ಕೊರೋನಾದಿಂದ ಗುಣಮುಖರಾದವರಿಗೂ ಮರುಸೋಂಕು; ವೈರಸ್ ರೂಪಾಂತರವಾಗುತ್ತಿದೆಯಾ? ಲಸಿಕೆ ಕಥೆ ಏನು?

ದೆಹಲಿ ಮತ್ತು ಮುಂಬೈನಲ್ಲಿ ಕೊರೋನಾ ಮರುಸೋಂಕು ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ವೈರಸ್ನ ಜೀನ್ ಮ್ಯೂಟೇಶನ್ ಆಗುತ್ತಿರುವುದು ಸ್ಪಷ್ಟವಾಗಿದೆ. ಇದು ಲಸಿಕೆ ತಯಾರಿಕೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಅವಲೋಕಿಸಲಾಗುತ್ತಿದೆ.

news18
Updated:September 19, 2020, 12:10 PM IST
ಕೊರೋನಾದಿಂದ ಗುಣಮುಖರಾದವರಿಗೂ ಮರುಸೋಂಕು; ವೈರಸ್ ರೂಪಾಂತರವಾಗುತ್ತಿದೆಯಾ? ಲಸಿಕೆ ಕಥೆ ಏನು?
ಕೊರೋನಾ ವೈರಸ್ ಸಾಂದರ್ಭಿಕ ಚಿತ್ರ
  • News18
  • Last Updated: September 19, 2020, 12:10 PM IST
  • Share this:
ನವದೆಹಲಿ(ಸೆ. 19): ಹಾಂಕಾಂಗ್​ನಲ್ಲಿ ಕೊರೋನಾ ಮರುಸೋಂಕು ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಅದಾದ ಬಳಿಕ ವಿಶ್ವದ ಹಲವು ಕಡೆ ಮರುಸೋಂಕು ಬಂದಿರುವುದು ತಿಳಿದುಬಂದಿದೆ. ಭಾರತದಲ್ಲೂ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ನೋಯ್ಡಾ ಮತ್ತು ಮುಂಬೈನ ಕೆಲ ಆರೋಗ್ಯ ಸೇವಕರಲ್ಲಿ ಕೋವಿಡ್-19 ಮರುಸೋಂಕು ಬಂದಿರುವುದು ದೃಢಪಟ್ಟಿದೆ. ಅಂದರೆ ಕೊರೋನಾ ಸೋಂಕು ಬಂದು ಗುಣಮುಖಗೊಂಡು ಆರೋಗ್ಯವಂತಾಗಿದ್ದವರಲ್ಲಿ ಮತ್ತೆ ಸೋಂಕು ಕಾಣಿಸಿದೆ. ಇಲ್ಲಿ ಗಮನಾರ್ಹ ವಿಚಾರ ಅಂದರೆ, ಇದು ಮೊದಲೇ ಇದ್ದ ಸೋಂಕು ಮತ್ತೆ ಸಕ್ರಿಯವಾಗಿದ್ದಲ್ಲ. ಹೊಸದಾಗಿ ಮತ್ತೆ ಸೋಂಕು ಕಾಣಿಸಿದೆ. ವೈರಾಣುವಿನ ತಳಿ ರೂಪಾಂತರ (Gene Mutation) ಆಗಿರುವುದು ಸ್ಪಷ್ಟವಾಗಿದೆ. ಇದು ವಿಜ್ಞಾನಿಗಳು ಹಾಗೂ ವೈದ್ಯರ ಕಳವಳಕ್ಕೆ ಕಾರಣವಾಗಿದೆ.

ದೆಹಲಿಯ ಗ್ರೇಟರ್ ನೋಯ್ಡಾದ ಜಿಐಎಂಎಸ್ ಆಸ್ಪತ್ರೆಯ ಇಬ್ಬರು ವ್ಯಕ್ತಿಗಳು ಹಾಗೂ ಎರಡು ಮುಂಬೈ ಆಸ್ಪತ್ರೆಗಳ ನಾಲ್ವರು ವ್ಯಕ್ತಿಗಳಿಗೆ ರೀಇನ್ಫೆಕ್ಷನ್ ಆಗಿದೆ. ಮೊದಲು ಬಂದ ಸೋಂಕಿನ ವೇಳೆ ಸಂಗ್ರಹಿಸಲಾಗಿದ್ದ ವೈರಸ್​ನ ಆರ್​ಎನ್​ಎ ಸ್ಯಾಂಪಲ್ ಹಾಗೂ ಮರುಸೋಂಕಿನ ವೇಳೆ ಸಂಗ್ರಹಿಸಲಾದ ಆರ್​ಎನ್​ಎ ಸ್ಯಾಂಪಲ್ ಅನ್ನು ತಾಳೆ ಮಾಡಿ ನೋಡಿದಾಗ ಎರಡರಲ್ಲೂ ತಳಿ ವ್ಯತ್ಯಾಸಗಳಿರುವುದನ್ನು ದೆಹಲಿಯ ಐಜಿಐಬಿ ಸಂಸ್ಥೆಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ಬಂಗಾಳ, ಕೇರಳದಿಂದ ದಾಳಿಗೆ ಸಂಚು ರೂಪಿಸುತ್ತಿದ್ದ 9 ಶಂಕಿತ ಅಲ್-ಖೈದಾ ಉಗ್ರರ ಬಂಧನ

ಒಬ್ಬ ವ್ಯಕ್ತಿಯ ದೇಹದಲ್ಲಿದ್ದ ವೈರಸ್​ನ ಆರ್​​ಎನ್​ಎ ಸ್ಯಾಂಪಲ್​ನ ಬಹಳ ವಿಭಿನ್ನ ತಳಿ ಪತ್ತೆಯಾಗಿದ್ದು ಇದು ಪ್ರತಿಕಾಯಗಳಿಗೆ (Antibodies) ಪ್ರತಿರೋಧ ಒಡ್ಡಬಲ್ಲುವಾಗಿವೆ. ಈ ಬೆಳವಣಿಗೆಯಿಂದ ತುಸು ಆತಂಕಕ್ಕೊಳಗಾಗಿರುವ ವಿಜ್ಞಾನಿಗಳು ವೈರಸ್ ರೂಪಾಂತರ ಪ್ರಕರಣಗಳ ಬಗ್ಗೆ ಇನ್ನಷ್ಟು ಸಂಶೋಧನೆ ಮತ್ತು ಅಧ್ಯಯನ ಮಾಡಲು ಮುಂದಾಗಿದ್ಧಾರೆ. ಈ ಜೀನ್ ಮ್ಯುಟೇಶನ್​ನಿಂದ ಲಸಿಕೆಗೆ ಹಿನ್ನಡೆಯಾಗುತ್ತದಾ ಎಂಬುದನ್ನೂ ಅವಲೋಕಿಸಲಾಗುತ್ತಿದೆ.

ಕೊರೋನಾ ವೈರಾಣುವನ್ನು ದೃಷ್ಟಿಯಲ್ಲಿಟ್ಟುಕೊಂಡು ಲಸಿಕೆಗಳನ್ನ ತಯಾರಿಸಲಾಗುತ್ತಿದೆ. ಆದರೆ, ರೂಪಾಂತರಗೊಂಡ ಜೀನ್ ಹೊಂದಿರುವ ವೈರಸ್​ ಮೇಲೂ ಅದೇ ಲಸಿಕೆ ಎಷ್ಟು ಪರಿಣಾಮಕಾರಿಯಾಗಬಲ್ಲುದು? ಈ ನಿಟ್ಟಿನಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ತಳಿ ರೂಪಾಂತರಗೊಂಡ ವೈರಸ್​ಗೆ ಲಸಿಕೆ ಪರಿಣಾಮಕಾರಿ ಆಗದೇ ಹೋದಲ್ಲಿ ವಿಶ್ವದ ಎಲ್ಲಾ ಲಸಿಕೆ ಯೋಜನೆಗಳು ನೀರಿನಲ್ಲಿ ಹೋಮ ಮಾಡಿದಂತಾಗುವ ಅಪಾಯ ಇದೆ.

ಆದರೆ, ಐಜಿಐಬಿಯ ನಿರ್ದೇಶಕ ಡಾ. ಅನುರಾಗ್ ಅಗರ್ವಾಲ್, ಇದೇನೂ ಅಷ್ಟು ವ್ಯಾಕುಲ ಪಡುವಂಥದ್ದಲ್ಲ. ಇಂಥ ಪ್ರಕರಣಗಳು ಬಹಳ ಅಪರೂಪ. ಸಾಗರದಲ್ಲಿ ನೀರಿನ ಹನಿ ಇದ್ದಂತೆ ಎಂದು ಹೇಳಿದ್ದಾರೆ.
Published by: Vijayasarthy SN
First published: September 19, 2020, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading