ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ ಯುವಕರು

ಸ್ಥಳೀಯರು ಯುವಕರನ್ನ ಪ್ರಶ್ನೆ ಮಾಡುತ್ತಿದ್ದಂತೆ ಏಕಾ ಏಕಿ ಕಾರ್ ಟರ್ನ್ ಮಾಡಿಕೊಂಡು ಸ್ಥಳದಿಂದ ಯುವಕರು ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್ ಕಾರಿನ ಹಿಂಭಾಗ ಯಾರೂ ಇರಲಿಲ್ಲ. ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಉಡುಪಿ ಮೂಲದ ನಾಲ್ಕೈದು ಯುವಕರ ತಂಡ  ನಿಸ್ಸಾನ್ ಕಾರಿನಲ್ಲಿ ಶೃಂಗೇರಿಗೆ ಪ್ರವಾಸಕ್ಕೆ ಬಂದಿದ್ದರು.

news18-kannada
Updated:July 26, 2020, 4:59 PM IST
ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ ಯುವಕರು
ಘಟನೆಯ ದೃಶ್ಯ
  • Share this:
ಚಿಕ್ಕಮಗಳೂರು(ಜು.26): ಮಾಸ್ಕ್ ಹಾಕದೇ ಇದ್ದುದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರು ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.  ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪಾಯ್ತು..  ತಪ್ಪಾಯ್ತು.. ಎಂದು ಸಿನಿಮೀಯ ರೀತಿಯಲ್ಲಿ ಕಾರ್ ಟರ್ನ್ ಮಾಡಿಕೊಂಡು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಮದಲ್ಲಿ ನಡೆದಿದೆ.

ಸ್ಥಳೀಯರು ಯುವಕರನ್ನ ಪ್ರಶ್ನೆ ಮಾಡುತ್ತಿದ್ದಂತೆ ಏಕಾ ಏಕಿ ಕಾರ್ ಟರ್ನ್ ಮಾಡಿಕೊಂಡು ಸ್ಥಳದಿಂದ ಯುವಕರು ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್ ಕಾರಿನ ಹಿಂಭಾಗ ಯಾರೂ ಇರಲಿಲ್ಲ. ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಉಡುಪಿ ಮೂಲದ ನಾಲ್ಕೈದು ಯುವಕರ ತಂಡ  ನಿಸ್ಸಾನ್ ಕಾರಿನಲ್ಲಿ ಶೃಂಗೇರಿಗೆ ಪ್ರವಾಸಕ್ಕೆ ಬಂದಿದ್ದರು.

ಶೃಂಗೇರಿಯ ನೆಮ್ಮಾರ್ ಬಳಿಯ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಫೋಟೋ ಶೂಟ್ ಮಾಡಿಕೊಳ್ತಿದ್ದರು ಮುಖಕ್ಕೆ ಮಾಸ್ಕ್ ಹಾಕದೆ ಬ್ರಿಡ್ಜ್ ಬಳಿ ಓಡಾಡ್ತಾ, ಅಂಗಡಿಗೆ ಹೋಗಿ ಬರುತ್ತಿದ್ದರು. ಅಂಗಡಿಯಲ್ಲಿದ್ದ ಮಹಿಳೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಕ್ಕೆ ಮಹಿಳೆ ಒಬ್ಬರೇ ಇದ್ರು ಎಂದು ಯುವಕರು ಮಹಿಳೆ ಜೊತೆ ಕಿರಿಕ್ ಮಾಡಿದ್ದಾರೆ. ಮಹಿಳೆ ಆ ಉಡುಪಿ ಮೂಲದ ಯುವಕರ ಜೊತೆ ಮಾಸ್ಕ್ ಧರಿಸಿ ಎಂದು ಜಗಳ ಮಾಡಿದ್ದಾರೆ.

ಕಲಬುರ್ಗಿಯಲ್ಲಿ ಕೊರೋನಾ ಕರ್ತವ್ಯಕ್ಕೂ ಕಳ್ಳಾಟ; ಮುಂದೆ ಕೆಲಸವೇ ಸಿಗದಂತೆ ಮಾಡುವುದಾಗಿ ಡಿಸಿ ಶರತ್ ಎಚ್ಚರಿಕೆ

ಗಲಾಟೆ ಕಂಡು ಅಕ್ಕಪಕ್ಕದ ಜನ ಬರುತ್ತಿದ್ದಂತೆ ಯುವಕರು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಆದರೆ, ಸ್ಥಳೀಯ ಯುವಕರು ಬಂದು ಪ್ರವಾಸಿ ಯುವಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ತಪ್ಪಾಯ್ತು... ತಪ್ಪಾಯ್ತು... ಎಂದು ಎಸ್ಕೇಪ್ ಆಗಿದ್ದಾರೆ. ಆದರೆ, ಅವರು ಕಾರನ್ನ ಟರ್ನ್ ಮಾಡಿದ ರೀತಿ ಸಿನಿಮೀಯ ಮಾದರಿಯಲ್ಲಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾರಿನ ಹಿಂಭಾಗ ಯಾರಾದ್ರು ಇದ್ದಿದ್ರೆ ಏನಾದ್ರು ಒಂದು ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಏನೂ ಅಗಿಲ್ಲ.  ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published by: Latha CG
First published: July 26, 2020, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading