Loan Moratorium: ಸೆ.​​28 ರವರೆಗೂ ಇಎಂಐ ಮುಂದೂಡಿಕೆ - ಸುಪ್ರೀಂ ಕೋರ್ಟ್​ ಆದೇಶ

ಈ ಸಂಬಂಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಎಲ್ಲಾ ವೈಯಕ್ತಿಕ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ಇನ್ನೂ 18 ದಿನ ಅಂದರೆ ಸೆಪ್ಟೆಂಬರ್​​​ 28 ರವರೆಗೂ ಸಾಲದ ಕಂತುಗಳ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದೆ.

news18-kannada
Updated:September 10, 2020, 3:55 PM IST
Loan Moratorium: ಸೆ.​​28 ರವರೆಗೂ ಇಎಂಐ ಮುಂದೂಡಿಕೆ - ಸುಪ್ರೀಂ ಕೋರ್ಟ್​ ಆದೇಶ
ಸುಪ್ರೀಂಕೋರ್ಟ್​.
  • Share this:
ನವದೆಹಲಿ(ಸೆ.10): ಇಎಂಐ ಮೊರಾಟೋರಿಯಂ (ಸಾಲದ ಕಂತು ಮುಂದೂಡಿಕೆ) ಯೋಜನೆಯನ್ನು ಸೆಪ್ಟೆಂಬರ್​​ 28ನೇ ತಾರೀಕಿನವರೆಗೂ ಮುಂದೂಡಿ ಸುಪ್ರೀಂ ಕೋರ್ಟ್​​ ಆದೇಶ ಹೊರಡಿಸಿದೆ. ಈ ಸಂಬಂಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಎಲ್ಲಾ ವೈಯಕ್ತಿಕ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ಇನ್ನೂ 18 ದಿನ ಅಂದರೆ ಸೆಪ್ಟೆಂಬರ್​​​ 28 ರವರೆಗೂ ಸಾಲದ ಕಂತುಗಳ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದೆ.

ಈ ಹಿಂದೆಯೇ ಕೊರೋನಾ ಲಾಕ್‌ಡೌನ್ ನಂತರ ಜನಸಾಮಾನ್ಯರ ಆರ್ಥಿಕ ಸಂಕಷ್ಟ ಗಮನದಲ್ಲಿಟ್ಟುಕೊಂಡ ರಿಸರ್ವ್‌ ಬ್ಯಾಂಕ್‌ ಮಾರಾಟೋರಿಯಂ ಸ್ಕೀಮ್‌ (ಕಂತುಗಳ ಮುಂದೂಡಿಕೆ) ಆ.31ರವರೆಗೆ ವಿಸ್ತರಿಸಿತ್ತು.

ಇದರ ಅವಧಿ ಮುಗಿದ ನಂತರ ಮೊರಾಟೋರಿಯಂ ಅವಧಿ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಮೊರಾಟೋರಿಯಂ ಸ್ಕೀಂ ಅನ್ನು ಇನ್ನೂ ಎರಡು ವರ್ಷಗಳವರೆಗೆ ಮುಂದೂಡಲು ಅವಕಾಶವಿದೆ ಎಂದು ಕೇಂದ್ರ ಸರಕಾರವೇ ತಿಳಿಸಿರುವುದು ಸಾಲಗಾರರಲ್ಲಿ ಸಂತಸ ಮೂಡಿಸಿತ್ತು. ಈ ಸಂಬಂಧ ಹಲವರು ಸುಪ್ರೀಂಕೋರ್ಟ್​ ಮೊರೆ ಹೋದರು. ಇದರ ಕುರಿತು ಈಗ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಸೆ.28 ರವರೆಗೂ ಅವಧಿ ವಿಸ್ತರಿಸಿದೆ.

ಇದನ್ನೂ ಓದಿ: Monsoon 2020: ಕೇರಳ, ಕರ್ನಾಟಕ, ಅಸ್ಸಾಂನಲ್ಲಿ 4 ದಿನ ವಿಪರೀತ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ
Published by: Ganesh Nachikethu
First published: September 10, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading