ಭದ್ರಾ ಜಲಾಶಯ ಭರ್ತಿ; ರೈತರಲ್ಲಿ ಮೂಡಿದ ಸಂತಸ

ದಾವಣೆಗೆರೆ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಗದಗ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಸುಮಾರು 8 ಜಿಲ್ಲೆಗಳಿಗೆ ಭದ್ರಾ ನೀರು ಪೂರೈಕೆಯಾಗುತ್ತದೆ. 1962 ರಲ್ಲಿ ನಿರ್ಮಾಣ ಗೊಂಡ ಈ ಅಣೆಕಟ್ಟು 58 ವರ್ಷಗಳು ಕಳೆದಿವೆ. ಈವರೆಗೆ 39 ಬಾರಿ ಅಣೆಕಟ್ಟು ಭರ್ತಿಯಾಗಿದೆ.

news18-kannada
Updated:September 14, 2020, 10:16 PM IST
ಭದ್ರಾ ಜಲಾಶಯ ಭರ್ತಿ; ರೈತರಲ್ಲಿ ಮೂಡಿದ ಸಂತಸ
ಭದ್ರಾ ಅಣೆಕಟ್ಟು.
  • Share this:
ಶಿವಮೊಗ್ಗ; ಮಧ್ಯ ಕರ್ನಾಟಕದ ರೈತರ ಜೀವನಾಡಿ ಭದ್ರಾ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಬಯಲು ಸೀಮೆಯಲ್ಲಿ ಹರಿಯುತ್ತಾಳೆ. ಚಿಕ್ಕಮಗಳೂರು,ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಸೇರಿದಂತೆ ಹಲವು ಜಿಲ್ಲೆಗಳ ರೈತರ ಪಾಲಿಗೆ ಈಕೆಯೇ ಆಸರೆ. ಇಂತಹ ಭದ್ರೆಯ ಒಡಲು ಈ ಬಾರಿ ಮತ್ತೇ ತುಂಬಿದೆ. ಇದರಿಂದಾಗಿ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಕೃಷಿ, ವಿದ್ಯುತ್ ಮತ್ತು ಕುಡಿಯುವ ನೀರಿಗೆ  ಭದ್ರಾ ಜಲಾಶಯದ ನೀರು ಬಳಕೆಯಾಗುತ್ತಿದೆ. ಕುಡಿಯುವ ನೀರು, ವ್ಯವಸಾಯ, ಕೈಗಾರಿಕೆ, ಮೀನು ಸಾಕಾಣಿಕೆ ಹೀಗೆ ಎಲ್ಲಾ ಕಾರ್ಯಗಳಿಗೂ ಭದ್ರೆಯನ್ನು ನಂಬಿ ಜೀವನ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಅಭಯಾರಣ್ಯದ ಗಂಗಡಿಕಲ್ಲು ಬಳಿಯ ಗಂಗಾ ಮೂಲದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿವ ನದಿ ಈ ಭಾರಿ ಭದ್ರಾ ಅಣೆಕಟ್ಟೆಯನ್ನು ತುಂಬಿಸಿದ್ದು ಎಲ್ಲೆಡೆ ರೈತರಲ್ಲಿ ಸಂತಸ ಮನೆಮಾಡಲು ಕಾರಣವಾಗಿದೆ.

ಭದ್ರಾ ನದಿ ಹುಟ್ಟಿ ಸುಮಾರು 125 ಕೀಮಿ ಹರಿದ ನಂತರ ಭದ್ರೆಗೆ ಅಣೆಕಟ್ಟು ಕಟ್ಟಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿ ಆರ್ ಪಿ ಬಳಿ ಭದ್ರಾ ಅಣೆಕಟ್ಟು ನಿರ್ಮಿಸಲಾಗಿದೆ.  ಭದ್ರಾ ನದಿಗೆ 1962 ರಲ್ಲಿ ಬಿ ಆರ್ ಪಿ ಬಳಿ ಅಣೆಕಟ್ಟು ನಿರ್ಮಿಸಲಾಗಿದೆ.
186 ಅಡಿ ಎತ್ತರವಿರುವ  ಜಲಾಶಯದಲ್ಲಿ 71.535 ಟಿಎಂಸಿ ನೀರನ್ನು ಸಂಗ್ರಹಿಸಬಹುದಾಗಿದೆ. ಭದ್ರಾ ಜಲಾಶಯದಿಂದ ಸುಮಾರು 1,50,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ.

ಇದನ್ನೂ ಓದಿ : ಮೇಕೆದಾಟು ಅಣೆಕಟ್ಟು ನಮ್ಮ ಸರ್ಕಾರದಲ್ಲಿ ನಿರ್ಮಾಣವಾಗಲಿದೆ; ಸಚಿವ ರಮೇಶ್ ಜಾರಕಿಹೊಳಿ ಭರವಸೆ 

186 ಅಡಿ ಸಾಮಥ್ಯ ಹೊಂದಿರುವ ಜಲಾಶಯದಲ್ಲಿ ಸಧ್ಯ 185.7 ಅಡಿ ನೀರಿನ ಸಂಗ್ರಹವಿದೆ. ಮುನ್ನೇಚ್ಚರಿಕೆ ಕ್ರಮವಾಗಿ ಅಣೆಕಟ್ಟಿನ ನಾಲ್ಕು ಗೇಟುಗಳ ಮುಖಾಂತರ 1751 ಕ್ಯೂಸೆಕ್ ನೀರನ್ನು ಭದ್ರಾ ನದಿಗೆ ಹರಿಬಿಡಲಾಗುತ್ತಿದೆ. ಒಳ ಹರಿವು 6800 ಕ್ಯೂಸೆಕ್. ಹಾಲಿ ಅಣೆಕಟ್ಟಿನಲ್ಲಿ 71.012 ಟಿಎಂಸಿ ನೀರು ಸಂಗ್ರಹವಾಗಿದೆ.
ದಾವಣೆಗೆರೆ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಗದಗ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಸುಮಾರು 8 ಜಿಲ್ಲೆಗಳಿಗೆ ಭದ್ರಾ ನೀರು ಪೂರೈಕೆಯಾಗುತ್ತದೆ. 1962 ರಲ್ಲಿ ನಿರ್ಮಾಣ ಗೊಂಡ ಈ ಅಣೆಕಟ್ಟು 58 ವರ್ಷಗಳು ಕಳೆದಿವೆ. ಈವರೆಗೆ 39 ಬಾರಿ ಅಣೆಕಟ್ಟು ಭರ್ತಿಯಾಗಿದೆ.
Published by: MAshok Kumar
First published: September 14, 2020, 10:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading