HOME » NEWS » Coronavirus-latest-news » REDLIGHT AREA STARTED WORK DESPITE CORONA FEARS DO YOU KNOW WHAT KIND OF PRECAUTIONS ARE TAKE IN THE PLACE MAK

ಕೊರೋನಾ ಭಯದ ನಡುವೆಯೂ ಕಾರ್ಯಾರಂಭಿಸಿವೆ ರೆಡ್‌ಲೈಟ್‌ ಏರಿಯಾ; ಇಲ್ಲಿನ ಮುನ್ನೆಚ್ಚರಿಕಾ ಕ್ರಮಗಳೇನು ಗೊತ್ತಾ?

ಗ್ರಾಹಕರ ಭೇಟಿಯ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನೂ ಸಹ ಲೈಂಕಿಕ ಕಾರ್ಯಕರ್ತೆಯರಿಗೆ ತಿಳಿ ಹೇಳಲಾಗಿದೆ. ಕೆಲವು ವೇಶ್ಯಾಗೃಹಗಳಲ್ಲಿ ವ್ಯಕ್ತಿಯ ತಾಪಮಾನ ಪರೀಕ್ಷಿಸುವ ಸಾಧನಗಳನ್ನೂ ಖರೀದಿಸಲಾಗಿದೆ. ಈ ನಡುವೆ ಫೋನ್ ಸೆಕ್ಸ್ ನಂತಹ ಸೇವೆಗಳ ಆಯ್ಕೆಗಳನ್ನೂ ಅನ್ವೇಷಿಸಲು ಸಿದ್ಧತೆ ನಡೆಸಲಾಗುತ್ತಿದೆ.

MAshok Kumar | news18-kannada
Updated:September 14, 2020, 6:50 PM IST
ಕೊರೋನಾ ಭಯದ ನಡುವೆಯೂ ಕಾರ್ಯಾರಂಭಿಸಿವೆ ರೆಡ್‌ಲೈಟ್‌ ಏರಿಯಾ; ಇಲ್ಲಿನ ಮುನ್ನೆಚ್ಚರಿಕಾ ಕ್ರಮಗಳೇನು ಗೊತ್ತಾ?
ಪುಣೆ ರೆಡ್‌ಲೈಟ್‌ ಏರಿಯಾ.
  • Share this:
ಮಾರಣಾಂತಿಕ ಕೊರೋನಾ ವೈರಸ್ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ವೇಶ್ಯಾಗೃಹಗಳಲ್ಲಿ ಕಾಂಡೋಮ್ ಕಡ್ಡಾಯ ಎಂಬುದನ್ನು ನೀವು ಕೇಳಿರಬೇಕು. ಆದರೆ, ಕೊರೋನಾದಂತಹ ಸಂದಿಗ್ಧತೆಯ ನಡುವೆ ಈಗ ಲೈಂಗಿಕ ಚಟುವಟಿಕೆಯ ಸಮಯದಲ್ಲೂ ಸಹ ಮುಖವಾಡಗಳು ಮತ್ತು ಕೈಗವಸುಗಳು ಅತ್ಯಗತ್ಯವಾಗಿದೆ ಎಂದರು ನೀವು ನಂಬಲೇಬೇಕು. ಲೈಂಗಿಕ ಕ್ರಿಯೆಯಲ್ಲಿ ತೊಡಗುವವರು ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಂಕು ನಿವಾರಕಗಳನ್ನೂ ಬಳಸುವಂತೆ ಗ್ರಾಹಕರಿಗೆ ತಿಳಿಸಲಾಗುತ್ತಿದೆ. ಕೆಲವು ಲೈಂಗಿಕ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನರ್‌ಗಳನ್ನು ಖರೀದಿಸಿ ವೇಶ್ಯಾಗೃಹದ ಹೊರಗೆ ಇರಿಸಿದ್ದಾರೆ. ಅಲ್ಲದೆ, ಲೈಂಗಿಕ ಕ್ರಿಯೆಯ ಮೊದಲು ಗ್ರಾಹಕರನ್ನು ಸ್ನಾನ ಮಾಡುವಂತೆ ಹಾಗೂ ಕೆಮ್ಮು ಅಥವಾ ಜ್ವರದಿಂದ ಬಳಲುತ್ತಿರುವ ಯಾವುದೇ ಗ್ರಾಹಕರನ್ನು ರಂಜಿಸದಂತೆಯೂ ಇದೀಗ ಸೂಚಿಸಲಾಗಿದೆ.

ರೆಡ್ ಲೈಟ್ ಏರಿಯಾ ಮತ್ತು ಸುಮಾರು 3000 ಲೈಂಗಿಕ ಕಾರ್ಯಕರ್ತೆಯರ ಜೀವನೋಪಾಯ ಎಂದು ಕರೆಯಲ್ಪಡುವ ಪುಣೆಯ ಬುಧ್ವರ್ ಪೆತ್ ಎಂಬ ಪ್ರದೇಶದ ಈಗಿನ ಚಿತ್ರಣವಿದು. 1.8 ಲಕ್ಷ ಕೊರೋನಾ ರೋಗಿಗಳನ್ನು ಹೊಂದಿರುವ ಪುಣೆ ದೇಶದ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ನಗರವಾಗಿದೆ.

ಪ್ರಪಂಚದ ಇತರ ಭಾಗಗಳಂತೆ, ಸಾಂಕ್ರಾಮಿಕ ರೋಗವು ಇಲ್ಲಿ ವಾಸಿಸುವ ಜನರ ಜೀವನ ಶೈಲಿಯನ್ನು ಬದಲಿಸಿದೆ. ಪರಿಣಾಮ ಜನರನ್ನು ಮೋಡಿ ಮಾಡುತ್ತಿದ್ದ ಈ ನಗರದ ವೈಭವ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ. ಅಲ್ಲದೆ, ಬುಧಾವರ್ ಪೆತ್‌ನಲ್ಲಿ ದೇಶದ ಮೂರನೇ ಅತಿದೊಡ್ಡ ಕೆಂಪು ದೀಪ ಪ್ರದೇಶ ಎನಿಸಿಕೊಂಡ ಕಾಮಾಟಿಪುರದಲ್ಲೂ ಇದೀಗ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ.

ಕೊರೋನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಇಲ್ಲಿನ ಜಿಲ್ಲಾಡಳಿತ, ಎನ್‌ಜಿಓಗಳು ಮತ್ತು ಇಲ್ಲಿ ವಾಸಿಸುವ ಲೈಂಗಿಕ ಕಾರ್ಯಕರ್ತೆಯರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್ ನಂತರದ ಈ 4 ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ಆದರೆ, ಕಳೆದ ಕೆಲವು ದಿನಗಳಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಲಾಗಿದೆ. ಆದಾಗ್ಯೂ, ಈಗ ಕೇವಲ 15 ಸಕ್ರೀಯ ಪ್ರಕರಣಗಳು ಮಾತ್ರ ಉಳಿದಿವೆ. ಅದೃಷ್ಟವಶಾತ್ ಈವರೆಗೆ ಒಂದೂ ಸಾವಿನ ಪ್ರಕರಣ ದಾಖಲಾಗಿಲ್ಲ.

ಲಾಕ್‌ಡೌನ್ ಸಮಯದಲ್ಲಿನ ಮುನ್ನೆಚ್ಚರಿಕೆಗಳು:

ಅಸಲಿಗೆ ಕೊರೋನಾ ಕಾರಣದಿಂದಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಕೂಡಲೇ ಈ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಯಿತು. ರೆಡ್‌ಲೈಟ್‌ ಏರಿಯಾಗೆ ಸಂಪರ್ಕ ಕಲ್ಪಿಸುವ ಪ್ರತಿ ರಸ್ತೆಯನ್ನೂ ನಿರ್ಬಂಧಿಸಲಾಗಿತ್ತು. ಪೊಲೀಸ್ ತಂಡಗಳು ಸತತ 24 ಗಂಟೆಗಳ ಕಾಲ ಇಲ್ಲಿ ಬೀಡುಬಿಟ್ಟಿತ್ತು. ಪರಿಣಾಮ ವೇಶ್ಯಾವಾಟಿಕೆ ಸಂಪೂರ್ಣವಾಗಿ ನಿಂತುಹೋಗಿತ್ತು.

ಇದರೊಂದಿಗೆ ಮನೆ ಮನೆಗೆ ತೆರಳಿ ಎಲ್ಲಾ ಹೆಣ್ಣು ಮಕ್ಕಳನ್ನೂ ಅವರ ಕುಟುಂಬದ ಸದಸ್ಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪೈಕಿ ಕೊರೋನಾ ಲಕ್ಷಣಗಳು ಕಂಡುಬಂದವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಯಿತು. ಬುದ್ವಾರ್ ಪೆತ್ನಿಂದ ಮನೆಗೆ ಹೋಗಲು ಬಯಸುವ ಮಹಿಳೆಯರನ್ನು ಅವರ ಮನೆಗೂ ಕರೆತರುವ ವ್ಯವಸ್ಥೆ ಮಾಡಲಾಗಿತ್ತು.ಮಾರ್ಚ್‌‌ನಲ್ಲಿ ಪ್ರಾರಂಭವಾದ ಪ್ರಕ್ರಿಯೆ ಇನ್ನೂ ನಿಂತಿಲ್ಲ:

ಈ ಪ್ರದೇಶದ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಮುಖವಾಡ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಮುಖವಾದ ಇಲ್ಲದೆ ರಸ್ತೆಗೆ ಇಳಿಯುವವರ ಮೇಲೆ ಭಾರೀ ದಂಡ ವಿಧಿಸಲೂ ಸಹ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಪರಿಣಾಮ ಈ ಪ್ರದೇಶ ಭಾರೀ ಜನದಟ್ಟಣೆಯ ಪ್ರದೇಶವಾಗಿದ್ದರೂ ಸಹ ಇಲ್ಲಿಯವರೆಗೆ ಇಲ್ಲಿ ಕೆಲವೇ ಕೆಲವು ಪ್ರಕರಣಗಳು ಮಾತ್ರ ದಾಖಲಾಗಿವೆ.

ಅನ್ಲಾಕ್ -1 ರ ನಂತರ, ಇಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳೊಂದಿಗೆ ವ್ಯಾಪಾರವನ್ನು ಪುನರಾರಂಭಿಸಲು ಅನುಮೋದನೆ ನೀಡಲಾಯಿತು. ಆದಾಗ್ಯೂ, 5 ಸಕಾರಾತ್ಮಕ ಪ್ರಕರಣಗಳು ವರದಿಯಾದ ನಂತರ ಜುಲೈ ಕೊನೆಯ ವಾರದಲ್ಲಿ ಈ ಪ್ರದೇಶವನ್ನು ಮತ್ತೆ 15 ದಿನಗಳವರೆಗೆ ಸೀಲ್‌ಡೌನ್ ಮಾಡಲಾಗಿತ್ತು. ಈಗ ಮತ್ತೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿವೆ.

ಈ ಭಾಗದಲ್ಲಿ ಕೆಲಸ ಮಾಡುವ 'ಸಹೇಲಿ ಸಂಘ' ಎಂಬ ಎನ್‌ಜಿಓ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರು ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ನಿಗಮ ಅಧಿಕಾರಿಗಳೊಂದಿಗೆ ಎನ್ಜಿಒ ವಿಶೇಷ ಎಸ್ಒಪಿ ಸಿದ್ಧಪಡಿಸಿದೆ. ಆದರೆ, ಗರಿಷ್ಠ ಕಾಳಜಿ ವಹಿಸಲು ಅವರಿಗೆ ವಿಡಿಯೋ ಮತ್ತು ಆಡಿಯೊ ಕ್ಲಿಪ್ಗಳ ಮೂಲಕವೂ ತರಬೇತಿ ನೀಡಬೇಕಾಗಿದೆ.

ಇದನ್ನೂ ಓದಿ : ಅನಂತ ಕುಮಾರ್‌ ಹೆಗಡೆ ಸೇರಿದಂತೆ ದೇಶದ 17 ಸಂಸದರಿಗೆ ಕೊರೋನಾ ಸೋಂಕು ದೃಢ!

ಲೈಂಗಿಕ ಕಾರ್ಯಕರ್ತೆಯರಿಗೆ ಎಸ್ಒಪಿ

ಲೈಂಗಿಕ ಕಾರ್ಯಕರ್ತೆಯರಿಗೆ ನೀಡಲಾಗಿರುವ ಎಸ್ಒಪಿ ಪ್ರಾಥಮಿಕ ಕೋವಿಡ್-19 ರೋಗ ಲಕ್ಷಣಗಳ ಕುರಿತ ಮಾಹಿತಿಯಲ್ಲಿ ಸ್ಯಾನಿಟೈಸರ್, ಮುಖವಾಡಗಳು ಮತ್ತು ಕೈಗವಸುಗಳ ಬಳಕೆಯನ್ನು ಗುರುತಿಸುವ ವಿವರಗಳೂ ಒಳಗೊಂಡಿದೆ. ಈ ಎಲ್ಲಾ ವಸ್ತುಗಳು ಇದೀಗ ಕಾಂಡೋಮ್ಗಳಂತೆಯೇ ಕಡ್ಡಾಯಗೊಳಿಸಲಾಗಿದೆ.
Youtube Video

ಗ್ರಾಹಕರ ಭೇಟಿಯ ಮೊದಲು ಮತ್ತು ನಂತರ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನೂ ಸಹ ಲೈಂಕಿಕ ಕಾರ್ಯಕರ್ತೆಯರಿಗೆ ತಿಳಿ ಹೇಳಲಾಗಿದೆ. ಕೆಲವು ವೇಶ್ಯಾಗೃಹಗಳಲ್ಲಿ ವ್ಯಕ್ತಿಯ ತಾಪಮಾನ ಪರೀಕ್ಷಿಸುವ ಸಾಧನಗಳನ್ನೂ ಖರೀದಿಸಲಾಗಿದೆ. ಈ ನಡುವೆ ಫೋನ್ ಸೆಕ್ಸ್ ನಂತಹ ಸೇವೆಗಳ ಆಯ್ಕೆಗಳನ್ನೂ ಅನ್ವೇಷಿಸಲು ಸಿದ್ಧತೆ ನಡೆಸಲಾಗುತ್ತಿದೆ.

(ಮೂಲ ಬರಹಗಾರರು - ಸ್ವಾತಿ ಲೋಖಂಡೆ)
Published by: MAshok Kumar
First published: September 14, 2020, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories