Sunday Lockdown​​: ಸಂಡೇ ಲಾಕ್​​ಡೌನ್ ನಡುವೆಯೂ ರಾಜ್ಯದತ್ತ ತಮಿಳರು

ಇನ್ನೂ ಗೂಡ್ಸ್ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು ವಾಹನ ಸಂಚಾರ ವಿರಳವಾಗಿದ್ದು, ಸಂಡೇ ಲಾಕ್​ಡೌನ್ ಎಫೆಕ್ಟ್​ನಿಂದ ಜನರ ಸಂಚಾರ ವೀರಳಾತಿ ವಿರಳವಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಮಾತ್ರ ರಾಜ್ಯ ಪ್ರವೇಶಕ್ಕೆ ಆಗಮಿಸಿದ್ದರು.

news18-kannada
Updated:July 26, 2020, 8:58 PM IST
Sunday Lockdown​​: ಸಂಡೇ ಲಾಕ್​​ಡೌನ್ ನಡುವೆಯೂ ರಾಜ್ಯದತ್ತ ತಮಿಳರು
ಕೊರೋನಾ ಎಫೆಕ್ಟ್​: ಗುಂಡಿಗಾಗಿ ಗಡಿ ಮೇರಿ ಆನೇಕಲ್​​ಗೆ ದಾಂಗುಡಿ ಇಟ್ರಾ ತಮಿಳರು?
  • Share this:
ಆನೇಕಲ್(ಜು.26): ಮಹಾಮಾರಿ ಕೊರೋನಾ ಹಾವಳಿ ನಿಯಂತ್ರಿಸಲು ರಾಜ್ಯ ಸರ್ಕಾರ ಹರ ಸಾಹಸಪಡುತ್ತಿದೆ. ಲಾಕ್​​ಡೌನ್​​ಗೆ ಪರ್ಯಾಯವಾಗಿ ರಜೆ ದಿನ ಭಾನುವಾರ ಮಾತ್ರ ಲಾಕ್​​ಡೌನ್ ಮಾಡಲು ಸರ್ಕಾರ ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ಹಲವು ಕಟ್ಟುನಿಟ್ಟಿನ ಕ್ರಮಗಳ ನಡುವೆಯು ಇಂದು ಸಹ ಅಂತರ ರಾಜ್ಯ ಗಡಿ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ರಾಜ್ಯ ಪ್ರವೇಶಕ್ಕೆ ಜನ ಮುಂದಾಗಿದ್ದಾರೆ.

ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ಇಂದು ಸಹ ನೂರಾರು ಜನ ಪ್ರವೇಶಕ್ಕೆ ಸಾಲುಗಟ್ಟಿ ನಿಂತಿದ್ದಾರೆ. ಹಲವು ಷರತ್ತುಗಳ ಮೇಲೆ ರಾಜ್ಯ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿಸಿದೆ. ಪ್ರಮುಖವಾಗಿ ತುರ್ತು ವೈದ್ಯಕೀಯ ಸೇವೆ, ಫ್ಲೈಟ್, ರೈಲು ಟಿಕೆಟ್ ಹೊಂದಿದವರಿಗೆ ಸಂಡೇ ಲಾಕ್​​ಡೌನ್ ವೇಳೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಅಂದಹಾಗೆ ಸೇವಾ ಸಿಂಧು ಆ್ಯಪ್ ಮೂಲಕ ಈ ಪಾಸ್ ಹೊಂದಿದ್ದರು ಬೆಂಗಳೂರು ಪ್ರವೇಶಕ್ಕೆ ಅವಕಾಶ ಇಲ್ಲ. ರಾಜ್ಯದ ಮೂಲಕ ಹೊರ ರಾಜ್ಯಕ್ಕೆ ಹೋಗುವವರಿಗೆ ಅವಕಾಶ ನೀಡಲಾಗುತ್ತಿದೆ. ಒಂದು ವೇಳೆ ಯಾವುದೇ ಪೂರಕ ದಾಖಲೆ ಇಲ್ಲದವರಿಗೆ ರಾಜ್ಯ ಪೊಲೀಸರು ಅತ್ತಿಬೆಲೆ ಗಡಿಯಲ್ಲಿಯೇ ತಡೆದು ವಾಪಸ್ ಹೋಗುವಂತೆ ತಿಳಿಸುತ್ತಿದ್ದಾರೆ. ಜೊತೆಗೆ ತುರ್ತು ವೈದ್ಯಕೀಯ ಸೇವೆ, ಪ್ಲೈನ್, ಟ್ರೈನ್ ಟಿಕೆಟ್ ಹೊಂದಿರುವವರಿಗೆ ಸ್ಕ್ರೀನಿಂಗ್ ಮಾಡಿ ಮಾಹಿತಿ ದಾಖಲು ಮಾಡಿಕೊಂಡ ಬಳಿಕ ಕಳುಹಿಸಲಾಗುತ್ತಿದೆ.

ಇನ್ನೂ ಗೂಡ್ಸ್ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಬೇರೆ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು ವಾಹನ ಸಂಚಾರ ವಿರಳವಾಗಿದ್ದು, ಸಂಡೇ ಲಾಕ್​ಡೌನ್ ಎಫೆಕ್ಟ್​ನಿಂದ ಜನರ ಸಂಚಾರ ವೀರಳಾತಿ ವಿರಳವಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಮಾತ್ರ ರಾಜ್ಯ ಪ್ರವೇಶಕ್ಕೆ ಆಗಮಿಸಿದ್ದರು.

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗದಷ್ಟು ವೇಗವಾಗಿ ಪ್ರವಹಿಸುತ್ತಿದೆ. ಕೊರೋನಾ ನಿಯಂತ್ರಣದಲ್ಲಿ ತಾನೇ ಬೆಸ್ಟ್ ಎಂದು ಬೀಗುತ್ತಿದ್ದ ಕರ್ನಾಟಕದಲ್ಲೂ ದಿನಕ್ಕೆ ಐದು ಪ್ರಕರಣಗಳು ಬರುವ ಮಟ್ಟಕ್ಕೆ ಸೋಂಕು ಹರಡಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಇದೆ. ಕೆಲ ವಾರಗಳವರೆಗೆ ಲಾಕ್​ಡೌನ್ ಮಾಡಿದ್ದ ಕೇಂದ್ರ ಸರ್ಕಾರ ಈಗ ಹಂತ ಹಂತವಾಗಿ ಲಾಕ್​ಡೌನ್ ತೆರವುಗೊಳಿಸುತ್ತಿದೆ. ಆದರೆ ರಾಜ್ಯ ಸರ್ಕಾರಗಳು ತಮ್ಮ ವಿವೇಚನೆ ಮತ್ತು ತಮ್ಮ ರಾಜ್ಯ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಲಾಕ್​ಡೌನ್ ಬಗ್ಗೆ ನಿರ್ಧಾರ ಕೈಗೊಂಡಿವೆ.

ಇದನ್ನೂ ಓದಿ: ಸಂಡೇ ಲಾಕ್​​ಡೌನ್: ರಸ್ತೆಗಿಳಿದು ಪೊಲೀಸರ ಕಾರ್ಯಾಚರಣೆ, ಸುಖಾಸುಮ್ಮನೇ ಸುತ್ತಾಡೋರ ವಾಹನಗಳ ಸೀಜ್​​ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆಯಾದರೂ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್ ಸಾಧ್ಯವೇ ಇಲ್ಲ ಎಂದು ದೃಢ ನಿರ್ಧಾರ ಮಾಡಿದೆ. ಆದರೆ, ಕೊರೋನಾ ಸೋಂಕು ನಿಯಂತ್ರಣಕ್ಕೆ ವಾರಕ್ಕೆ ಒಂದು ಮಾತ್ರ ಅದು ಸಂಡೇ ಲಾಕ್​ಡೌನ್​ ಮಾಡಲಾಗುತ್ತಿದೆ.
Published by: Ganesh Nachikethu
First published: July 26, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading