ಕೊಡಗು ಜಿಲ್ಲೆ ಲಾಕ್‍ಡೌನ್ ಮಾಡಿ; ಇಲ್ಲವೇ ಜಿಲ್ಲಾ ಗಡಿಗಳಲ್ಲಿ ಸೀಲ್ ಹಾಕಿ; ಸಾರ್ವಜನಿಕರ ಒತ್ತಾಯ 

ಕುಶಾಲನಗರದಲ್ಲೂ ಕೂಡ ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಮಾಡಲು ಅಲ್ಲಿನ ಛೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ. ಜಿಲ್ಲಾಡಳಿತ ಕೂಡ ವಾರದ ಕೊನೆಯಲ್ಲಿ ಎರಡು ದಿನ ಲಾಕ್ ಡೌನ್ ಮಾಡಲು ನಿರ್ಧರಿಸಿದೆ.

news18-kannada
Updated:July 14, 2020, 5:43 PM IST
ಕೊಡಗು ಜಿಲ್ಲೆ ಲಾಕ್‍ಡೌನ್ ಮಾಡಿ; ಇಲ್ಲವೇ ಜಿಲ್ಲಾ ಗಡಿಗಳಲ್ಲಿ ಸೀಲ್ ಹಾಕಿ; ಸಾರ್ವಜನಿಕರ ಒತ್ತಾಯ 
ಸಾಂದರ್ಭಿಕ ಚಿತ್ರ
  • Share this:
ಕೊಡಗು(ಜು.14): ಆರಂಭದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಆಗಿದ್ದನ್ನು ಬಿಟ್ಟರೆ, ಆ ಬಳಿಕ ಪ್ರಕರಣಗಳೇ ಇಲ್ಲದೆ ಇದ್ದ ಕೊಡಗಿನಲ್ಲಿ ಈಗ 209 ಪ್ರಕರಣಗಳು ಇವೆ. ಅದರಲ್ಲೂ ಕೊಡಗಿಗೆ ಬೆಂಗಳೂರಿನಿಂದ ವಾಪಸ್ ಅಗುತ್ತಿರುವವರಿಂದಲೇ ಡೆಡ್ಲಿ ವೈರಸ್ ಹರಡುತ್ತಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕು ಎನ್ನೋ ಒತ್ತಾಯದ ಕೂಗು ಜೋರಾಗಿದೆ.

ಪ್ರಕರಣಗಳು ಹೆಚ್ಚುತ್ತಿರುವ ಪಟ್ಟಣಗಳಲ್ಲಿ ಹೀಗಾಗಲೇ ವರ್ತಕರೇ ಸ್ವತಂ ಲಾಕ್ ಡೌನ್ ಮಾಡಿಕೊಂಡಿದ್ದರೆ, ಇನ್ನು ಕೆಲವು ಪಟ್ಟಣಗಳಲ್ಲಿ ತಾವೂ ಕೂಡ ಲಾಕ್ ಡೌನ್ ಮಾಡಿಕೊಳ್ಳುವುದಾಗಿ ಚರ್ಚೆ ನಡೆಸುತ್ತಿವೆ.

ಈಗಾಗಲೇ ಸುಂಟಿಕೊಪ್ಪ ಪಟ್ಟಣವನ್ನು ಮುಂದಿನ ಸೋಮವಾರದವರೆಗೆ ಲಾಕ್ ಡೌನ್ ಮಾಡಲಾಗಿದೆ. ಸುಂಟಿಕೊಪ್ಪದ ಛೇಂಬರ್ ಆಫ್ ಕಾಮರ್ಸ್ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದವಾಗಿದೆ.

ಕೊಡಗಿನಲ್ಲಿ ಲಾಕ್‍ಡೌನ್ ಮಾಡಲ್ಲ;ಹೊರ ಜಿಲ್ಲೆ, ರಾಜ್ಯ ಮತ್ತು ದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

ಇನ್ನು ಕುಶಾಲನಗರದಲ್ಲೂ ಕೂಡ ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಮಾಡಲು ಅಲ್ಲಿನ ಛೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ. ಜಿಲ್ಲಾಡಳಿತ ಕೂಡ ವಾರದ ಕೊನೆಯಲ್ಲಿ ಎರಡು ದಿನ ಲಾಕ್ ಡೌನ್ ಮಾಡಲು ನಿರ್ಧರಿಸಿದೆ.

ಹೀಗಾಗಿ ಕುಶಾಲನಗರದಲ್ಲೂ ವಾರದಲ್ಲಿ ಐದು ದಿನ ಯಾವುದೇ ವ್ಯಾಪಾರ ವಹಿವಾಟು ನಡೆಯೋದಿಲ್ಲ. ಇದೆಲ್ಲವೂ ವರ್ತಕರೇ ಸ್ವತಃ ತೆಗೆದುಕೊಂಡಿರುವ ನಿರ್ಧಾರಗಳು. ಇದಿಷ್ಟೇ ಅಲ್ಲ, ಜನರು ಜಿಲ್ಲೆಯನ್ನು ಮತ್ತೆ ಲಾಕ್ ಡೌನ್ ಮಾಡಬೇಕು, ಇಲ್ಲವೇ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಮಾಡಿ, ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವವರಿಗೆ ಸೀಲ್ ಹಾಕಿ ಕ್ವಾರಂಟೈನ್ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವ ಮೂಲಕ ಮುಂದಾಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
Published by: Latha CG
First published: July 14, 2020, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading