ರಾಮನಗರ: ಹೇಗೇ ಸತ್ತರೂ ಕೊರೋನಾ ಸಾವೆಂದು ದಾಖಲಿಸಿ ಹಣ ಲೂಟಿ; ಜಿಲ್ಲಾಧಿಕಾರಿ ವಿರುದ್ಧ ಸಿಡಿದ ಜನ

ಸಾವನ್ನಪ್ಪಿದ್ದ ಮಹಿಳೆಗೆ ಪಿಪಿಇ ಕಿಟ್ ಹಾಕುವ ಮೂಲಕ ಸಂಬಂಧಿಕರಿಗೆ ಮೃತದೇಹ ರವಾನಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಕೊರೋನಾ ವರದಿಯಲ್ಲಿ ನೆಗೆಟಿವ್ ಬಂದಿದ್ದರು ಸಹ ನಮ್ಮ ತಾಯಿಗೆ ಪಿಪಿಇ ಕಿಟ್ ಹಾಕುವ ಮೂಲಕ ಹಣ ವಸೂಲಿ ಮಾಡಲಾಗಿದೆ ಎಂದು ಮೃತ ಹೊನ್ನಮ್ಮರ ಮಗ ಸುರೇಶ್ ಆರೋಪಿಸಿದ್ದಾರೆ.

news18-kannada
Updated:September 26, 2020, 7:25 AM IST
ರಾಮನಗರ: ಹೇಗೇ ಸತ್ತರೂ ಕೊರೋನಾ ಸಾವೆಂದು ದಾಖಲಿಸಿ ಹಣ ಲೂಟಿ; ಜಿಲ್ಲಾಧಿಕಾರಿ ವಿರುದ್ಧ ಸಿಡಿದ ಜನ
ರಾಮನಗರ ಜಿಲ್ಲಾಧಿಕಾರಿ ವಿರುದ್ಧ ಪ್ರತಿಭಟಿಸುತ್ತಿರುವ ಜನ.
  • Share this:
ರಾಮನಗರ : ಕೊರೋನಾ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ ಸಹ ಕೊರೋನಾ ಪಾಸಿಟಿವ್ ಇದೇ ಎಂದು ಚಿಕಿತ್ಸೆ ನೀಡಿ ಹಣ ವಸೂಲಿ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು. ರಾಮನಗರ ತಾಲೂಕಿನ ಅಂಜನಾಪುರ ಗ್ರಾಮದ 65 ವರ್ಷದ ಹೊನ್ನಮ್ಮ ಎಂಬುವರು ಕೆಮ್ಮು ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದಾಗಿ ರಾಮನಗರ ಜಿಲ್ಲಾಸ್ಪತ್ರೆಗೆ 17-09-2020 ರಂದು ದಾಖಲಾಗಿದ್ದರು. ನಂತರ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಅವರನ್ನ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ನಂತರ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ 24-09-2020 ರಂದು ಹೊನ್ನಮ್ಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆದರೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಅವರಿಗೆ ಕೊರೋನಾ ಗೆ ಸಂಬಂಧಪಟ್ಟ ಚಿಕಿತ್ಸೆ ನೀಡಲಾಗಿದೆ.

ಆದರೆ ಸಾವನ್ನಪ್ಪಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ವರದಿ ಪಡೆದಾಗ ಅದರಲ್ಲಿ ನೆಗೆಟಿವ್ ಎಂದು ಬಂದಿದೆ. ಈ ಕಾರಣ ಸಾವನ್ನಪ್ಪಿದ್ದ ಮಹಿಳೆಗೆ ಪಿಪಿಇ ಕಿಟ್ ಹಾಕುವ ಮೂಲಕ ಸಂಬಂಧಿಕರಿಗೆ ಮೃತದೇಹ ರವಾನಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಕೊರೋನಾ ವರದಿಯಲ್ಲಿ ನೆಗೆಟಿವ್ ಬಂದಿದ್ದರು ಸಹ ನಮ್ಮ ತಾಯಿಗೆ ಪಿಪಿಇ ಕಿಟ್ ಹಾಕುವ ಮೂಲಕ ಹಣ ವಸೂಲಿ ಮಾಡಲಾಗಿದೆ ಎಂದು ಮೃತ ಹೊನ್ನಮ್ಮರ ಮಗ ಸುರೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಕೇಂದ್ರ ಕೃಷಿ ಮಸೂದೆ; ಸೆ.28ಕ್ಕೆ ಭಾರತ್​ ಬಂದ್​, ಇಂದಿನಿಂದ ಸೆ.29ರ ವರೆಗೆ ಪಂಜಾಬ್​ನಲ್ಲಿ ರೈಲ್​ ರೋಖೋ ಚಳುವಳಿ

ಇನ್ನು ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಂದರು. ಈ ವೇಳೆ ಮೃತರ ಕುಟುಂಬಸ್ಥರು ಹಾಗೂ ಡಿ ಎಚ್ ಒ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ನಂತರ ಡಿ ಎಚ್ ಒ ಮಾತನಾಡಿ ಈ ರೀತಿ ಆಗಿರಲು ಸಾಧ್ಯವಿಲ್ಲ, ಆದರೆ ಈಗ ಕುಟುಂಬಸ್ಥರು ನನಗೆ ಮನವಿ ಸಲ್ಲಿಸಿ ತನಿಖೆ ನಡೆಸಿ ಎಂದಿದ್ದಾರೆ. ಹಾಗಾಗಿ ಈ ಕೂಡಲೇ ಗಮನಹರಿಸುತ್ತೇವೆಂದು ತಿಳಿಸಿದರು. ಇನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ವಿರುದ್ಧ ಧಿಕ್ಕಾರ ಕೂಗಿದರು. 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರೂ ಸಹ ಇತ್ತ ತಿರುಗಿಯೂ ನೋಡದ ಕಾರಣ ಕಿಡಿಕಾರಿದರು.
Published by: MAshok Kumar
First published: September 26, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading