ಕೊರೋನಾ ತಂದ ಸಂಕಷ್ಟ: ಕ್ವಾರಂಟೈನ್​​ನಲ್ಲಿ ರೈತರ ಕುಟುಂಬ, ಆರೈಕೆ ಇಲ್ಲದೇ ಜಾನುವಾರುಗಳು ಅನಾಥ

ಇದಕ್ಕೆ ಸರ್ಕಾರ ಸೂಕ್ತ ಪರಿಹಾರದ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಕೊರೋನಾ ಪೀಡಿತರ ಮೂಖ ಪ್ರಾಣಿಗಳಿಗೂ ಕೊರೋನಾ ಬಂದಿರುತ್ತೆ ಎಂಬ ಮೂಡ ನಂಬಿಕೆಯಿದೆ ಹೊರ ಬಂದು ಮಾತು ಬಾರದ ಮೂಖ ಪ್ರಾಣಿಗಳ ವೇದನೆಗೆ ಸ್ಪಂದಿಸಿ ಅನ್ನೋದೆ ನ್ಯೂಸ್18 ಕಳಕಳಿ.

news18-kannada
Updated:July 24, 2020, 7:15 AM IST
ಕೊರೋನಾ ತಂದ ಸಂಕಷ್ಟ: ಕ್ವಾರಂಟೈನ್​​ನಲ್ಲಿ ರೈತರ ಕುಟುಂಬ, ಆರೈಕೆ ಇಲ್ಲದೇ ಜಾನುವಾರುಗಳು ಅನಾಥ
ಜಾನುವಾರುಗಳು
  • Share this:
ಚಿಕ್ಕಬಳ್ಳಾಪುರ(ಜು.24): ಕೊರೋನಾ ಮಹಾಮಾರಿ ಇಡೀ ಜಗತ್ತಿನಲ್ಲಿ ಮನುಷ್ಯನನ್ನ ತಲ್ಲಣಗೊಳಿಸುವಂತೆ ಮಾಡಿಬಿಟ್ಟಿದೆ. ಹೀಗೆ ಇಡೀ ವಿಶ್ವವನ್ನು ವಿಕೃತವಾಗಿ ಕಾಡುತ್ತಿರುವ ಕೊರೋನಾದಿಂದ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ. ಸೊಂಕಿತ ರೈತರ ಕುಟುಂಬಗಳಲ್ಲಿನ ಜಾನುವಾರುಗಳು, ಅರೈಕೆ ಮಾಡೋರಿಲ್ಲದೆ ಅನಾಥವಾಗಿ ಪರಿತಪಿಸುವಂತಾಗಿದೆ.

ಜಾನುವಾರುಗಳ ಸಂಕಷ್ಟ ನೋಡಲಾರದೆ ಗ್ರಾಮದ ಎಂಜಿನಿಯರ್ ಯುವಕನೋರ್ವ ಅನಾಥವಾಗಿದ್ದ ಹಸುಗಳನ್ನ ತಂದು ಸಾಕಿ ಸಲಹುತ್ತಿದ್ದಾನೆ. ಕೊರೋನಾ ಸೋಂಕು ಬಂದಿದೆ ಅಂತ ಹೇಳಿ ಆರೋಗ್ಯ ಇಲಾಖೆಯ ಸಿಬ್ಬಂದಿ ರೈತನ ಇಡೀ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಿದೆ.

ಮನೆಯಲ್ಲೇ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತ ಕುಟುಂಬ ಎರಡು ಹಸು, ಮೇಕೆ, ಜಾನುವಾರುಗಳನ್ನ ಸಾಕಿಕೊಂಡಿದ್ರು. ಯಾವಾಗ ಇಡೀ ಕುಟುಂಬದವರನ್ನ ಕ್ವಾರಂಟೈನ್​​ಗೆ ಕರೆದುಕೊಂಡು ಹೋದ್ರೋ ಆಗ ಮನೆಯಲ್ಲಿದ್ದ ಜಾನುವಾರುಗಳು ಮೇವಿಲ್ಲದೆ ಆರೈಕೆ ಮಾಡೋರಿಲ್ಲದೆ ವಿಲ ವಿಲ ಒದ್ದಾಡುತ್ತಿದ್ದವು. ಇಂಥ ಮನಕಲುಕುವ ಘಟನೆ ನಡೆದದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಸೊಮೇನಹಳ್ಳಿ ಗ್ರಾಮದಲ್ಲಿ.

ಇತ್ತ ಕುಟುಂಬದವರೊಂದಿಗೆ ಜಾನುವಾರುಗಳಿಗೆ ಕೊರೋನಾ ಬಂದಿರಬಹುದು ಅಂತ ಗ್ರಾಮಸ್ಥರು ಮೂಕಪ್ರಾಣಿಗಳ ಹತ್ತಿರವೂ ಸುಳಿದಿರಲಿಲ್ಲ. ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಜಾನುವಾರುಗಳ ಸಂಕಷ್ಟ ನೋಡಲಾರದೆ ಸೋಮೇನಹಳ್ಳಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಜ್ಯೂನಿಯರ್ ಎಂಜಿನಿಯರ್ ನವೀನ್ ಕುಟುಂಬಸ್ಥರು, ಸ್ನೇಹಿತರು ಸೇರಿ ಮೇವಿಲ್ಲದೆ ಒದ್ದಾಡುತ್ತಿದ್ದ ಹಸುಗಳನ್ನ ಕರೆತಂದು ಆರೈಕೆ ಮಾಡುತ್ತಿದ್ದಾರೆ.

ಸಂಕಷ್ಟದಲ್ಲಿದ್ದ ಹಸುಗಳನ್ನ ಕರೆತಂದು ಆರೈಕೆ ಮಾಡಿದ ನವೀನ್​​ಗೆ ಮತ್ತೊಂದು ಸಂಕಷ್ಟ ಎದುರಾಯಿತು. ಕೊರೋನಾ ಬಂದಿರೋ ಮನೆಯ ಹಸುವಿನ ಹಾಲನ್ನ ಹಾಕಿಸಿಕೊಂಡ್ರೆ  ನಮಗೂ ಕೊರೋನಾ ಬರುತ್ತೆ ಅಂತ ಗ್ರಾಮದಲ್ಲಿ ಗುಸುಗುಸು ಶುರುವಾಯಿತು. ಜೊತೆಗೆ ಹಸುವಿನಿಂದ ಕರೆದ ಹಾಲನ್ನ ಡೈರಿಗೆ ಹಾಕೋಣ ಅಂದ್ರೆ ಅವ್ರೂ ಸಹ ಕೊರೋನಾ ಬಂದಿರೋ ಮನೆಯ ಹಸುವಿನ ಹಾಲನ್ನ ಹಾಕಿಸಿಕೊಳ್ಳೋದಿಲ್ಲ ಅಂತ ವಾಪಸ್ ಕಳಿಸಿದ್ದಾರಂತೆ. ಇದ್ರಿಂದ ಬೇಸರಗೊಂಡ ನವೀನ್ ಹಸುವಿನಿಂದ ಕರೆದ ಹಾಲನ್ನ ನಾಯಿಗಳು, ಬೆಕ್ಕುಗಳಿಗೆ ಹಾಕಿ ಮಾನವೀಯತೆ ಮೆರೆದಿದ್ದಾನೆ.

ಗ್ರಾಮೀಣ ಭಾಗದಲ್ಲಿ ಕೊರೋನಾದಿಂದ ಜನರು ಮಾತ್ರವಲ್ಲದೆ ಜಾನುವಾರುಗಳು ಹಾಗೂ ಸಾಕು ಪ್ರಾಣಿಗಳು ಸಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೊರೋನಾ ಸೋಂಕು ಬಂದಿರುವ ವ್ಯಕ್ತಿಯ ಮನೆಯವರನ್ನು ಕ್ವಾರಂಟೈನ್ ಮಾಡಿ, ಹೊರಗಡೆ ಎಲ್ಲೂ ಓಡಾಡಬಾರದು ಎಂದು ಹೇಳ್ತಾರೆ. ಆದ್ರೆ ನಾವು ಸರ್ಕಾರ ಹೇಳಿದ ಹಾಗೆ ಕ್ವಾರಂಟೈನ್ ಅಲ್ಲಿ ಇರುತ್ತೇವೆ. ಆದರೆ ನಮ್ಮನ್ನು ನಂಬಿಕೊಂಡಿರುವ ನಮ್ಮ ಜಾನುವಾರುಗಳ ಗತಿಯೇನು? ನಮಗೂ ಕೊರೋನಾ ಪಾಸಿಟಿವ್ ಆದಾಗ ನಾವು ಆಸ್ಪತ್ರೆಗೆ ಹೋದ್ರೆ ನಮ್ಮ ಹಸು, ಎಮ್ಮೆ, ಕುರಿ, ಮೇಕೆಗಳನ್ನು ನೋಡಿಕೊಳ್ಳುವವರು ಯಾರು? ಎಂದು ಸೋಂಕಿತ ಕುಟುಂಬಸ್ಥರು ಪ್ರಶ್ನಿಸುತ್ತಿದ್ಧಾರೆ.
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ

ಇದಕ್ಕೆ ಸರ್ಕಾರ ಸೂಕ್ತ ಪರಿಹಾರದ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಕೊರೋನಾ ಪೀಡಿತರ ಮೂಖ ಪ್ರಾಣಿಗಳಿಗೂ ಕೊರೋನಾ ಬಂದಿರುತ್ತೆ ಎಂಬ ಮೂಡ ನಂಬಿಕೆಯಿದೆ ಹೊರ ಬಂದು ಮಾತು ಬಾರದ ಮೂಖ ಪ್ರಾಣಿಗಳ ವೇದನೆಗೆ ಸ್ಪಂದಿಸಿ ಅನ್ನೋದೆ ನ್ಯೂಸ್18 ಕಳಕಳಿ.
Published by: Ganesh Nachikethu
First published: July 24, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading