SP Balasubrahmanyam Health Update: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ ಎಸ್​ಪಿ ಚರಣ್​..!

ಎಸ್​ಪಿಬಿ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿವೆ. ಇದು ಕೇವಲ ಗಾಳಿ ಸುದ್ದಿ. ಇದನ್ನು ನಂಬಬೇಡಿ ಎಂದು ಚರಣ್​ ಜನರಲ್ಲಿ ಮನವಿ ಮಾಡಿದ್ದಾರೆ. ಎಸ್​ಪಿಸಿ ಅವರು ವೆಂಟಿಲೇರ್​ನಲ್ಲೇ ಇದ್ದಾರೆ. ಆದರೆ ಅವರ ಶ್ವಾಸಕೋಶದ ಸ್ಥಿತಿ ಮೆಲ್ಲನೆ ಸುಧಾರಿಸುತ್ತಿದೆ. ಆದರೆ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಬದಲಾವಣೆಗಳು ಇಲ್ಲ.ಇದೇ ಕಾರಣದಿಂದಾಗಿ ಈಗ ಅವರ ಆರೋಗ್ಯ ಕುರಿತಾದ ಮಾಹಿತಿಯನ್ನು ವಾರದಲ್ಲಿ ಎರಡು ಸಲ ಮಾತ್ರ ನೀಡುತ್ತೇನೆ ಎಂದಿದ್ದಾರೆ. 

Anitha E | news18-kannada
Updated:September 11, 2020, 11:37 AM IST
SP Balasubrahmanyam Health Update: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ ಎಸ್​ಪಿ ಚರಣ್​..!
ಬಾಲಸುಬ್ರಹ್ಮಣ್ಯಂ
  • Share this:
ಖ್ಯಾತ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕುರಿತಾಗಿ ಅವರ ಮಗ ಚರಣ್​ ವಾರದಲ್ಲಿ ಎರಡರಿಂದ ಮೂರು ಸಲ ಅಪ್ಡೇಟ್​ ನೀಡುತ್ತಿರುತ್ತಾರೆ. ಆದರೆ, ಆಗಾಗ ಸಾಮಾಜಿಕ ಜಾಲತಾಣದಲ್ಲಿ ಎಸ್​ಪಿಬಿ ಅವರ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿರುತ್ತವೆ. ಈ ಹಿಂದೆಯೂ ಸಹ ಹೀಗೆ ವದಂತಿಗಳು ಹರಿದಾಡುತ್ತಿದ್ದಾಗ ಎಸ್​.ಪಿ. ಚರಣ್​ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅಲ್ಲದೆ ಆಸ್ಪತ್ರೆಯ ವೈದ್ಯರು ಹಾಗೂ ನಾನು ನೀಡುವ ಮಾಹಿತಿ ಮಾತ್ರ ಅಧಿಕೃತ ಎಂದು ಸ್ಪಷ್ಟಪಡಿಸಿದ್ದರು. ಈಗಲೂ ಸಹ ನಿನ್ನೆ ಚರಣ್​ ಅವರು ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು, ಮತ್ತೆ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ತಂದೆಯ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಆದರೆ ಅದು, ತುಂಬಾ ನಿಧಾನಗತಿಯಲ್ಲಿ ಆಗುತ್ತಿದೆ. ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಡಿಸ್ಚಾರ್ಜ್​ ಆಗಿಲ್ಲ ಎಂದು ಹೇಳಿದ್ದಾರೆ. 

ಎಸ್​ಪಿಬಿ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿವೆ. ಇದು ಕೇವಲ ಗಾಳಿ ಸುದ್ದಿ. ಇದನ್ನು ನಂಬಬೇಡಿ ಎಂದು ಚರಣ್​ ಜನರಲ್ಲಿ ಮನವಿ ಮಾಡಿದ್ದಾರೆ.








View this post on Instagram






A post shared by S. P. Charan/Producer/Director (@spbcharan) on






ಎಸ್.ಪಿ. ಬಿ ಅವರನ್ನು ಇನ್ನೂ ಸಹ ವೆಂಟಿಲೇಟರ್ ಮತ್ತು ಇಸಿಎಂಒ ಸಪೋರ್ಟ್​ನಲ್ಲಿಟ್ಟು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಅವರ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಬದಲಾವಣೆಗಳು ಇಲ್ಲ.ಇದೇ ಕಾರಣದಿಂದಾಗಿ ಈಗ ಅವರ ಆರೋಗ್ಯ ಕುರಿತಾದ ಮಾಹಿತಿಯನ್ನು ವಾರದಲ್ಲಿ ಎರಡು ಸಲ ಮಾತ್ರ ನೀಡುತ್ತೇನೆ ಎಂದಿದ್ದಾರೆ.



ಕೊರೋನಾ ಸೋಂಕಿನಿಂದಾಗಿ ಆಗಸ್ಟ್​ 5 ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಗಸ್ಟ್​ 13ರ ಬಳಿಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೆ ಅವರಿಗೆ ಮತ್ತೆ ಕೋವಿಡ್​ ಪರೀಕ್ಷೆ ಮಾಡಲಾಗಿದ್ದು, ಅದು ನೆಗೆಟಿವ್ ಬಂದಿದೆ ಎಂದು ಚರಣ್ ತಿಳಿಸಿದ್ದರು. ಗಾಯಕನ ಆರೋಗ್ಯ ಸುಧಾರಿಸಲೆಂದು ಸೆಲೆಬ್ರಿಟಿಗಳು ಹಾಗೂ ಕೋಟ್ಯಂತರ ಮಂದಿ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.
Published by: Anitha E
First published: September 11, 2020, 11:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading