ದಕ್ಷಿಣ ಕನ್ನಡದಲ್ಲಿ ಕೈಕೊಟ್ಟ ನೆಟ್​​​ವರ್ಕ್ - ಆನ್​​ಲೈನ್​​ ಕೇಳಲಾಗದೆ ವಿದ್ಯಾರ್ಥಿಗಳಿಗೆ ಸಂಕಷ್ಟ

ಕೊರೋನಾದಿಂದ ಶಾಲಾ ಕಾಲೇಜುಗಳು ಶುರು ಆಗದಿದ್ದರೂ ಆನ್‌ಲೈನ್ ತರಗತಿಗಳು ನಡೆಯುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಬೆಟ್ಟದ ನೆತ್ತಿ ಮೇಲೆ ಹತ್ತಿ ಕೂರಬೇಕಾಗುತ್ತದೆ. ಕಾಡುಪ್ರದೇಶದಲ್ಲಿ ಸೊಳ್ಳೆ ಕಾಟದ ಜೊತೆ ಕಾಡುಪ್ರಾಣಿಗಳ ಭಯ ಇರುವುದರಿಂದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ತಲೆಬಿಸಿ ಶುರುವಾಗಿದೆ.

news18-kannada
Updated:September 6, 2020, 8:17 PM IST
ದಕ್ಷಿಣ ಕನ್ನಡದಲ್ಲಿ ಕೈಕೊಟ್ಟ ನೆಟ್​​​ವರ್ಕ್ - ಆನ್​​ಲೈನ್​​ ಕೇಳಲಾಗದೆ ವಿದ್ಯಾರ್ಥಿಗಳಿಗೆ ಸಂಕಷ್ಟ
ಆನ್​​ಲೈನ್​​​ ಕ್ಲಾಸ್​​​
  • Share this:
ದಕ್ಷಿಣ ಕನ್ನಡ(ಸೆ.06): ನಾವು ಇವತ್ತು ಡಿಜಿಟಲ್ ಯುಗದಲ್ಲಿದ್ದೇವೆ. ದಿನಕಳೆದಂತೆ ಎಲ್ಲವೂ ಡಿಜಿಟಲ್‌ಮಯವಾಗುತ್ತಿದೆ. ಆದ್ರೆ ಇನ್ನು ಕೂಡಾ ನೆಟ್‌ವರ್ಕ್ ಸಿಗದ ಅದೆಷ್ಟೋ ಹಳ್ಳಿಗಳು ನಮ್ಮಲ್ಲಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇದೇ ರೀತಿಯ ಹಳ್ಳಿಗಳಿದ್ದು, ಅಲ್ಲಿನ ಜನ ನೆಟ್‌ವರ್ಕ್ ಸಂಕಟಕ್ಕೆ ಒಳಗಾಗಿದ್ದಾರೆ. ಇವತ್ತು ನಗರಗಳು ಎಷ್ಟೇ ಮುಂದುವರಿದಿದ್ದರೂ ಸಹ ಹಳ್ಳಿಗಳಲ್ಲಿ ಇನ್ನು ಕೂಡಾ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಕ್ಕೆ ನಮ್ಮನ್ನಾಳುವ ವ್ಯವಸ್ಥೆಗಳಿಗೆ ಸಾಧ್ಯವಾಗಿಲ್ಲ. ಇಂದು ಎಲ್ಲವೂ ಡಿಜಿಟಲ್‌ಮಯ ಡಿಜಿಟಲ್‌ಮಯ ಅಂತಾ ಬೊಬ್ಬೆ ಹೊಡೆದುಕೊಂಡರು ಸಹ ಕನಿಷ್ಟ ಮೊಬೈಲ್ ನೆಟ್‌ವರ್ಕ್ ಸಹ ಸಿಗದ ಹಳ್ಳಿಗಳು ನಮ್ಮಲ್ಲಿ ಇದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿರುವ ಅದೆಷ್ಟೋ ಹಳ್ಳಿಗಳಲ್ಲಿ ಇಂದು ಕೂಡಾ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಹೀಗಾಗಿ ಯುವ ವಿದ್ಯಾರ್ಥಿಗಳು, ನಾಗರಿಕರು ನೆಟ್‌ವರ್ಕ್‌ಗಾಗಿ ಬೆಟ್ಟ ಗುಡ್ಡ ಹತ್ತಬೇಕಾದ ಪರಿಸ್ಥಿತಿ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು, ಮೊಗ್ರು, ಅರಸಿನಮಕ್ಕಿ, ಶಿಶಿಲ, ಸುಳ್ಯ ತಾಲೂಕಿನ ಕೊಲ್ಲಮೊಗ್ರು, ಹರಿಹರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದೆ. ಇನ್ನು ಕೆಲ ಭಾಗದಲ್ಲಿ ಬಿ.ಎಸ್.ಎನ್.ಎಲ್ ಟವರ್ ಇದ್ರು ಕೂಡಾ ಕರೆಂಟ್ ಹೋದ್ರೆ ಈ ಟವರ್ ಕೂಡಾ ಸ್ತಬ್ಧವಾಗುತ್ತೆ. ಕರೆಂಟ್ ಹೋದ ಸಂದರ್ಭ ಟವರ್ ವರ್ಕ್ ಆಗಲು ಜನರೇಟರ್‌ಗೆ ಡಿಸೇಲ್ ಹಾಕುವುದಕ್ಕೂ ಸಂಸ್ಥೆಯಲ್ಲಿ ಹಣವಿಲ್ಲದಂತ ಪರಿಸ್ಥಿತಿಯಿದೆ.

ಕೊರೋನಾದಿಂದ ಶಾಲಾ ಕಾಲೇಜುಗಳು ಶುರು ಆಗದಿದ್ದರೂ ಆನ್‌ಲೈನ್ ತರಗತಿಗಳು ನಡೆಯುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಬೆಟ್ಟದ ನೆತ್ತಿ ಮೇಲೆ ಹತ್ತಿ ಕೂರಬೇಕಾಗುತ್ತದೆ. ಕಾಡುಪ್ರದೇಶದಲ್ಲಿ ಸೊಳ್ಳೆ ಕಾಟದ ಜೊತೆ ಕಾಡುಪ್ರಾಣಿಗಳ ಭಯ ಇರುವುದರಿಂದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ತಲೆಬಿಸಿ ಶುರುವಾಗಿದೆ.

ನಾವು ಇವತ್ತು ವ್ಯವಸ್ಥೆಗಳನ್ನು ಎಷ್ಟೇ ಡಿಜಿಟಲೈಸೇಶನ್ ಮಾಡಿದ್ರು ಸಹ ಹಳ್ಳಿಗಳಲ್ಲಿ ಕನಿಷ್ಟ ಮೊಬೈಲ್‌ ನೆಟ್‌ವರ್ಕ್ ಒದಗಿಸದೇ ಅದರ ಉದ್ದೇಶವನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಈಗ ಇರುವ ಬಿ.ಎಸ್.ಎನ್.ಎಲ್ ಸಂಸ್ಥೆಯನ್ನು ಉದ್ಧಾರ ಮಾಡಿದ್ರೆ ಕನಿಷ್ಟ ಟವರ್ ಇರುವ ಊರುಗಳ ಸಮಸ್ಯೆಯನ್ನಾದರೂ ಬಗೆಹರಿಸಬಹುದು. ಒಟ್ಟಿನಲ್ಲಿ ಆದಷ್ಟು ಬೇಗ ಇಂತಹ ನೆಟ್‌ವರ್ಕ್ ಇಲ್ಲದ ಹಳ್ಳಿಗಳ ನೆಟ್‌ವರ್ಕ್ ಸಮಸ್ಯೆ ದೂರವಾಗಲಿ ಎಂಬುದೇ ನಮ್ಮ ಆಶಯ.
Published by: Ganesh Nachikethu
First published: September 6, 2020, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading