HOME » NEWS » Coronavirus-latest-news » SENIOR IAS OFFICER TESTED CORONAVIRUS POSITIVE IN BENGALURU GNR

ಹಿರಿಯ ಐಪಿಎಸ್​​ ಅಧಿಕಾರಿ ಜತೆ ಮತ್ತಿಬ್ಬರು ಕಾನ್ಸ್​​ಟೇಬಲ್​​ಗಳಿಗೆ ಕೊರೋನಾ - ಆತಂಕದಲ್ಲಿ ಪೊಲೀಸ್​ ಇಲಾಖೆ

ಎರಡು ದಿನಗಳ ಹಿಂದೆಯಷ್ಟೇ ಪೊಲೀಸ ಕಾನ್ಸ್​ಟೇಬಲ್​ ಒಬ್ಬರಿಗೆ ಕೊರೋನಾ ಬಂದ ಪರಿಣಾಮ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಬೆನ್ನಲ್ಲೀಗ ಹಿರಿಯ ಐಪಿಎಸ್ ಅಧಿಕಾರಿಗೆ ಕೊರೋನಾ ಬಂದಿದ್ದರಿಂದ ಉಳಿದ ಸಿಬ್ಬಂದಿಗೆ ಭೀತಿ ಶುರುವಾಗಿದೆ.

news18-kannada
Updated:June 24, 2020, 1:03 PM IST
ಹಿರಿಯ ಐಪಿಎಸ್​​ ಅಧಿಕಾರಿ ಜತೆ ಮತ್ತಿಬ್ಬರು ಕಾನ್ಸ್​​ಟೇಬಲ್​​ಗಳಿಗೆ ಕೊರೋನಾ - ಆತಂಕದಲ್ಲಿ ಪೊಲೀಸ್​ ಇಲಾಖೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜೂ.24): ಪೊಲೀಸ್​​ ಕಾನ್ಸ್​ಟೇಬಲ್​​​ಗಳ ಬೆನ್ನಲ್ಲೀಗ ಹಿರಿಯ ಐಪಿಎಸ್ ಅಧಿಕಾರಿಗೂ ಕೊರೋನಾ ಸೊಂಕು ಪತ್ತೆಯಾಗಿದೆ. ಕೆಎಸ್​​ಆರ್​​ಪಿ ಕಮ್ಯಾಂಡೆಟ್ ಆಗಿದ್ದ ಈ ಐಪಿಎಸ್​ ಅಧಿಕಾರಿಗೆ ಸೋಂಕು ಖಚಿತವಾಗಿದ್ದು, ಕೋವಿಡ್​-19 ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಹಿರಿಯ ಐಪಿಎಸ್ ಅಧಿಕಾರಿ ಆಸ್ಟಿನ್ ಟೌನ್​​​ನ ಕ್ವಾಟ್ರಸ್​ನಲ್ಲಿದ್ದರು. ಇವರಿಗೆ ಸೋಂಕು ಕಾಣಿಸಿಕೊಂಡ ಸ್ಥಳೀಯರಲ್ಲಿ ಕೊರೋನಾ ಆತಂಕ ಮನೆ ಮಾಡಿದೆ. ಕೆಎಸ್​​ಆರ್​​​ಪಿಯಲ್ಲಿ ರಾಜ್ಯಾದ್ಯಂತ 62 ಸಿಬ್ಬಂದಿಗೆ ಪಾಸಿಟಿವ್​​ ಬಂದಿದೆ. ಅದರಲ್ಲಿ ಬೆಂಗಳೂರಿನಲ್ಲೇ 11 ಮಂದಿ ಸಿಬ್ಬಂದಿ ಇದ್ಧಾರೆ.

ಎರಡು ದಿನಗಳ ಹಿಂದೆಯಷ್ಟೇ ಪೊಲೀಸ ಕಾನ್ಸ್​ಟೇಬಲ್​ ಒಬ್ಬರಿಗೆ ಕೊರೋನಾ ಬಂದ ಪರಿಣಾಮ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಬೆನ್ನಲ್ಲೀಗ ಹಿರಿಯ ಐಪಿಎಸ್ ಅಧಿಕಾರಿಗೆ ಕೊರೋನಾ ಬಂದಿದ್ದರಿಂದ ಉಳಿದ ಸಿಬ್ಬಂದಿಗೆ ಭೀತಿ ಶುರುವಾಗಿದೆ.

ಇದನ್ನೂ ಓದಿ: Coronavirus Updates: ದೇಶದಲ್ಲಿ ಕೋವಿಡ್​​-19 ಕಾವು: ನಾಲ್ಕೂವರೆ ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಇನ್ನೊಂದೆಡೆ ಸೋಂಕಿತ ಐಪಿಎಸ್​​ ಅಧಿಕಾರಿ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಇವರ ಟ್ರಾವೆಲ್​​​ ಹಿಸ್ಟರಿ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಇವರು ಭೇಟಿ ನೀಡಿದ್ದ ಎಲ್ಲಾ ಕಚೇರಿಗಳನ್ನು ಸೀಲ್​ಡೌನ್​ ಮಾಡಲಾಗಿದೆ.

ಐಪಿಎಸ್​ ಅಧಿಕಾರಿ ಮನೆಯವರನ್ನು ಹೋಮ್​​ ಕ್ವಾರಂಟೈನ್​​ ಮಾಡಲಾಗಿದೆ.  ಹೀಗಿರುವಾಗಲೇ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮತ್ತೆ ಇಬ್ಬರು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಇವರ ಜತೆಗೆ ಸಂಪರ್ಕ ಹೊಂದಿದ್ದವರನ್ನು ಕೂಡ ಹೋಮ್​​ ಕ್ವಾರಂಟೈನ್​​ ಮಾಡಲಾಗುತ್ತದೆ.
First published: June 24, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories