Independence Day 2020 : ಸ್ವಾತಂತ್ರ್ಯೋತ್ಸವದ ಮೇಲೂ ಕೊರೋನಾ ಕರಿನೆರಳು ; ಕೆಂಪು ಕೋಟೆಯಲ್ಲಿ ಈ ಬಾರಿ ಸರಳ ಕಾರ್ಯಕ್ರಮ

ಕೇಂದ್ರ ಗೃಹ ಇಲಾಖೆಯು ಈಗಾಗಲೇ ಸಿದ್ದತೆ ಕೆಲಸ ಆರಂಭಿಸಿದೆ. ಕಾರ್ಯಕ್ರಮದ ಸ್ವರೂಪದ ಬಗ್ಗೆಯೂ ಯೋಚನೆ ಮಾಡುತ್ತಿದೆ. ಈ ಬಾರಿಯ ಕೆಂಪು ಕೋಟೆಯಲ್ಲಿನ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕೆಲವೇ ಕೆಲವು ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಿದೆ.

news18-kannada
Updated:July 24, 2020, 12:39 PM IST
Independence Day 2020 : ಸ್ವಾತಂತ್ರ್ಯೋತ್ಸವದ ಮೇಲೂ ಕೊರೋನಾ ಕರಿನೆರಳು ; ಕೆಂಪು ಕೋಟೆಯಲ್ಲಿ ಈ ಬಾರಿ ಸರಳ ಕಾರ್ಯಕ್ರಮ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ.24): ಕೊರೋನಾ ಕಷ್ಟ ಬಂದ ಮೇಲೆ ಜನರ ಜೀವನ ಶೈಲಿಯೇ ಬದಲಾಗಿದೆ. ಕೆಲಸ ಮಾಡುವ ರೀತಿಯೂ ಬದಲಾಗಿದೆ. ಹಾಗೆಯೆ ಎಲ್ಲಾ ರೀತಿಯ ಕಾರ್ಯಕ್ರಮಗಳ ಸ್ವರೂಪವೂ ಬದಲಾಗಿದೆ. ಇದಕ್ಕೆ ಹೆಮ್ಮೆಯ ಸ್ವಾತಂತ್ರ್ಯ ದಿನಾಚರಣೆ ಕೂಡ ಹೊರತಾಗಿಲ್ಲ. ಅದರಲ್ಲೂ ಕೆಂಪು ಕೋಟೆ ಮೇಲೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೂ ತಪ್ಪಿಲ್ಲ.

ಕಾರ್ಯಕ್ರಮ ಆಯೋಜಿಸುವ ಕೇಂದ್ರ ಗೃಹ ಇಲಾಖೆಯು ಈಗಾಗಲೇ ಸಿದ್ದತೆ ಕೆಲಸ ಆರಂಭಿಸಿದೆ. ಕಾರ್ಯಕ್ರಮದ ಸ್ವರೂಪದ ಬಗ್ಗೆಯೂ ಯೋಚನೆ ಮಾಡುತ್ತಿದೆ. ಈ ಬಾರಿಯ ಕೆಂಪು ಕೋಟೆಯಲ್ಲಿನ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕೆಲವೇ ಕೆಲವು ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಿದೆ.

ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರು, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಮಾಜಿ ಪ್ರಧಾನ ಮಂತ್ರಿಗಳು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳು, ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿತ್ತು. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ‌ ಬಾರಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು ಅದೇ ಕಾರಣಕ್ಕೆ ಕೆಲವೇ ಜನರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ‌.

ಸ್ವಾತಂತ್ರ್ಯ ದಿನಾಚರಣೆಯನ್ನು ಯಾವ ರೀತಿ ಆಚರಿಸಬೇಕೆಂದು ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿರುವ ಕೇಂದ್ರ ಗೃಹ ಇಲಾಖೆ, ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಿ.‌ ಕಾರ್ಯಕ್ರಮಕ್ಕೆ ಅತ್ಯಂತ ಕಡಿಮೆ ಜನರನ್ನು ಆಹ್ವಾನಿಸಿ. ಆಹ್ವಾನಿತರೆಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ. ಮುಖ್ಯವಾಗಿ ಈ ಬಾರಿ ಕೊರೋನಾ ವಾರಿಯರ್ಸ್ ಗಳಿಗೆ ಆಮಂತ್ರಣ ನೀಡಿ ಎಂದು ತಿಳಿಸಿದೆ

ಇದನ್ನೂ ಓದಿ : Coronavirus India Update : ದೇಶದಲ್ಲಿ ಪ್ರತಿ ದಿನ ಸುಮಾರು 50 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗಲು ಆರಂಭ

ಕ್ರೂರಿ ಕೊರೋನಾ ವಿರುದ್ದ ಗೆದ್ದು ಬಂದವರನ್ನು ಕಾರ್ಯಕ್ರಮಕ್ಕೆ ಕರೆತನ್ನಿ. ರಾಜ್ಯಪಾಲರಿಗೆ ಮನೆಯಿಂದಲೇ ಭಾಷಣ ಮಾಡುವ ವ್ಯವಸ್ಥೆ ಕೈಗೊಳ್ಳಿ. ಮಿಲಿಟರಿ ಬ್ಯಾಂಡ್‌ಗಳ ರೆಕಾರ್ಡ್ ವೀಡಿಯೊ ಪ್ಲೇ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿ. ಮತ್ತು ಇಡೀ ಕಾರ್ಯಕ್ರಮವನ್ನು ತಂತ್ರಜ್ಞಾನ ಬಳಸಿಕೊಂಡು ವೆಬ್-ಕಾಸ್ಟ್ ಮೂಲಕ ಜನರಿಗೆ ತಲುಪಿಸಿ ಎಂದು ಸೂಚಿಸಿದೆ.‌
ನಿನ್ನೆ ಒಂದೇ ದಿನ 740 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 30 ಸಾವಿರದ ಗಡಿ‌ ದಾಟಿದ್ದು 30,601ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣಮುಖರಾದವರು 8,17,209 ಜನ ಮಾತ್ರ. ದೇಶದಲ್ಲಿ ಇನ್ನೂ 4,40,135 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ
Published by: G Hareeshkumar
First published: July 24, 2020, 12:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading