ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್‌‌ಗೆ ಭೇಟಿ ನೀಡಿದ ಬೀದರ್ ಜಿಲ್ಲಾಧಿಕಾರಿ

ತಾವೇ ಪಿಪಿಇ ಕಿಟ್ ಧರಿಸಿದ್ದ ಬೀದರ್‌ ಜಿಲ್ಲಾಧಿಕಾರಿ ವೈದ್ಯರ ತಂಡದೊಂದಿಗೆ ಕೋವಿಡ್-19 ಸೊಂಕಿತರು ದಾಖಲಿರುವ ನಿಗದಿತ ಆಸ್ಪತ್ರೆಯನ್ನು ಪ್ರವೇಶಿಸಿದರು. ಅಲ್ಲಿನ ಐಸಿಯು-1 ಮತ್ತು ಐಸಿಯು-2 ವಾರ್ಡಗಳಲ್ಲಿ ಸಂಚರಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

news18-kannada
Updated:July 25, 2020, 4:22 PM IST
ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್‌‌ಗೆ ಭೇಟಿ ನೀಡಿದ ಬೀದರ್ ಜಿಲ್ಲಾಧಿಕಾರಿ
ಪಿಪಿಇ ಕಿಟ್‌ ಧರಿಸಿರುವ ಬೀದರ್‌ ಜಿಲ್ಲಾಧಿಕಾರಿ.
  • Share this:
ಬೀದರ್‌ (ಜುಲೈ 25); ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬ್ರಿಮ್ಸ್) ಬೋಧಕ ಆಸ್ಪತ್ರೆ ಸುಧಾರಣೆಗೆ ನಿರಂತರವಾಗಿ ಹತ್ತು ಹಲವಾರು ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಇಂದು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಐಸೋಲೇಷನ್ ವಾರ್ಡ್ ಒಳಗೂ ಪಿಪಿಇ ಕಿಟ್ ಧರಿಸಿ ಪರಿಶೀಲನೆ ನಡೆಸಿದರು.

ತಾವೇ ಪಿಪಿಇ ಕಿಟ್ ಧರಿಸಿ, ವೈದ್ಯರ ತಂಡದೊಂದಿಗೆ ಕೋವಿಡ್-19 ಸೊಂಕಿತರು ದಾಖಲಿರುವ ನಿಗದಿತ ಆಸ್ಪತ್ರೆಯನ್ನು ಪ್ರವೇಶಿಸಿದರು. ಅಲ್ಲಿನ ಐಸಿಯು-1 ಮತ್ತು ಐಸಿಯು-2 ವಾರ್ಡಗಳಲ್ಲಿ ಸಂಚರಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಕೆಲವು ರೋಗಿಗಳು ಜಿಲ್ಲಾಧಿಕಾರಿಗಳತ್ತ ಕೈ ಸನ್ನೆ ಮಾಡಿ ಆರೋಗ್ಯದಿಂದ ಇರುವುದಾಗಿ ಪ್ರತಿಕ್ರಿಯಿಸಿದರು. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾದ ತಮಗೆ ಆಸ್ಪತ್ರೆಯಿಂದ ಊಟ, ಉಪಹಾರ, ಚಿಕಿತ್ಸೆ ಮತ್ತು ಆರೈಕೆ ಎಲ್ಲವೂ ಸರಿಯಾಗಿ ಸಿಗುತ್ತಿದೆ ಎಂದು ಇನ್ನು ಕೆಲವರು ತಿಳಿಸಿದರು.

ಟ್ರಯಾಜ್‌ಗೆ ಭೇಟಿ: ಕೋವಿಡ್ ಮತ್ತು ಕೋವಿಡ್ ಅಲ್ಲದವರು ಯಾರೆಂದು ಗುರುತಿಸಲು ಗಂಟಲು ದ್ರವದ ಮಾದರಿ ಕಳುಹಿಸಿದ ಕೂಡಲೇ ವರದಿ ಬರುವವರೆಗೆ ಅಂತವರನ್ನು ವಿಂಗಡಣಾ ಘಟಕ 1 ಮತ್ತು 2ಗೆ ದಾಖಲು ಮಾಡಲಾಗುತ್ತದೆ. ವರದಿ ಬಂದ ಕೂಡಲೇ ಕೋವಿಡ್ ಸೋಂಕಿತರನ್ನು ಕೋವಿಡ್-19 ನಿಗದಿತ ಆಸ್ಪತ್ರೆಯ ವಾರ್ಡಗೆ ಕಳುಹಿಸಲಾಗುತ್ತದೆ ಎಂದು ಇದೆ ವೇಳೆ ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ವಿಶೇಷ ತಜ್ಞರೊಂದಿಗೆ ಚರ್ಚೆ: 24*7 ರೋಗಿಗಳನ್ನು ನೋಡುತ್ತ ಅವರ ಚಲನವಲನ ದಾಖಲಿಸಿ ಚಿಕಿತ್ಸೆಗೆ ಸಹಾಯ ಮಾಡುವ ಐಸಿಯು ಟೆಲಿ ಸೇವೆಯ ಮಾಹಿತಿಯನ್ನು ಕೂಡ ಇದೆ ವೇಳೆ ಪಡೆದುಕೊಂಡ ಜಿಲ್ಲಾಧಿಕಾರಿ ರಾಮಚಂದ್ರನ್, ಐಸಿಯು ಟೆಲಿ ಸೇವೆಯ ಸೂಪರ್ ಸ್ಪೇಷಿಯಾಲಿಸ್ಟ್ ವೈದ್ಯರೊಂದಿಗೆ ಕೆಲ ಸಮಯ ಮಾತನಾಡಿದರು.

ಫೀವರ್ ಕ್ಲಿನಿಕ್ ಮೂಲಕ ಪ್ರವೇಶ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಿ, ಅಲ್ಲಿ ಇಡಲಾಗಿದ್ದ ಹಲವಾರು ವಹಿಗಳನ್ನು ಪರಿಶೀಲಿಸಿದರು. ಆಸ್ಪತ್ರೆಗೆ ಬರುವ ರೋಗಿಗಳನ್ನು ಇಲ್ಲಿ ಪರಿಶೀಲಿಸಿ ವಿಂಗಡಿಸಲಾಗುತ್ತದೆ. ಈ ವೇಳೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಅಂತಹ ರೋಗಿಗಳ ಗಂಟಲು ದ್ರವದ ಪರೀಕ್ಷೆಗೆ ಏರ್ಪಾಡು ಮಾಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ಇದೇ ವೇಳೆ ಹೆಲ್ಪ್‌ ಡೆಸ್ಕ್ ವಿಭಾಗಕ್ಕೂ ಭೇಟಿ ನೀಡಿದ ಅವರು, ರಕ್ತದ ಪರೀಕ್ಷೆ ಕಳುಹಿಸಿದ ಸಮಯ, ರೋಗಿಗಳ ದಾಖಲು ಮತ್ತು ಬಿಡುಗಡೆ ವಿವರ ಸೇರಿದ ದಾಖಲೆಗಳನ್ನು ಮಾಹಿತಿ ಪಡೆದು ಪರಿಶೀಲಿಸಿದರು. ಕೊರೋನಾ ವೈರಾಣು ನಿಯಂತ್ರಣ ಕಾರ್ಯಾಚರಣೆಯಲ್ಲಿ ಬ್ರಿಮ್ಸ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಕೊರೋನಾ ಸೋಂಕು ಹಿನ್ನೆಲೆ ಬೆಳಗಾವಿ ಜಲಪಾತಗಳಿಗೆ ದಿಗ್ಬಂಧನ; ಪ್ರವಾಸಿಗರಿಗೆ ನಿರಾಶೆ!ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿನ ರೋಗಿಗಳನ್ನು ತಾವು ಖುದ್ದು ಭೇಟಿ ಮಾಡಿದ್ದು, ಚಿಕಿತ್ಸೆ ಮತ್ತು ಆರೈಕೆ ಉತ್ತಮವಾಗಿ ಸಿಗುತ್ತಿರುವುದಾಗಿ ಕೋವಿಡ್-19 ಸೋಂಕಿತ ರೋಗಿಗಳು ಹೇಳಿದ್ದಾರೆ. ರೋಗಿಗಳನ್ನು ತಮ್ಮ ಬಂಧುಗಳಂತೆ ಭಾವಿಸಿ ಚಿಕಿತ್ಸೆ ಮತ್ತು ಆರೈಕೆ ಮಾಡುತ್ತಿರುವ, ರೋಗಿಗಳ ಮೇಲೆ ಪ್ರೀತಿ ತೋರುತ್ತ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ತಾವು ನಮನಗಳನ್ನು ಸಲ್ಲಿಸುವುದಾಗಿ ಇದೇ ವೇಳೆ ಜಿಲ್ಲಾಧಿಕಾರಿಗಳು ಹೇಳಿದರು.
Published by: MAshok Kumar
First published: July 25, 2020, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading