CoronaVirus: ದೇಶದಲ್ಲಿ 17 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ಶನಿವಾರ 853 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 37 ಸಾವಿರದ ಗಡಿ‌ ದಾಟಿದ್ದು 37,364ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

news18-kannada
Updated:August 2, 2020, 12:05 PM IST
CoronaVirus: ದೇಶದಲ್ಲಿ 17 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು ಹರಡುವಿಕೆ ಇದೀಗ ಶರವೇಗ ಪಡೆದುಕೊಂಡಿದೆ. ಕೊರೋನಾ ಕಡಿಮೆ ಇದ್ದಾಗ ಲಾಕ್‌ಡೌನ್ ಮಾಡಿ ತೀವ್ರಗೊಂಡಾಗ‌ ಅನ್‌ಲಾಕ್‌ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಾ 17 ಲಕ್ಷದ ಗಡಿ ದಾಟಿದೆ. ಅದೂ ಅಲ್ಲದೆ ಮೂರನೇ ಹಂತದ ಅನ್ಲಾಕ್‌ ಕೂಡ ಜಾರಿ ಆಗುತ್ತಿದ್ದಂತೆ ಪ್ರತಿದಿನವೂ ಅರ್ಧ ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರು ಕಾಣಿಸಿಕೊಳ್ಳುವ ಟ್ರೆಂಡ್ ಆರಂಭವಾಗಿದೆ.

ಹೀಗೆ ಮುಂದುವರದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನುಡಿದಿದ್ದ ಭವಿಷ್ಯದಂತೆ ಆಗಸ್ಟ್ ‌ 10ರೊಳಗೆ ದೇಶದ ಕೊರೊನಾ ಪೀಡಿತರ ಸಂಖ್ಯೆ 20 ಲಕ್ಷ ದಾಟಲಿದೆ. ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಾತ್ರ ದಾಖಲಾಗಿದ್ದವು. ನಂತರ ನೋಡನೋಡುತ್ತಿದ್ದಂತೆ ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದವು.

ಅದಾದಮೇಲೆ ಜುಲೈ 20ರಿಂದ 37 ಸಾವಿರಕ್ಕೂ ಪ್ರಕರಣಗಳು ಪತ್ತೆಯಾಗಿದ್ದವು. ಜುಲೈ 31ಕ್ಕೆ 57,117 ಪ್ರಕರಣಗಳು ಕಂಡುಬಂದಿದ್ದವು‌. ಈಗ ತುಸು ಕಡಿಮೆ ಆಗಿ ಆಗಸ್ಟ್ 1ನೇ ತಾರೀಖು 54,736 ಪ್ರಕರಣಗಳು ಗೋಚರಿಸಿವೆ. ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 17,50,724ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಶನಿವಾರ 853 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 37 ಸಾವಿರದ ಗಡಿ‌ ದಾಟಿದ್ದು 37,364ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 11,45,630 ಜನ ಮಾತ್ರ. ದೇಶದಲ್ಲಿ ಇನ್ನೂ 5,67,730 ಜನರಲ್ಲಿ ಕೊರೊನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಕಾಂಗ್ರೆಸ್ ಮಾಜಿ ಅಧ್ಯಕ್ಷನ ಮೊಬೈಲ್‌ನಿಂದ ಅಶ್ಲೀಲ ಫೋಟೋ ಪೋಸ್ಟ್‌; ವಿಜಯಪುರದಲ್ಲಿ ಅವಾಂತರ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252, ಜುಲೈ 7ರಂದು 22,752, ಜುಲೈ 8ರಂದು 24,879, ಜುಲೈ 9ರಂದು 26,506, ಜುಲೈ 10ರಂದು 27,114, ಜುಲೈ 11ರಂದು 28,637, ಜುಲೈ 12ರಂದು‌ 28,701, ಜುಲೈ 13ರಂದು 28,498, ಜುಲೈ 14ರಂದು 29,429, ಜುಲೈ 15ರಂದು 32,695, ಜುಲೈ 16ರಂದು‌ 34,956, ಜುಲೈ 17ರಂದು 34,884,
ಜುಲೈ 18ರಂದು 38,902, ಜುಲೈ 19ರಂದು 40,425, ಜುಲೈ 20ರಂದು 37,148, ಜುಲೈ 21ರಂದು 37,724, ಜುಲೈ 22ರಂದು 45,720, ಜುಲೈ 23ರಂದು 49,310, ಜುಲೈ 24ರಂದು 48,916,‌ ಜುಲೈ 25ರಂದು 48,661, ಜುಲೈ 26ರಂದು 49,931, ಜುಲೈ 27ರಂದು 47,704, ಜುಲೈ 28ರಂದು 48,512 ಹಾಗೂ ಜುಲೈ 29ರಂದು 52,123, ಜುಲೈ 30ರಂದು 55,079, ಜುಲೈ‌ 31ರಂದು 57,117 ಹಾಗೂ ಆಗಸ್ಟ್ 1ರಂದು 54,736 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: MAshok Kumar
First published: August 2, 2020, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading