ಅಧಿಕಾರಿಗಳ ಭೇಟಿ ವೇಳೆ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಬಯಲು; ಸರ್ಕಾರದ ಗಮನಕ್ಕೆ ತಾರದೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ

ಆಸ್ಪತ್ರೆಯ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಾಗ ಹೆಚ್ಚುವರಿಯಾಗಿ ಪಡೆದ ಹಣವನ್ನು ರಿಫಂಡ್ ಮಾಡುವುದಾಗಿ ಹೇಳಿದ್ದಾರೆ. ‌ಜೊತೆಗೆ ಶೇ. 50ರಷ್ಟು ಬೆಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಟ್ಟು ಸರ್ಕಾರ ನಿಗದಿಪಡಿಸಿರುವ ವೆಚ್ಚದಂತೆ ಪಡೆಯುವುದಾಗಿ ಭರವಸೆ ನೀಡಿದರು.

news18-kannada
Updated:July 24, 2020, 9:23 PM IST
ಅಧಿಕಾರಿಗಳ ಭೇಟಿ ವೇಳೆ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಬಯಲು; ಸರ್ಕಾರದ ಗಮನಕ್ಕೆ ತಾರದೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಒಂದೊಂದೇ ಬಯಲಾಗುತ್ತಿದೆ. ಸರ್ಕಾರ ನೇಮಕ ಮಾಡಿದ್ದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ತಂಡ ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಬಯಲಾಗುತ್ತಿದೆ.

ಐಎಎಸ್ ಅಧಿಕಾರಿ ಹರ್ಷಗುಪ್ತಾ ಹಾಗೂ ಐಪಿಎಸ್ ಅಧಿಕಾರಿ ರೂಪ ಡಿ ಮೌದ್ಗಿಲ್ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿದ್ದರು. ಈ ವೇಳೆ ಸಾಕಷ್ಟು ಜನ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜೊತೆಗೆ ಕೋವಿಡ್ ಬಂದ ರೋಗಿಯ ಕುಟುಂಬಸ್ಥರು ಸಹ ಸಾಕಷ್ಟು ಕರ್ಮಕಾಂಡಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಜೊತೆ ಇಬ್ಬರು ಅಧಿಕಾರಿಗಳ ತಂಡ ಮಾತನಾಡಿದಾಗ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಮಾಹಿತಿ ಕೊಡದೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಾ ಇರೋದು ಗೊತ್ತಾಗಿದೆ. ಅದಷ್ಟೇ ಅಲ್ಲದೆ ಒಬ್ಬೊಬ್ಬ ಕೋವಿಡ್ ರೋಗಿಯಿಂದ 2ರಿಂದ 5 ಲಕ್ಷದವರೆಗೂ ಹಣ ಪೀಕಿರೋದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳ ತಂಡ ತಕ್ಷಣವೇ ಅವುಗಳ ರಿಪೋರ್ಟ್ ಕೊಡುವಂತೆ ಹೇಳಿದ್ದಾರೆ. ‌ಜೊತೆಗೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಗಮನಕ್ಕೆ ಬಾರದಂತೆ ಚಿಕಿತ್ಸೆ ಕೊಡುತ್ತಾ ಇದ್ದ ರೋಗಿಗಳ ವರದಿ ಸಹ ಕಲೆ ಹಾಕಿದರು.

ಇದನ್ನು ಓದಿ: 15 ದಿನ ಆಯುರ್ವೇದ ಚಿಕಿತ್ಸೆ ಬಳಿಕ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಸಚಿವ ಸಿ.ಟಿ.ರವಿ

ಇನ್ನು ಬೆಡ್, ಊಟ, ಮುಂತಾದವುಗಳಿಗೂ ಅದು ಇದು ಅಂತೇಳಿ ಹಣ ಪಡೆದಿರುವುದು ಗೊತ್ತಾಗಿದೆ.‌ ಕೂಡಲೇ ಆಸ್ಪತ್ರೆಯ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಾಗ ಹೆಚ್ಚುವರಿಯಾಗಿ ಪಡೆದ ಹಣವನ್ನು ರಿಫಂಡ್ ಮಾಡುವುದಾಗಿ ಹೇಳಿದ್ದಾರೆ. ‌ಜೊತೆಗೆ ಶೇ. 50ರಷ್ಟು ಬೆಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಟ್ಟು ಸರ್ಕಾರ ನಿಗದಿಪಡಿಸಿರುವ ವೆಚ್ಚದಂತೆ ಪಡೆಯುವುದಾಗಿ ಭರವಸೆ ನೀಡಿದರು. ಮತ್ತೆ ಇದೇ ತರಹ ತಪ್ಪು ಪುನರಾವರ್ತನೆಯಾದರೆ ನೊಟೀಸ್ ಕೊಡುವುದಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Published by: HR Ramesh
First published: July 24, 2020, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading