HOME » NEWS » Coronavirus-latest-news » RUSSIA APPROVES SINGLE DOSE SPUTNIK LIGHT COVID19 VACCINE WITH 80 PERSENT EFFICACY KVD

Sputnik Light: ಭಾರತಕ್ಕೆ ಹೊಸದಾಗಿ ಬಂದಿರುವ ರಷ್ಯಾದ ಸ್ಪುಟ್ನಿಕ್​​ ವ್ಯಾಕ್ಸಿನ್​ ಒಂದೇ ಡೋಸ್​ ಸಾಕೇ?

ಸ್ಪುಟ್ನಿಕ್​ ಲೈಟ್​ ಲಸಿಕೆ ಒಂದೇ ಡೋಸ್​​ ಸಾಕೆಂಬುವುದು ಸಾಬೀತಾದರೆ ಭಾರತದಂತ ದೇಶಗಳ ಲಸಿಕೆ ಕೊರತೆಗೆ ದೊಡ್ಡ ನೆರವಾಗಲಿದೆ ಎನ್ನಲಾಗುತ್ತಿದೆ.  

Kavya V | news18-kannada
Updated:May 6, 2021, 7:35 PM IST
Sputnik Light: ಭಾರತಕ್ಕೆ ಹೊಸದಾಗಿ ಬಂದಿರುವ ರಷ್ಯಾದ ಸ್ಪುಟ್ನಿಕ್​​ ವ್ಯಾಕ್ಸಿನ್​ ಒಂದೇ ಡೋಸ್​ ಸಾಕೇ?
ಸ್ಪುಟ್ನಿಕ್​​ ಲೈಟ್​ ಲಸಿಕೆ
  • Share this:
ನವದೆಹಲಿ: ಮನುಕುಲವನ್ನೇ ಹೆಮ್ಮಾರಿ ಕೊರೋನಾ ಕಾಡುತ್ತಿದೆ. ಸೋಂಕಿನ ವಿರುದ್ಧ ನಮಗಿರುವ ಒಂದೇ ಅಸ್ತ್ರ ವ್ಯಾಕ್ಸಿನ್​. ವೈರಸ್​ನಿಂದ ತೀವ್ರವಾಗಿ ಹಾನಿಗೊಳಗಾಗಿರುವ ಭಾರತದಲ್ಲಿ ಸದ್ಯ ಲಸಿಕಾ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ದೇಶದಲ್ಲಿ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಯನ್ನು ನೀಡಲಾಗುತ್ತಿತ್ತು. ಈಗ ರಷ್ಯಾದ ಸ್ಪುಟ್ನಿಕ್​-ವಿ ಲಸಿಕೆ ಕೂಡ ಸೇರ್ಪಡೆಗೊಂಡಿದೆ. ಎರಡ್ಮೂರು ದಿನಗಳ ಹಿಂದೆ ಸ್ಪುಟ್ನಿಕ್​ ಲಸಿಕೆಯ ಮೊದಲ ಬ್ಯಾಚ್​ ರಷ್ಯಾದಿಂದ ಭಾರತಕ್ಕೆ ಬಂದಿಳಿದಿದೆ. ಇದರ ಬೆನ್ನಲ್ಲೇ ಸ್ಪುಟ್ನಿಕ್​​ ಲಸಿಕೆಯ ಉತ್ಪಾದನ ಕಂಪನಿ ಗುಡ್​ನ್ಯೂಸ್​ ನೀಡಿದೆ.

ಕೋವ್ಯಾಕ್ಸಿನ್​, ಕೋವಿಶೀಲ್ಡ್​ನಂತೆ ಸ್ಪುಟ್ನಿಕ್​ ಲೈಟ್​ ಲಸಿಕೆಯನ್ನು 2 ಡೋಸ್​ ನೀಡುವ ಅಗತ್ಯವಿಲ್ಲ.  ಸ್ಪುಟ್ನಿಕ್​ ಲೈಟ್​ ಲಸಿಕೆ ಒಂದು ಡೋಸ್​ ಪಡೆದರೆ ಶೇ.79.4ರಷ್ಟು ಪರಿಣಾಮಕಾರಿ ಎಂದು ರಷ್ಯನ್​​ ಡೈರೆಕ್ಟ್​​ ಇನ್ವೆಸ್ಟ್​ಮೆಂಟ್ ಫಂಡ್​​ (RDIF) ತಿಳಿಸಿದೆ. ಸ್ಪುಟ್ನಿಕ್​ ಲೈಟ್​ ಲಸಿಕೆ ಒಂದೇ ಡೋಸ್​ಗೆ ​ ಶೇ.79.4ರಷ್ಟು ಪರಿಣಾಮಕಾರಿಯಾಗಿದ್ದು, 2 ಡೋಸ್​ ಪಡೆದರೆ ಶೇ.91.6ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ಒಂದೇ ಡೋಸ್​ ಲಸಿಕೆ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಕಾಗುತ್ತದೆ ಎಂದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.

2020ರ ಡಿಸೆಂಬರ್​ 5ನೇ ತಾರೀಖಿನಿಂದ 2021ರ ಏಪ್ರಿಲ್​ 15ರವರೆಗೆ ನಡೆಸಿದ ಸಂಶೋಧನೆಯಿಂದ ಸ್ಪುಟ್ನಿಕ್​ ಲಸಿಕೆ ಒಂದೇ ಡೋಸ್​ ಸಾಕೆಂಬುವುದು ಸಾಬೀತಾಗಿದೆ. ಲಸಿಕೆಯ ಒಂದೇ ಡೋಸ್​ನಿಂದ ದೇಶದಲ್ಲಿ ರೋಗನಿರೋಧಕ ಕಾಯಕಗಳು ಸೃಷ್ಟಿಯಾಗಿರುವುದು ಕಂಡು ಬಂದಿದೆ ಎಂದು ಲಸಿಕಾ ಕಂಪನಿ ತಿಳಿಸಿದೆ. ಆದರೆ ಯೂರೋಪಿಯನ್​ ಮೆಡಿಕಲ್​ ಏಜೆನ್ಸಿ ಇದಕ್ಕೆ ಇನ್ನೂ ಅನುಮತಿ ನೀಡಿಲ್ಲ. ಒಂದೇ ಡೋಸ್​​​ ಸಾಕೆಂಬುವುದು ಇನ್ನು ಹಲವು ಸಂಶೋಧನೆಗಳ ಮೂಲಕ ಸಾಬೀತಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಸ್ಪುಟ್ನಿಕ್​ ಲೈಟ್​ ಲಸಿಕೆ ಒಂದೇ ಡೋಸ್​​ ಸಾಕೆಂಬುವುದು ಸಾಬೀತಾದರೆ ಭಾರತದಂತ ದೇಶಗಳ ಲಸಿಕೆ ಕೊರತೆಗೆ ದೊಡ್ಡ ನೆರವಾಗಲಿದೆ ಎನ್ನಲಾಗುತ್ತಿದೆ.
Youtube Video

ಮೇ 1ರಿಂದ ವಯಸ್ಕರೆಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮ ಸಾಂಕೇತಿಕವಾಗಿಯಷ್ಟೇ ಜಾರಿಯಾಗಿದೆ. ರಾಜ್ಯದಲ್ಲಿ ವ್ಯಾಕ್ಸಿನ್​​ ಕೊರತೆಯಿಂದಾಗಿ ಲಸಿಕಾ ಅಭಿಯಾನದಲ್ಲಿ ಸರ್ಕಾರ ಹಿಂದೆ ಬಿದ್ದಿದೆ. ರಾಜ್ಯದಲ್ಲಿನ ವ್ಯಾಕ್ಸಿನ್​ ಕೊರತೆ ಬಗ್ಗೆ   ಹೈ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಹೀಗಾಗಲೇ ಮೊದಲ ಡೋಸ್​ ಪಡೆದಿರುವ 65.83 ಲಕ್ಷ ಜನರಿಗೆ 2 ನೇ ಡೋಸ್ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್  ಲಸಿಕೆ ಮಾತ್ರ ಇದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್​ ಸೂಚಿಸಿದೆ.

3 ದಿನಗಳೊಳಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಬೇಕು. ಸಂದಿಗ್ಧ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಲಸಿಕೆ‌ ಉತ್ಪಾದಕರೊಂದಿಗೆ ಕೇಂದ್ರ ಸರ್ಕಾರ ಸಮಾಲೋಚಿಸಿ ಶೀಘ್ರ ಲಸಿಕೆ ಪೂರೈಕೆಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್​ ಸೂಚಿಸಿದೆ. ಇನ್ನು ಲಸಿಕೆ ಪಡೆಯಲು ಕೋವಿನ್ ಆ್ಯಪ್ ನಲ್ಲಿ ನೋಂದಣಿ ಕಡ್ಡಾಯ ಹಿನ್ನೆಲೆ ಜನರ ನೋಂದಣಿಗೆ ನೆರವಾಗಲು ಸರ್ಕಾರಕ್ಕೆ ಹೈಕೋರ್ಟ್​​ ಸೂಚನೆ ನೀಡಿತು.

ಇನ್ನು ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ತೀವ್ರವಾಗಿ ಹದಗೆಡತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಅವಲೋಕಿಸಿದರು.  ರಾಜ್ಯ ಮತ್ತು ಜಿಲ್ಲಾ ಮಟ್ಟದ ಪರಿಸ್ಥಿತಿಯ ಅವಲೋಕಿಸಿ ಔಷಧಿ ಮತ್ತು ಲಸಿಕೆಗಳು ಕೊರತೆಯಾಗದಂತೆ ಸೂಚನೆ ನೀಡಿದರು. ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.
Published by: Kavya V
First published: May 6, 2021, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories