ಸಂಸದ ಉಮೇಶ್ ಜಾಧವ್ ಕುಟುಂಬದ 12 ಸದಸ್ಯರಿಗೂ ಸೋಂಕು; ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ

ಜಿಲ್ಲೆಯಲ್ಲಿ ಮತ್ತೆ 203 ಜನರಿಗೆ ಸೋಂಕು ದೃಢಪಟ್ಟಿದೆ. 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ. ಜಿಲ್ಲೆಯಲ್ಲಿ 10,142 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಮತ್ತೆ 215 ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 8128 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1824 ಸಕ್ರಿಯ ಪ್ರಕರಣಗಳಿವೆ.

news18-kannada
Updated:August 24, 2020, 2:54 PM IST
ಸಂಸದ ಉಮೇಶ್ ಜಾಧವ್ ಕುಟುಂಬದ 12 ಸದಸ್ಯರಿಗೂ ಸೋಂಕು; ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ
ಸಾಂದರ್ಭಿಕ ಚಿತ್ರ.
  • Share this:
ಕಲಬುರ್ಗಿ; ಕಲಬುರ್ಗಿ ಸಂಸದ ಉಮೇಶ್ ಜಾಧವ್ ನಂತರ ಅವರ ಕುಟುಂಬದ 12 ಸದಸ್ಯರಿಗೆ ಕೊರೋನಾ ಸೋಂಕು ತಗುಲಿದೆ. ಉಮೇಶ್ ಜಾಧವ್ ಪತ್ನಿ, ಮಗಳು, ಸಹೋದರನ ಪುತ್ರಿ, ಮೊಮ್ಮಕ್ಕಳು, ಸೊಸೆಗೂ ಸೋಂಕು ಕಾಣಿಸಿಕೊಂಡಿದೆ. ಜಾಧವ್ ಪುತ್ರ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಆತನ ಪತ್ನಿ, ಜಾಧವ್ ಅಳಿಯನಿಗೂ ಸೋಂಕು ದೃಢಪಟ್ಟಿದೆ. ಅಲ್ಲದೆ ಉಮೇಶ್ ಜಾಧವ್ ಇಬ್ಬರು ಆಪ್ತ ಸಹಾಯಕರು, ಕಾರು ಚಾಲಕ ಹಾಗೂ ಅವಿನಾಶ್ ಜಾಧವ್ ಅವರ ಪಿಎ ಮತ್ತು ಕಾರು ಚಾಲಕನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ತಮ್ಮ ಕುಟುಂಬದ ಒಟ್ಟು 12 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ಸ್ವತಃ ಸಂಸದ ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ.

ಸಂಸದರ ಜೊತೆಗೆ ಒಟ್ಟು ಇಪ್ಪತ್ತು ಜನರಿಗೆ ಸೋಂಕು ದೃಢಪಟ್ಟಿದೆ. ಐದು ದಿನಗಳ ಹಿಂದೆಯಷ್ಟೇ ಉಮೇಶ್ ಜಾಧವ್, ಅವಿನಾಶ್ ಜಾಧವ್ ಹಾಗೂ ಅಳಿಯ ಅರುಣ್ ಪವಾರ್ ಗೆ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ಕುಟುಂಬದ 12 ಸದಸ್ಯರಿಗೆ, ಹಾಗೂ ಅವರ ಆಪ್ತರಿಗೆ ಸೋಂಕಿರೋದು ದೃಢಗೊಂಡಿದೆ. ಎಲ್ಲರನ್ನೂ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರ್ಗಿ ಸಂಸದ ಉಮೇಶ್ ಜಾಧವ್ ಹಾಗೂ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಮತ್ತು ಕುಟುಂಬದ ಸದಸ್ಯರಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ. ಉಮೇಶ್ ಜಾಧವ್ ಮತ್ತು ಕುಟುಂಬದ ಸದಸ್ಯರು ಕೊರೋನಾದಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳಿಂದ ಚಿಂಚೋಳಿ ಕ್ಷೇತ್ರದ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನು ಓದಿ: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕವಾಗಲಿ; ಸೋನಿಯಾಗೆ ಸಿದ್ದರಾಮಯ್ಯ ಪತ್ರ

ಚಿಂಚೋಳಿ ತಾಲೂಕಿನ ಗಂಗಾನಾಯಕ್ ತಾಂಡಾದ ಸೇವಾಲಾಲ್ ಮಂದಿರದಲ್ಲಿ ಹೋಮ ಹವನ ನಡೆಸಲಾಗಿದೆ. ಚಂದಾಪುರದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಚಿಂಚೋಳಿಯ ಗೊಟ್ಟಂಗೊಟ್ಟ ಅರಣ್ಯದಲ್ಲಿನ ಹನುಮಾನ ಮಂದಿರದಲ್ಲಿಯೂ ಪೂಜೆ ಸಲ್ಲಿಸಲಾಯಿತು. ಜೊತೆಗೆ ಗಾರಂಪಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿಯೂ ಪೂಜೆ ನೆರವೇರಿಸಲಾಗಿದೆ. ಉಮೇಶ್ ಜಾಧವ್ ಮತ್ತವರ ಕುಟುಂಬದ ಸದಸ್ಯರು ಗುಣಮುಖರಾಗಲೆಂದು ಪ್ರಾರ್ಥಿಸಲಾಗಿದೆ.

ಕಲಬುರ್ಗಿಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸಕಲಬುರಗಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಮಧುಮೇಹ, ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದ ಚಿಂಚೋಳಿಯ 76 ವರ್ಷದ ವೃದ್ಧ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಶಹಾಬಜಾರ್ ಪ್ರದೇಶದ 74 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 190 ಕ್ಕೇರಿದೆ. ಜಿಲ್ಲೆಯಲ್ಲಿ ಮತ್ತೆ 203 ಜನರಿಗೆ ಸೋಂಕು ದೃಢಪಟ್ಟಿದೆ. 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ. ಜಿಲ್ಲೆಯಲ್ಲಿ 10,142 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಮತ್ತೆ 215 ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 8128 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1824 ಸಕ್ರಿಯ ಪ್ರಕರಣಗಳಿವೆ.
Published by: HR Ramesh
First published: August 24, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading