಜೆ ಗಂಟೆಗೆ ಮಲೆಮಹದೇಶ್ವರನಿಗೆ ಅಭಿಷೇಕ ನಡೆಯಲಿದೆ. ಆದರೆ, ದೇವಾಲಯದ‌ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ‌ ಪಡೆಯಬಹುದು

news18-kannada
Updated:August 2, 2020, 9:21 AM IST
ಇಂದಿನಿಂದ ವಾರದ ಎಲ್ಲಾ ದಿನಗಳಲ್ಲೂ ಮಲೆಮಹದೇಶ್ವರನ ದರ್ಶನಕ್ಕೆ ಅವಕಾಶ
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ
  • Share this:
ಚಾಮರಾಜನಗರ(ಆಗಸ್ಟ್ .02): ಮಲೆಮಹದೇಶ್ವರನ ದರ್ಶನಕ್ಕೆ ವಿಧಿಸಲಾಗಿದ್ದ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ, ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ಭಕ್ತರು ಇನ್ನು ಮುಂದೆ ವಾರದ ಎಲ್ಲಾ ದಿನಗಳಲ್ಲೂ ಎಂದಿನಂತೆ ಮಾದಪ್ಪನ ದರ್ಶನ ಮಾಡಬಹುದು.

ಭಾನುವಾರದ ಲಾಕ್ ಡೌನ್ ತೆರವುಗೊಳಿಸಿರುವುದರಿಂದ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೇವಾಲಯ ತೆರೆದಿರುತ್ತದೆ. ನಾಳೆ ಸೋಮವಾರದಿಂದ ಬೆಳಿಗ್ಗೆ 4 ರಿಂದ ರಾತ್ರಿ‌‌ 10ರವರೆಗೆ ತೆರೆಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಲೈಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಸೋಮವಾರದಿಂದ ಬೆಳಿಗ್ಗೆ 4 ಗಂಟೆ,  ಬೆಳಿಗ್ಗೆ‌ 10.30 ಹಾಗು ಸಂಜೆ 7 ಗಂಟೆಗೆ ಮಲೆಮಹದೇಶ್ವರನಿಗೆ ಅಭಿಷೇಕ ನಡೆಯಲಿದೆ. ಆದರೆ, ದೇವಾಲಯದ‌ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಉತ್ಸವಗಳು ಇರುವುದಿಲ್ಲ. ಮಾಸ್ಕ್ ಧರಿಸಿಯೇ ಬರಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ‌ ಪಡೆಯಬಹುದು. ಪೂಜೆ ಮಾಡಿಸಬಹುದು. ಲಾಡು ಪ್ರಸಾದ ಮತ್ತು ಮಿಶ್ರ ಪ್ರಸಾದ ಮಾರಾಟ ವ್ಯವಸ್ಥೆ ಇದೆ.

ಇಂದು ಸಂಜೆ‌ 5 ಗಂಟೆಯಿಂದ ಭಕ್ತಾದಿಗಳು ರಾತ್ರಿ ತಂಗಲು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರಾಯೋಗಿಕವಾಗಿ ನಾಗಮಲೈ ಭವನದ ಕೊಠಡಿಗಳನ್ನು ನೀಡಲಾಗುವುದು. ದಾಸೋಹದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ‌ ಉಪಹಾರ ಪ್ರಸಾದ ವಿತರಣೆ ವ್ಯವಸ್ಥೆ ಇರಲಿದೆ ಎಲ್ಲೆಡೆ ಶುದ್ಧಕುಡಿಯುವ ನೀರಿನ‌ ಘಟಕಗಳು ಕಾರ್ಯ ನಿರ್ವಹಿಸಲಿದ್ದು, ಪ್ಲಾಸ್ಟಿಕ್ ಬಾಟಲ್ ತರಬಾರದು ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.

ಇದನ್ನೂ ಓದಿ : ಒಂದೇ ಗ್ರಾಮದಲ್ಲಿ 72 ಮಂದಿ ಕೊರೋನಾ ಸೋಂಕಿತರು : ಆತಂಕದಲ್ಲಿ ಗ್ರಾಮದ ಜನರು

ಲಾಕ್ ಡೌನ್ ಹಿನ್ನಲೆಯಲ್ಲಿ ಮಾರ್ಚ್ 20 ರಿಂದ ಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವರ ದರ್ಶನದಿಂದ ಭಕ್ತರು ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಮೇ. 29 ರಿಂದ ಆನ್ ಲೈನ್ ದರ್ಶನ ಸೌಲಭ್ಯ ಕಲ್ಪಿಸಲಾಗಿತ್ತು. ನಂತರ ಜೂನ್ 8 ರಿಂದ ಹಲವು ನಿರ್ಬಂಧಗಳೊಡನೆ  ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಆದರೆ, ಬೆಟ್ಟದಲ್ಲಿ ಉಳಿದುಕೊಳ್ಳುವಂತಿರಲಿಲ್ಲ, ಅಭಿಷೇಕ ಮಾಡಿಸುವಂತಿರಲಿಲ್ಲ.
ದರ್ಶನಕ್ಕೆ ಅವಕಾಶ ಮಾತ್ರ ಇತ್ತು. ಇದಾದ ನಂತರ ಅಮಾವಾಸ್ಯೆ ಹಿನ್ನಲೆಯಲ್ಲಿ ಜೂನ್ 19 ರಿಂದ 21 ರವರೆಗೆ ಹಾಗು ಭಾನವಾರದ ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರತಿ ಭಾನುವಾರಗಳಂದು ಸಹ ಭಕ್ತರ ಪ್ರವೇಶ  ನಿರ್ಬಂಧಿಸಲಾಗಿತ್ತು. ಆದರೆ  ಅನ್ ಲಾಕ್ 3.0 ಜಾರಿ ಹಿನ್ನಲೆಯಲ್ಲಿ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಿ ಮಲೆಮಹದೇಶ್ವರನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
Published by: G Hareeshkumar
First published: August 2, 2020, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading