ಕೊರೋನಾ ಎಫೆಕ್ಟ್: ಮಲೆ ಮಹದೇಶ್ವರ ಬೆಟ್ಟಕ್ಕೆ ಸೆ.16 ರಿಂದ 18 ರವರಗೆ ಭಕ್ತರ ಪ್ರವೇಶ ನಿಷೇಧ

ಲಾಕ್​​ಡೌನ್ ಸಡಿಲಿಕೆಯ ನಂತರವು ಕೋವಿಡ್-19 ಹಿನ್ನಲೆಯಲ್ಲಿ ಅಮವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಮಾದಪ್ಪನ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುತ್ತಿರುವುದರಿಂದ ಸಾರ್ವಜನಿಕರು ಹಾಗು ಭಕ್ತರಿಗೆ ನಿರಾಶೆಯಾಗುತ್ತಿದೆ. ಬೆಟ್ಟದಲ್ಲಿ ಇದೇ ದಿನಗಳನ್ನ ನಂಬಿಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಸ್ಥರಂತೂ ವ್ಯಾಪಾರವಿಲ್ಲದೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

news18-kannada
Updated:September 15, 2020, 9:30 PM IST
ಕೊರೋನಾ ಎಫೆಕ್ಟ್: ಮಲೆ ಮಹದೇಶ್ವರ ಬೆಟ್ಟಕ್ಕೆ ಸೆ.16 ರಿಂದ 18 ರವರಗೆ ಭಕ್ತರ ಪ್ರವೇಶ ನಿಷೇಧ
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ
  • Share this:
ಚಾಮರಾಜನಗರ(ಸೆ.15): ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಸಿದ್ದ ಯಾತ್ರಾ ಸ್ಥಳ ಮಲೆ ಮಹದೇಶ್ವರ ದೇಗುಲಕ್ಕೆ ಸೆ.16 ರಿಂದ 18 ರವರೆಗೆ ಮೂರು ದಿನಗಳ ಕಾಲ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸಹ ಭಕ್ತರನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ದೇವರ ದರ್ಶನ ಮಾಡಿಸುವುದು ಕಷ್ಟಸಾಧ್ಯವಾಗಲಿದೆ ಎಂದು ಮಲೆ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಜತೆಗೆ ದೇವಾಲಯ ಹಾಗೂ ಪ್ರಾಧಿಕಾರದ ಆವರಣದಲ್ಲಿ ಭಕ್ತರ ಪ್ರವೇಶ ನಿಷೇಧಿಸುವಂತೆ ಮನವಿ ಮಾಡಿದ್ದರು. ಇವರ ಮನವಿ ಮೇರೆಗೆ ಜಿಲ್ಲಾಧಿಕಾರಿ ಹೀಗೆ ಆದೇಶ ಹೊರಡಿಸಿದ್ದಾರೆ.

ಮಲೆ ಮಹದೇಶ್ವರ ದೇಗುಲದಲ್ಲಿ ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ನಡೆಯುವ ಎಣ್ಣೆಮಜ್ಜನ, ಅಮಾವಾಸ್ಯೆ ಪೂಜಾ ಕಾರ್ಯಗಳಿಗೆ ಜಿಲ್ಲಾ,  ಅಂತರಜಿಲ್ಲಾ ಸಾರ್ವಜನಿಕರ ಹಾಗು ಭಕ್ತರ ಪ್ರವೇಶವನ್ನು ನಿಷೇಧಿಸಿ ಸಿ.ಆರ್.ಪಿ.ಸಿ. 1973ರ ಕಲಂ 144(3) ರ ರೀತ್ಯಾ ಜಿಲ್ಲಾಧಿಕಾರಿ  ಡಾ ಎಂ ಆರ್ ರವಿ ಆದೇಶಿಸಿದ್ದಾರೆ.

ಅಮವಾಸ್ಯೆ ದಿನಗಳಲ್ಲಿ ಮಾದಪ್ಪನ ದರ್ಶನ ಪಡೆದು ಹರಕೆ ಕಟ್ಟಿಕೊಂಡರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆಗಳಿವೆ. ಮಹಾಲಯ ಅಮವಾಸ್ಯೆಯಂದು ಮಾದಪ್ಪನ ಸನ್ನಿಧಿಯಲ್ಲಿ ಎಣ್ಣೆ ಮಜ್ಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ,  ಸೇರಿದಂತೆ ವಿಶೇಷ ಪೂಜೆಗಳ ನಡೆಯುತ್ತವೆ. ಅಮವಾಸ್ಯೆ ದಿನ ಕುಟುಂಬ ಸಮೇತ ಬರುವ ಭಕ್ತರು ಮೂರು ದಿನಗಳ ಕಾಲ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಹುಲಿವಾಹನ, ಚಿನ್ನದ ತೇರು ಮತ್ತು ಪರ ಮಾಡಿ ಅನ್ನಸಂತರ್ಪಣೆ ಮಾಡಿ ಹೋಗುತ್ತಿದ್ದರು. ಆದರೆ ಈ ಬಾರಿ ಕೊರೋನಾ ಇದಕ್ಕೆಲ್ಲಾ ಕಡಿವಾಣ ಹಾಕಿದೆೆ

ಲಾಕ್​​ಡೌನ್ ಸಡಿಲಿಕೆಯ ನಂತರವು ಕೋವಿಡ್-19 ಹಿನ್ನಲೆಯಲ್ಲಿ ಅಮವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಮಾದಪ್ಪನ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುತ್ತಿರುವುದರಿಂದ ಸಾರ್ವಜನಿಕರು ಹಾಗು ಭಕ್ತರಿಗೆ ನಿರಾಶೆಯಾಗುತ್ತಿದೆ. ಬೆಟ್ಟದಲ್ಲಿ ಇದೇ ದಿನಗಳನ್ನ ನಂಬಿಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಸ್ಥರಂತೂ ವ್ಯಾಪಾರವಿಲ್ಲದೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಒಟ್ಟಾರೆ ಸಂಕಷ್ಟಗಳನ್ನ ಪರಿಹರಿಸೋ ಮಹದೇಶ್ವರನಿಗು ಕೋವಿಡ್-19 ಬಿಸಿ ತಟ್ಟುತ್ತಿರುವುದು  ವಿಪರ್ಯಾಸವೇ ಸರಿ.
Published by: Ganesh Nachikethu
First published: September 15, 2020, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading