ಕೊರೋನಾ ಹೆಸರಲ್ಲಿ ಸುಲಿಗೆ - ಕಲಬುರ್ಗಿಯ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್

ಟೆಸ್ಟಿಂಗ್, ವೆಂಟಿಲೇಟರ್, ಬೆಡ್ ಚಾರ್ಜಸ್ ಇತ್ಯಾದಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡುತ್ತಿದ್ದಾರೆಂಬ ದೂರು ಬಂದಿದೆ. ನೋಟೀಸ್​​ಗೆ ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಿರೋದಾಗಿ ಡಿಎಚ್ಒ ರಾಜಶೇಖರ್ ಮಾಹಿತಿ ನೀಡಿದ್ದಾರೆ.

news18-kannada
Updated:September 6, 2020, 2:45 PM IST
ಕೊರೋನಾ ಹೆಸರಲ್ಲಿ ಸುಲಿಗೆ - ಕಲಬುರ್ಗಿಯ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್
ಪ್ರಾತಿನಿಧಿಕ ಚಿತ್ರ.
  • Share this:
ಕಲಬುರ್ಗಿ(ಸೆ.06): ಕೊರೋನಾ ಹಾಟ್​​ಸ್ಪಾಟ್ ಕಲಬುರ್ಗಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಂತಾಗಿದೆ. ಕೊರೋನಾ ನಿಯಂತ್ರಣಕ್ಕೆಂದು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಸ್ಪತ್ರೆಗಳು ಸುಲಿಗೆಗೆ ಇಳಿದಿವೆ. ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಕೊರೋನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಕಲಬುರ್ಗಿಯಲ್ಲಿ ಹಣ ಸುಲಿಗೆ ಜೋರಾಗಿದೆ. ಕೊರೋನಾ ಸೋಂಕಿತರಿಂದ ಹೆಚ್ಚು ಹಣ ಪಡೆದ ಆರೋಪ ಹಿನ್ನೆಲೆಯಲ್ಲಿ ಕಲಬುರ್ಗಿಯ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಶೇಖರ್ ನೋಟೀಸ್ ಜಾರಿ ಮಾಡಿದ್ದಾರೆ. ನಗರದ ಧನ್ವಂತರಿ ಹಾಗೂ ವಾತ್ಸಲ್ಯ ಆಸ್ಪತ್ರೆಗಳಿಗೆ ನೋಟೀಸ್ ನೀಡಲಾಗಿದೆ. ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿದೆ ಎನ್ನಲಾಗಿದೆ.

ಟೆಸ್ಟಿಂಗ್, ವೆಂಟಿಲೇಟರ್, ಬೆಡ್ ಚಾರ್ಜಸ್ ಇತ್ಯಾದಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡುತ್ತಿದ್ದಾರೆಂಬ ದೂರು ಬಂದಿದೆ. ನೋಟೀಸ್​​ಗೆ ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಿರೋದಾಗಿ ಡಿಎಚ್ಒ ರಾಜಶೇಖರ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ವ್ಯಾಪಕಗೊಂಡಿರೋ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಿಗೂ ಕೊರೋನಾ ಕೇಂದ್ರಗಳ ವಿಸ್ತರಣೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಕೊರೋನಾ ಕೇರ್ ಸೆಂಟರ್ ಆರಂಭ ಮಾಡಲಾಗಿದೆ. ಚಿತ್ತಾಪುರ, ಸೇಡಂ, ಆಳಂದ ಹಾಗೂ ಜೇವರ್ಗಿ ತಾಲೂಕುಗಳಲ್ಲಿ ಆರಂಭಿಸಲಾಗಿದೆ. ಶೀಘ್ರವೇ ಚಿಂಚೋಳಿಯಲ್ಲಿಯೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದೆಂದು ರಾಜಶೇಖರ್ ತಿಳಿಸಿದ್ದಾರೆ. ಕಲಬುರ್ಗಿ ನಗರದಲ್ಲಿ ಸದ್ಯ ನಾಲ್ಕು ಕಡೆ ಕೋವಿಡ್ ಕೇರ್ ಸೆಂಟರ್​​ಗಳಿವೆ.

ಇದನ್ನೂ ಓದಿ: ನಾಳೆ ರಾಜ್ಯ ಸಂಪುಟ ಸಚಿವರೊಂದಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಸಭೆ; ಅಧೀವೇಶನದ ಬಗ್ಗೆ ಚರ್ಚೆ

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೋರ್ವ ಬಲಿಯಾಗಿದ್ದಾನೆ. 80 ವರ್ಷದ ವಯೋ ವೃದ್ಧ ಸಾವನ್ನಪ್ಪಿದ್ದಾನೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ 223 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮತ್ತೆ 198 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,745ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 230 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 10,307 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2215 ಆ್ಯಕ್ಟಿವ್ ಕೇಸುಗಳಿವೆ.
Published by: Ganesh Nachikethu
First published: September 6, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading