ಕೊರೋನಾ ವಿರುದ್ಧದ ಹೋರಾಟಕ್ಕೆ ಹನುಮಾನ್ ಚಾಲಿಸಾ ಪಠಿಸಿ; ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ ಸಲಹೆ

ಭಾರತದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ 13 ಲಕ್ಷದ ಗಡಿ ದಾಟಿದೆ. ಇನ್ನೂ ಮಾರಣಾಂತಿಕ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 31,358ಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೋನಾ ನಿಯಂತ್ರಣಕ್ಕೆ ಹನುಮಾನ್ ಚಾಲಿಸಾ ಪಠಿಸಿ ಎಂದು ಸಲಹೆ ನೀಡಿರುವ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ ವಿರುದ್ಧ ಇದೀಗ ಅನೇಕರು ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ

MAshok Kumar | news18-kannada
Updated:July 26, 2020, 11:26 AM IST
ಕೊರೋನಾ ವಿರುದ್ಧದ ಹೋರಾಟಕ್ಕೆ ಹನುಮಾನ್ ಚಾಲಿಸಾ ಪಠಿಸಿ; ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ ಸಲಹೆ
ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌.
  • Share this:
ಭೂಪಾಲ್ (ಜುಲೈ 26); ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಈ ಜಗತ್ತಿನಿಂದ ತೊಡೆದು ಹಾಕಲು ಪ್ರತಿಯೊಬ್ಬರು ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾವನ್ನು ಪಠಿಸಬೇಕು ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮನವಿ ಮಾಡಿದ್ದಾರೆ.

ರಾಮ ಮಂದಿರ ದೇವಾಲಯದ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಆಗಸ್ಟ್ 05ಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಜನರಲ್ಲಿ ಮನವಿ ಮಾಡಿರುವ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, “ನಾವೆಲ್ಲರೂ ಒಗ್ಗಟ್ಟಾಗಿ ಆಧ್ಯಾತ್ಮಿಕದ ಮೂಲಕ ಮಾರಣಾಂತಿಕ ಕೊರೋನಾ ವೈರಸ್ ಅನ್ನು ಜಗತ್ತಿನಿಂದ ತೊಡೆದು ಹಾಕಲು ಪ್ರಯತ್ನಿಸೋಣ. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸೋಣ. ಹೀಗಾಗಿ ಜುಲೈ 25 ರಿಂದ ಆಗಸ್ಟ್ 05ರವರೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ದಿನಕ್ಕೆ ಐದು ಬಾರಿ ಹನುಮಾನ್ ಚಾಲಿಸಾ ಪಠಿಸಿ” ಎಂದಿದ್ದಾರೆ.
“ದೇಶದ ಎಲ್ಲಾ ಹಿಂದೂಗಳು ಒಂದೇ ಧ್ವನಿಯಲ್ಲಿ '' ಹನುಮಾನ್ ಚಾಲಿಸಾ '' ಪಠಿಸಿದರೆ, ಆ ಶಕ್ತಿ ಖಂಡಿತವಾಗಿಯೂ ಕೆಲಸ ಮಾಡುತ್ತದೆ ಮತ್ತು ನಾವು ಕೊರೋನಾ ವೈರಸ್‌ನಿಂದ ಮುಕ್ತರಾಗುತ್ತೇವೆ. ಇದು ಭಗವಾನ್ ರಾಮನಿಗಾಗಿ ನಿಮ್ಮ ಪ್ರಾರ್ಥನೆಯಾಗಲಿದೆ. ಆಗಸ್ಟ್ 05 ರಂದು ಮನೆಯಲ್ಲೇ ದೀಪಗಳನ್ನು ಬೆಳಗಿಸಿ ರಾಮನಿಗೆ ಆರತಿ ಅರ್ಪಿಸುವ ಮೂಲಕ ನಿಮ್ಮ ಆಚರಣೆಯನ್ನು ಮುಕ್ತಾಯಗೊಳಿಸಿ” ಎಂದು ಅವರು ಕೇಳಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ "ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕನ್ನು ತಡೆಯುವ ಸಲುವಾಗಿ ಇಲ್ಲಿನ ಬಿಜೆಪಿ ಸರ್ಕಾರ ಆಗಸ್ಟ್ 04ರ ವರೆಗೆ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ 4ಕ್ಕೆ ಮುಗಿದರೂ ಹನುಮಾನ್ ವಾಲಿಸಾ ಪಠಣ ಆಗಸ್ಟ್ 05 ರಂದು ಕೊನೆಗೊಳ್ಳಲಿದೆ. ಈ ದಿನ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದ್ದು, ಆ ದಿನವನ್ನು ನಾವು ದೀಪಾವಳಿಯಂತೆ ಆಚರಿಸಲಿದ್ದೇವೆ” ಎಂದು ಪ್ರಜ್ಞಾ ಸಿಂಗ್ ಠಾಕೂರ್ ತಿಳಿಸಿದ್ದಾರೆ.

ಇದನ್ನೂ ಓದಿ : CoronaVirus: ದೇಶದಲ್ಲಿ ಮುಂದುವರೆದ ಕೊರೋನಾ ಉಪಟಳ:13 ಲಕ್ಷ ದಾಟಿದ ಸೋಂಕು ಪೀಡಿತರ ಸಂಖ್ಯೆ


ಭಾರತದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ 13 ಲಕ್ಷದ ಗಡಿ ದಾಟಿದೆ. ಇನ್ನೂ ಮಾರಣಾಂತಿಕ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 31,358ಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೋನಾ ನಿಯಂತ್ರಣಕ್ಕೆ ಹನುಮಾನ್ ಚಾಲಿಸಾ ಪಠಿಸಿ ಎಂದು ಸಲಹೆ ನೀಡಿರುವ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ ವಿರುದ್ಧ ಇದೀಗ ಅನೇಕರು ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
Published by: MAshok Kumar
First published: July 26, 2020, 8:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading