ಸಕ್ಕರೆನಾಡು ಮಂಡ್ಯದ ಪೊಲೀಸರಿಂದ ‌ಮಿಂಚಿನ ಕಾರ್ಯಾಚರಣೆ : 7 ಜನ ಅಪಹರಣಕಾರರ ಬಂಧನ

ಈ 7 ಜನರು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನನ್ನು ಅಪಹರಿಸಿದ್ದರು‌. ಬಳಿಕ ಯುವಕನ‌ ಪೋಷಕರಿಗೆ ಕರೆ ಮಾಡಿ 30 ಲಕ್ಷ ಬೇಡಿಕೆ ಇಟ್ಟಿದ್ದರು

news18-kannada
Updated:September 25, 2020, 6:52 PM IST
ಸಕ್ಕರೆನಾಡು ಮಂಡ್ಯದ ಪೊಲೀಸರಿಂದ ‌ಮಿಂಚಿನ ಕಾರ್ಯಾಚರಣೆ : 7 ಜನ ಅಪಹರಣಕಾರರ ಬಂಧನ
ನಾಗಮಂಗಲ ಪೊಲೀಸ್​ ಠಾಣೆ
  • Share this:
ಮಂಡ್ಯ(ಸೆಪ್ಟೆಂಬರ್​. 25): ಸಕ್ಕರೆನಾಡು ಮಂಡ್ಯದಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸಿದ್ದ ಮೂವರು ಅರ್ಚಕರ ಕೊಲೆ ಪ್ರಕರಣವನ್ನು ಕೇವಲ 36 ಗಂಟೆಯಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸಿ ಸಾಹಸ ಮೆರೆದಿದ್ದರು. ಆ ಸಾಹಸ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸಾಹಸ ಮಾಡಿದ್ದಾರೆ. ಬೆಂಗಳೂರಿನ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕ್ಕೆ ಇಟ್ಟು ಮಂಡ್ಯ ಜಿಲ್ಲೆಯ ಲಾಡ್ಜ್ ವೊಂದರಲ್ಲಿ ತಲೆ ಮರೆಸಿಕೊಂಡಿದ್ದ 7 ಜನ ಅಪಹರಣಕಾರರನ್ನು ಬಂಧಿಸಿ ಮತ್ತೊಂದು ಸಾಹಸ ಮೆರೆದಿದ್ದಾರೆ. ಮಂಡ್ಯದ ಜಿಲ್ಲೆಯ ಪೊಲೀಸರ ಸಾಹಸದ ತಾಕತ್ತು. ಇದೀಗ ಮತ್ತೊಂದು ಪ್ರಕರಣದಲ್ಲಿ ಸಾಬೀತಾಗಿದೆ. ಇತ್ತೀಚೆಗಷ್ಟೆ ಮಂಡ್ಯ ನಗರದ ಅರ್ಕೇಶ್ವರ ದೇವ ಸ್ಥಾನದಲ್ಲಿ ಮೂವರು ಅರ್ಚಕರ ಹತ್ಯೆ ನಡೆದಿತ್ತು. ಈ ಪ್ರಕರಣವನ್ನು ಜಿಲ್ಲೆಯ ಪೊಲೀಸರು ಕೇವಲ 36 ಗಂಟೆಯಲ್ಲಿಯೇ ಪ್ರಕರಣ ಬೇದಿಸಿ ಆರೋಪಿಗಳ ಎಡೆಮುರಿ ಕಟ್ಟಿದ್ದರು. ಅಲ್ಲದೇ ಬಂಧನದ ಮೇಲೆ ದುಷ್ಕ ರ್ಮಿಗಳು ಹಲ್ಲೆ ನಡೆಸಿದರು. ಕೆಚ್ಚೆದೆಯಿಂದ ಹೋರಾಟ ಮಾಡಿ ಆರೋಪಿಗಳ ಮೇಲೆ ಫೈರಿಂಗ್ ಮಾಡಿ ಬಂಧಿಸಿ ತಮ್ಮ ಸಾಹಸ ಮೆರೆದಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಜಿಲ್ಲೆಯ ನಾಗಮಂಗಲ ಠಾಣೆಯ ಪೊಲೀಸರು ತಮ್ಮ ಸಾಹಸ ಮೆರೆಸಿದ್ದಾರೆ.

ಪಟ್ಟಣದ ಲಾಡ್ಜ್ ವೊಂದರಲ್ಲಿ‌ ಬೆಂಗಳೂರಿನಿಂದ ಬಂದು ತಲೆ ಮರೆಸಿಕೊಂಡು ಅಡಗಿದ್ದ 7 ಜನ ಅಪಹರಣಾಕಾರರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಮೂಲಕ ಸಾಹಸ ಮೆರೆದಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿಗಳಾಗಿದ್ದ ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಎಂಬ ಯುವಕರೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪಹರಣಾಕಾರಾಗಿದ್ದಾರೆ. ಈ 7 ಜನರು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನನ್ನು ಅಪಹರಿಸಿದ್ದರು‌. ಬಳಿಕ ಯುವಕನ‌ ಪೋಷಕರಿಗೆ ಕರೆ ಮಾಡಿ 30 ಲಕ್ಷ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಯುವಕನ‌ ಪೋಷಕರು ತಿಲಕ್ ನಗರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಪೋಷಕರ ದೂರಿನ ಮೇರೆಗೆ ಮಾಹಿತಿ ಕಲೆ ಹಾಕಿದ  ತಿಲಕನಗರ ಆರೋಪಿಗಳು ಕರೆ ಮಾಡಿದ ಪೋನ್ ನಂಬರ್ ಮತ್ತು ಲೋಕೇಶನ್ ಆಧಾರದ ಮೇಲೆ ಆರೋಪಿಗಳು ನಾಗಮಂಗಲದಲ್ಲಿ ಇರುವುದನ್ನು‌ ಪತ್ತೆ ಹಚ್ಚಿದ್ದರು. ಬಳಿಕ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ರವಾನಿಸಿ ಆರೋಪಿಗಳ ಬಂಧನಕ್ಕೆ ಸ್ಥಳೀಯ ಪೊಲೀಸರ ನೆರವು ಕೋರಿದ್ದರು.

ಇದನ್ನೂ ಓದಿ :  ಭೂ ಸುಧಾರಣಾ ಕಾಯ್ದೆ ವಿರುದ್ದ ಚಿಕ್ಕೋಡಿಯಲ್ಲಿ ರಸ್ತೆಗಿಳಿದ ರೈತರು ; ಗಾಂಜಾ, ಅಫೀಮು ಬೆಳೆಯುವ ಕಾಯ್ದೆಗೆ ರೈತರ ಆಗ್ರಹ

ತಕ್ಷಣವೇ ಅಲರ್ಟ್ ಆದ ನಾಗಮಂಗಲ ಪೊಲೀಸರು ಮಾಹಿತಿ ಜಾಡು ಹಿಡಿದು ದುಷ್ಕರ್ಮಿಗಳು ಎಸ್​ಎಲ್​​ಎನ್​​​ ಗ್ರ್ಯಾಂಡ್ ರೆಸಿಡೆನ್ಸಿಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನಂತೆ ಕೆಲವು ಅಧಿಕಾರಿಗಳು ದುಷ್ಕರ್ಮಿಗಳಿದ್ದ ಲಾಡ್ಜ್‌ಗೆ ಎಂಟ್ರಿ ಕೊಟ್ಟರು. ಆರೋಪಿಗಳ ಚಲನವಲನ ಪರಿಶೀಲನೆ ನಂತರ ತಮ್ಮ ಸಿಬ್ಬಂದಿಗಳೊಂದಿಗೆ ಮಿಂಚಿನ‌ ಕಾರ್ಯಾಚರಣೆ ಮೂಲಕ ಅಪಹರಣಕಾರರನ್ನು ಬಂಧಿಸಿ ತಿಲಕನಗರ ಪೊಲೀಸರ ವಶಕ್ಕೆ ನೀಡಿದರು.
ಒಟ್ಟಾರೆ ನಾಗಮಂಗಲ ಪಟ್ಟಣದಲ್ಲಿ ಸಿನಿಮಾದಂತೆ ನಡೆದ ಈ ಘಟನೆಗೆ ಸಾರ್ವಜನಿಕರು ಕೂಡ ಪೊಲೀಸರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಪ್ರಾಣದ ಹಂಗುನ್ನು ತೊರೆದು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ನಾಗಮಂಗಲ ಪೊಲೀಸರ ಕಾರ್ಯಾ ಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೂಡ ಪ್ರಶಂಸೆ ವ್ಯಕ್ತಪಡಿಸಿ ಅಭಿನಂಧಿಸಿದ್ದಾರೆ.
Published by: G Hareeshkumar
First published: September 25, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading