ರಾಯಚೂರು: ಕೊರೋನಾ ರೋಗಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಕೊವಿಡ್ ಕೇರ್​​ ಸೆಂಟರ್​​ನಲ್ಲಿ ಯೋಗ ಪಾಠ

ಸಿಂಧನೂರು ಕೊವಿಡ್ ಕೇರ್ ಸೆಂಟರ್​​ನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸೋಂಕಿತರಿಗಾಗಿ ಆಟೋಟಗಳಿಗೆ ಸಲಕರಣೆಗಳನ್ನು ನೀಡಲಾಗಿದೆ. ಕೊವಿಡ್ ಕೇರ್ ಸೆಂಟರ್ ಎಂಬುವುದು ಜೈಲು ಎಂಬ ಭಾವನೆಯಿಂದ ಮುಕ್ತವಾಗಿರುವಂತೆ ಇಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೋಂಕಿತರು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:August 26, 2020, 1:17 PM IST
ರಾಯಚೂರು: ಕೊರೋನಾ ರೋಗಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಕೊವಿಡ್ ಕೇರ್​​ ಸೆಂಟರ್​​ನಲ್ಲಿ ಯೋಗ ಪಾಠ
ಕೊರೋನಾ ರೋಗಿಗಳು
  • Share this:
ರಾಯಚೂರು(ಆ.26): ಕೊರೊನಾ ಸೋಂಕು ತಗುಲಿದರೆ ಸಾಕು ಸೋಂಕಿತರಲ್ಲಿ ಆತ್ಮಬಲ ಕುಸಿಯುತ್ತಿದೆ. ಸೋಂಕಿತರನ್ನು ಕೊವಿಡ್ ಕೇರ್ ಸೆಂಟರ್ ಇಲ್ಲವೇ ಆಸ್ಪತ್ರೆಗೆ ಸೇರಿಸಲಾಗುತ್ತಿದೆ. ಕೊವಿಡ್ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿವೆ ಎಂಬ ಮಾತು ಸಾಮಾನ್ಯವಾಗಿದೆ. ಆದರೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಕೊವಿಡ್ ಕೇರ್ ಸೆಂಟರ್ ಇದಕ್ಕೆ ಅಪವಾದವಾಗಿದೆ. ಇಲ್ಲಿ ಸೋಂಕಿತರಿಗೆ ಆತ್ಮಬಲ ಹೆಚ್ವಿಸುವ ಕಾರ್ಯ ನಡೆಯುತ್ತಿದೆ.

ಸೋಂಕಿತರು ಅಧಿಕವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕೊವಿಡ್ ಆಸ್ಪತ್ರೆಗಳು, ಕೊವಿಡ್ ಕೇರ್ ಸೆಂಟರ್​​​ಗಳು, ಮನೆಗಳಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಟೆಲ್​​​ಗಳಲ್ಲಿ ಇರಲು ಅವಕಾಶ ನೀಡಲಾಗಿದೆ. ಅದರಂತೆ ಸಿಂಧನೂರು ತಾಲೂಕಿನ ಸೋಂಕಿತರ ರೋಗ ಲಕ್ಷಣವಿಲ್ಲದವರಿಗಾಗಿ ಇಲ್ಲಿನ ಹೊರವಲಯದಲ್ಲಿ ಕೊವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.

ಈ ಕೊವಿಡ್ ಕೇರ್ ಸೆಂಟರ್​​ನಲ್ಲಿ ಈಗ 72 ಜ‌ನ ಸೋಂಕಿತರಿದ್ದಾರೆ. ಈ 72 ಜ‌ನರು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಯೋಗಕ್ಕೆ ಮೋರೆ ಹೋಗಿದ್ದಾರೆ. ಎಲೆಕೂಡ್ಲಗಿಯ ಮಲ್ಲಣ್ಣ ಎಂಬ ಅಂತರರಾಷ್ಟ್ರೀಯ ಯೋಗಗುರು ಈಗ ಇಲ್ಲಿಯ ಸೋಂಕಿತರಿಗೆ ಯೋಗ ಪಾಠ ಮಾಡುತ್ತಿದ್ದಾರೆ. ಬೆಳಗಿನ ಜಾವ ಬೇಗ ಏಳುವ ಸೋಂಕಿತರು ಬೆಳಗಿನ‌ ನಿತ್ಯ ಕೆಲಸಗಳನ್ನು ಮುಗಿಸಿ ನೇರವಾಗಿ ಕೊವಿಡ್ ಕೇರ್ ಸೆಂಟರ್ ನ ಮೇಲ್ಛಾವಣೆಗೇರುತ್ತಾರೆ.

ಮುಂಜಾನೆ 5.30 ಗಂಟೆಯಿಂದ 8.30 ರವರೆಗೆ ಯೋಗವನ್ನು ಕಲಿಯುತ್ತಾ ರೂಢಿಸಿಕೊಳ್ಳುತ್ತಿದ್ದಾರೆ. ದೈಹಿಕ ಕಸರತ್ತುಗಳನ್ನು ಮಾಡುವ ಅವರ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ, ಬಸ್ತ್ರಿಕಾ ಸೇರಿದಂತೆ ಯೋಗದ ವಿವಿಧ ಆಯಾಮಗಳನ್ನು ಕಲಿಯುತ್ತಾ ಮಾನಸಿಕ ಹಾಗು ದೈಹಿಕ ಗಟ್ಟಿಯಾಗುತ್ತಿದ್ದಾರೆ.

ಯೋಗದಿಂದ ಮಾನಸಿಕವಾಗಿ ಗಟ್ಟಿಯಾಗುವ ಇವರು ಕೊರೊನಾದಂಥ ವೈರಸ್ ತಗುಲಿದರೂ ಬೇಗ ಗುಣಮುಖರಾಗುತ್ತೇವೆ. ಇಲ್ಲಿ ಕಲಿತಿರುವ ಯೋಗವನ್ನು ತಾವು ಊರಿಗೆ ಹೋದ ನಂತರವೂ ಮುಂದುವರಿಸುತ್ತೇವೆ. ಯೋಗ ಸೋಂಕು ತಗುಲಿದಾಗ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಸೋಂಕು ತಗುಲಿದರೂ ಭಯ ಪಡದೆ ಧೈರ್ಯವಾಗಿರಿ ಅದಕ್ಕೆ ಯೋಗವು ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: ಬಿ.ವೈ. ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕರಿಂದಲೇ 5 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಆರೋಪ!ಸಿಂಧನೂರು ಕೊವಿಡ್ ಕೇರ್ ಸೆಂಟರ್​​ನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸೋಂಕಿತರಿಗಾಗಿ ಆಟೋಟಗಳಿಗೆ ಸಲಕರಣೆಗಳನ್ನು ನೀಡಲಾಗಿದೆ. ಕೊವಿಡ್ ಕೇರ್ ಸೆಂಟರ್ ಎಂಬುವುದು ಜೈಲು ಎಂಬ ಭಾವನೆಯಿಂದ ಮುಕ್ತವಾಗಿರುವಂತೆ ಇಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೋಂಕಿತರು ಅಭಿಪ್ರಾಯಪಟ್ಟಿದ್ದಾರೆ.
Published by: Ganesh Nachikethu
First published: August 26, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading