ಒಬ್ಬನೇ ವರ ಇಬ್ಬರು ವಧು!; ಕುಟುಂಬ ಸಮ್ಮುಖದಲ್ಲಿ ನಡೆಯಿತು ವಿಶೇಷ ಮದುವೆ

ಮಧ್ಯ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಯುವಕನೊಬ್ಬ ಇಬ್ಬರು ಯುವತಿಯರನ್ನು ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾನೆ. ಅಚ್ಚರಿ ಸಂಗತಿಯೆಂದರೆ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ವಿವಾಹದ ವಿದಿವಿಧಾನ ಕಾರ್ಯ ನಡೆದಿದೆ.

news18-kannada
Updated:July 10, 2020, 9:20 PM IST
ಒಬ್ಬನೇ ವರ ಇಬ್ಬರು ವಧು!; ಕುಟುಂಬ ಸಮ್ಮುಖದಲ್ಲಿ ನಡೆಯಿತು ವಿಶೇಷ ಮದುವೆ
Photo: IANS
  • Share this:
ಯುವಕರು ಅಥವಾ ಯುವತಿಯರು ಪ್ರಾಯಕ್ಕೆ ಬಂದ ತಕ್ಷಣ ಸಂಬಂಧಿಕರು, ಸ್ನೇಹಿತರು ಕೇಳುವ ಮೊದಲ ಪ್ರಶ್ನೆಯೇ ವಿವಾಹ ಯಾವಾಗ? ಎಂದು. ಅನೇಕರು ಈ ಪ್ರಶ್ನೆಗೆ ಕಂಕಣ ಬಲ ಕೂಡಿ ಬರಬೇಕೆಂದು ಹೇಳಿ ಆ ಪ್ರಶ್ನೆಯಿಂದ ಜಾರಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಒಂದೇ ಮಂಟಪದಲ್ಲಿ ಎರಡು ಕಂಕಣಭಾಗ್ಯ ಕೂಡಿ ಬಂದಿದೆ!.

ಮಧ್ಯ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಯುವಕನೊಬ್ಬ ಇಬ್ಬರು ಯುವತಿಯರನ್ನು ಒಂದೇ ಮಂಟಪದಲ್ಲಿ ವಿವಾಹವಾಗಿದ್ದಾನೆ. ಅಚ್ಚರಿ ಸಂಗತಿಯೆಂದರೆ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ.

ಮಧ್ಯ ಪ್ರದೇಶದ ಜಿಲ್ಲಾ ಕೇಂದ್ರ ಕಚೇರಿಯಿಂದ 40 ಕಿ.ಮೀ ದೂರದಲ್ಲಿರುವ ಕೆರಿಯಾ ಗ್ರಾಮದ​ ಬೆತುಲ್​ ನಿವಾಸಿ ಸಂದೀಪ್​ ಉಯ್ಕೆ ಇಬ್ಬರು ಯುವತಿಯರಿಗೆ ಒಂದೇ ಮಂಟಪದಲ್ಲಿ ತಾಳಿ ಕಟ್ಟಿದ್ದಾನೆ. ಈ ವಿಚಾರ ಬೆಳಕಿಗೆ ಬಂದಂತೆ ಅಲ್ಲಿನ ಜಿಲ್ಲಾಡಳಿತ ವಿಚಾರಣೆ ನಡೆಸುತ್ತಿದೆ.

ಸಂದೀಪ್​ ಉಯಿಕೆ ಕೆರಿಯಾ ಗ್ರಾಮದ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾನೆ. ಇಬ್ಬರು ಯುವತಿಯರಲ್ಲಿ ಒಬ್ಬರು ಹೋಶಂಘಾಬಾದ್​ನವರಾಗಿದ್ದು, ಸಂದೀಪ್​ ಭೋಪಾಲ್​​ನಲ್ಲಿ ಓದುತ್ತಿರುವ ವೇಳೆ ಆಕೆಯೊಂದಿಗೆ ಪ್ರೀತಿಗೆ ಬಿದ್ದನು. ಇವರಿಬ್ಬರು ಪ್ರೀತಿಸುತ್ತಿರುವಾಗ ಸಂದೀಪ್​ ಕುಟುಂಬ ಕೊಯಲಾರಿ ಗ್ರಾಮದ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿತು. ಸ್ವಲ್ಪ ದಿನದ ಬಳಿಕ ಸಂದೀಪ್​ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ನಿಶ್ಚಯ ಮಾಡಿಕೊಂಡಿರುವ ಯುವತಿ ಮನೆಯವರಿಗೆ ತಿಳಿಯಿತು. ಈ ವಿಚಾರ ವಿವಾದಕ್ಕೆ ಕಾರಣವಾಯಿತು. ಹೀಗಿರುವಾಗ ಈ ಘಟನೆಯನ್ನು ಸರಿಪಡಿಸಲು ಮೂರು ಕುಟುಂಬಗಳು ಪಂಚಾಯತಿ​ ಮೊರೆ ಹೋದವು.

ಪಂಚಾಯತಿ ವೇಳೆ ಸಂದೀಪ್​ ಇಬ್ಬರು ಯುವತಿಯರನ್ನು ವಿವಾಹವಾಗುತ್ತೇನೆಂದು ಒಪ್ಪಿಕೊಂಡಿದ್ದಾನೆ. ಹಾಗಾಗಿ ಇಬ್ಬರು ಯುವತಿಯರ ಕುಟುಂಬ ಸಂದೀಪ್​ ಉಯ್ಕೆಯೊಂದಿಗೆ ಜುಲೈ 8 ರಂದು ವಿವಾಹ ಮಾಡಿಕೊಡುತ್ತಾರೆ.

ಯುವಕನ ಮದುವೆಗೆ ಸಾಕ್ಷಿಯಾದ ಜನ್​ಪದ್​ ಪಂಚಾಯತ್​​ ಘೋಡಡೋಂಗ್ರಿಯ ಉಪಾಧ್ಯಕ್ಷ ಮಿಶ್ರಿಲಾಲ್​​ ಪರಾಟೆ ಈ ಬಗ್ಗೆ ಮಾತನಾಡಿದ್ದು, ಮೂರು ಕುಟುಂಬಗಳಳು ಯಾವುದೇ ಆಕ್ಷೇಪವಿಲ್ಲದೆ ವಿವಾಹ ಮಾಡಿಕೊಡಲು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್​ ಹರಡುತ್ತಿರುವ ಭೀತಿಯ ಹಿನ್ನಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವ ಮೊದಲು ಅನುಮತಿ ಪಡೆಯುವುದು ಅವಶ್ಯಕ. ಆದರೆ ಸಂದೀಪ್​ ಉಯಿಕೆ ಮತ್ತು ಇಬ್ಬರು ಯುವತಿಯರ ಕುಟುಂಬ ಈ ವಿವಾಹ ಕಾರ್ಯಕ್ರಮಕ್ಕೆ ಅನುಮತಿಯನ್ನು ಕೇಳಿಲ್ಲ ಎಂದು ಘೋಡಡೋಂಗ್ರಿ ತಹಶೀಲ್ದಾರ್​​ ಮೋನಿಕಾ ವಿಶ್ವಕರ್ಮ ತಿಳಿಸಿದ್ದಾರೆ. ಹಾಗಾಗಿ ಕಾನೂನನ್ನು ಗಾಳಿಗೆ ತೂರಿ ವಿವಾಹವಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಚೀನಾ ಮೊಬೈಲ್ ಕಂಪೆನಿ ಜೊತೆಗಿದ್ದ ಒಪ್ಪಂದವನ್ನು ರದ್ದು ಮಾಡಿದ ಮೊದಲ ನಟ!
Published by: Harshith AS
First published: July 10, 2020, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading