ದೇಶದ ಅತಿ ದೊಡ್ಡ BIEC ಕೋವಿಡ್ ಕೇರ್ ಸೆಂಟರ್ ಸಿದ್ಧತೆಗೆ ವಿಳಂಬವೇಕೆ?; ಇಲ್ಲಿದೆ ನ್ಯೂಸ್‌18 ರಿಯಾಲಿಟಿ ಚೆಕ್

ಈ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟು ಹಾಗೇ ಉಳಿದಿವೆ. ಸರ್ಕಾರ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ಹೇಳುತ್ತಿದ್ದರೂ ಅನೇಕ ಕಾರಣಗಳಿಗಾಗಿ ಇದರ ಪ್ರಾರಂಭಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಈ ವಿಳಂಬದ ರಹಸ್ಯವೇನು? ಎಂದು ಬೆನ್ನತ್ತಿ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ಮಾಡಿದಾಗ ಸಾಕಷ್ಟು ವಿಷಯಗಳು‌ ಬೆಳಕಿಗೆ ಬಂದಿದೆ.

news18-kannada
Updated:July 24, 2020, 11:33 AM IST
ದೇಶದ ಅತಿ ದೊಡ್ಡ BIEC ಕೋವಿಡ್ ಕೇರ್ ಸೆಂಟರ್ ಸಿದ್ಧತೆಗೆ ವಿಳಂಬವೇಕೆ?; ಇಲ್ಲಿದೆ ನ್ಯೂಸ್‌18 ರಿಯಾಲಿಟಿ ಚೆಕ್
BIEC ದೇಶದ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್
  • Share this:
ಬೆಂಗಳೂರು: ಇದು ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ನೆಲಮಂಗಲ ಮುಖ್ಯ ರಸ್ತೆಯ ಮಾದಾವರ ಬಳಿಯಿರೋ BIEC (ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ) ಕೇಂದ್ರದಲ್ಲಿರೋ ಕೋವಿಡ್ ಕೇರ್ ಸೆಂಟರ್‌. ಇಲ್ಲಿ 5 ದೊಡ್ಡ ಹಾಲ್ ಇದೆ. ಒಂದೊಂದು ಹಾಲ್ ನಲ್ಲೂ 1000 ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಇದೆ. ಆದರೆ, ಇಷ್ಟರಲ್ಲೇ ಪ್ರಾರಂಭವಾಗಬೇಕಿದ್ದ ಆರೈಕೆ‌ ಕೇಂದ್ರ ಇನ್ನೂ ಸಿದ್ದವಾಗಿಲ್ಲ.

ಈ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟು ಹಾಗೇ ಉಳಿದಿವೆ. ಸರ್ಕಾರ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ಹೇಳುತ್ತಿದ್ದರೂ ಅನೇಕ ಕಾರಣಗಳಿಗಾಗಿ ಇದರ ಪ್ರಾರಂಭಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಈ ವಿಳಂಬದ ರಹಸ್ಯವೇನು? ಎಂದು ಬೆನ್ನತ್ತಿ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ಮಾಡಿದಾಗ ಸಾಕಷ್ಟು ವಿಷಯಗಳು‌ ಬೆಳಕಿಗೆ ಬಂದಿದೆ.

ಹೌದು , ಹಾಲ್ ನಂ 1 ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ. ವೈದ್ಯರು ಚಿಕಿತ್ಸೆ ಕೊಡುವ ಸ್ಥಳದ ಕೆಲಸ ನಡೆದಿಲ್ಲ. ಎರಡು ಮತ್ತು ಮೂರನೇ ಹಾಲ್ ನಲ್ಲಿ ಬೆಡ್ ವ್ಯವಸ್ಥೆ ಮಾತ್ರ ಆಗಿದ್ದು, ಸಣ್ಣ ಪುಟ್ಟ ಕೆಲಸಗಳು ಹಾಗೇ ಬಾಕಿ ಉಳಿದಿವೆ. ನಾಲ್ಕು ಮತ್ತು ಐದನೇ ಹಾಲ್ ನಲ್ಲೂ ಬೆಡ್ ವ್ಯವಸ್ಥೆ ಆಗಿದ್ದೂ,ಇನ್ನೂ ಶೌಚಾಲಯ ವ್ಯವಸ್ಥೆ ಕೆಲಸ ನಡೆಯುತ್ತಿದೆ. ಒಂದೊಂದು ಹಾಲ್ ಗೆ 100 ಕ್ಕೂ ಹೆಚ್ಚು ಶೌಚಾಲಯ ವ್ಯವಸ್ಥೆಗೆ ಸಿದ್ದತೆ ಇನ್ನೂ ನಡೆಯುತ್ತಲೇ ಇದೆ.

ಇದನ್ನೂ ಓದಿ : CoronaVirus: ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಹಿಳಾ ಸೋಂಕಿತರಿಗೆ ಡ್ರೆಸ್ ಕೋಡ್; ಆತ್ಮಹತ್ಯೆ ನಿಯಂತ್ರಣಕ್ಕೆ ಹೊಸ ಕ್ರಮ

ಇನ್ನೂ ಸ್ನಾನದ ಗೃಹ, ಶೌಚಾಲಯ , ಕುಡಿಯುವ ನೀರಿನ‌ ವ್ಯವಸ್ಥೆ ಎಲ್ಲಾ ಕೆಲಸಗಳೂ ಬಾಕಿ ಉಳಿದಿವೆ. ಜೊತೆಗೆ ಪೈಪ್ ಲೈನ್ ಕೆಲಸಗಳು ಸಹ ನಡೆಯುತ್ತಿದ್ದು, ಕೊರೋನಾ ವಾರಿಯರ್ಸ್ ಗೆ ಉಳಿದುಕೊಳ್ಳಲು ಬೇಕಾದ ವ್ಯವಸ್ಥೆ ಈಗ ಪ್ರಾರಂಭಿಸಲಾಗಿದೆ. ಇನ್ನು ಬೆಡ್ ಖರೀದಿಗೆ ಸರ್ಕಾರ ಸೂಚಿಸಿದೆ. ಆದರೆ, ಈಗಾಗಲೇ ಹಾಸಿಗೆ ,ತಿಂಬು ಬಾಡಿಗೆ ಪಡೆದಿದ್ದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಧಿಕಾರಿಗಳು ಮತ್ತು ಗುತ್ತಿಗೆದಾರರ ಗೊಂದಲದಿಂದ ಆರೈಕೆ ಕೇಂದ್ರ ಪ್ರಾರಂಭ ವಿಳಂಬವಾಗುತ್ತಿದೆ. ಸಿದ್ದತೆ ಕೆಲಸಗಳು ನಡೀತಿದ್ದು, ಪ್ರಾರಂಭಕ್ಕೆ 20 ಕ್ಕೂ ಹೆಚ್ಚು ದಿನ‌ ಸಮಯ ಬೇಕಿದೆ. ದೇಶದಲ್ಲಿ ಮೊದಲ ಬಾರಿಗೆ 1000 ಬೆಡ್ ವ್ಯವಸ್ಥೆಗೆ ಮುಂದಾಗಿರೋ ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರೋ ಹಗರಣದ ಆರೋಪ ಬೆನ್ನಲ್ಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಈ ನಡುವೆ ಹೊಸ ಕೋವಿಡ್ ಕೇರ್‌ ಸೆಂಟರ್ ಪ್ರಾರಂಭಕ್ಕೆ ಇನ್ನೆಷ್ಟು ದಿನ ಆಗುತ್ತೋ ಕಾದು ನೋಡಬೇಕಿದೆ.
Published by: MAshok Kumar
First published: July 24, 2020, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading