ಕೊರೋನಾ ಭೀತಿ: ಸಂಸತ್ ಅಧಿವೇಶನ ಬೇಗ ಮುಗಿಸುವ ಸಾಧ್ಯತೆ

ಅಧಿವೇಶನ ಪ್ರಾರಂಭಗೊಂಡ ನಂತರ ಕೊರೋನಾ ಸೋಂಕು ತಗುಲಿರುವ ಸಂದರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶವನನ್ನು ಒಂದು ವಾರ ಮುಂಚಿತವಾಗಿ ಮುಗಿಸುವ ಸಾಧ್ಯತೆ ಇದೆ.

news18-kannada
Updated:September 19, 2020, 2:04 PM IST
ಕೊರೋನಾ ಭೀತಿ: ಸಂಸತ್ ಅಧಿವೇಶನ ಬೇಗ ಮುಗಿಸುವ ಸಾಧ್ಯತೆ
ಸಂಸತ್​ ಭವನ
  • Share this:
ನವದೆಹಲಿ(ಸೆ. 19): ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಾಗೂ ಹಲವು ಸಂಸದರಿಗೂ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಂಸತ್​ನ ಮುಂಗಾರು ಅಧಿವೇಶನ ಬೇಗ ಮುಗಿಸುವ ಸಾಧ್ಯತೆ ಇದೆ. ಕೊರೋನಾ ಹಿನ್ನೆಲೆಯಲ್ಲಿ ಬಹಳ ತಡವಾಗಿ ಇದೇ ಸೋಮವಾರ ಪ್ರಾರಂಭಗೊಂಡಿದ್ದ ಅಧಿವೇಶನ ಅಕ್ಟೋಬರ್ 1ರವರೆಗೆ ನಡೆಯಲು ನಿಗದಿಯಾಗಿದೆ. ಆದರೆ, ಒಂದು ವಾರ ಮುಂಚೆಯೇ, ಅಂದರೆ ಮುಂದಿನ ವಾರವೇ ಮುಕ್ತಾಯಗೊಳ್ಳಬಹುದು ಎನ್ನಲಾಗಿದೆ. “ಅಧಿವೇಶನ ಆರಂಭಗೊಂಡಾಗಿನಿಂದಲೂ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಅಧಿವೇಶನದ ಅವಧಿಯನ್ನೇ ಕಡಿತಗೊಳಿಸಲು ಯೋಜಿಸುತ್ತಿದೆ” ಎಂದು ಸಂಸದೀಯ ವ್ಯವಹಾರಗಳಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ. ಆದರೆ, ಲೋಕಸಭೆ ಮತ್ತು ರಾಜ್ಯಸಭೆ ಕಾರ್ಯದರ್ಶಿಗಳಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಅಧಿವೇಶನ ಪ್ರಾರಂಭವಾದ ಬಳಿಕ ಕೊರೋನಾ ಸೋಂಕು ದೃಢಪಟ್ಟವರಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಸದ ಅನಂತಕುಮಾರ್ ಹೆಗಡೆ ಮೊದಲಾದ 30 ಸದಸ್ಯರಿದ್ದಾರೆ. ಅಧಿವೇಶನದ ಮೊದಲ ದಿನವೇ 10ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್ ಬಂದಿತ್ತು. ಈಗ ಅಧಿವೇಶನದ ವರದಿಗಾಗಿ ಸಂಸತ್ ಪ್ರವೇಶಿಸುವ ಪ್ರತಿಯೊಬ್ಬ ಪತ್ರಕರ್ತನಿಗೂ ಇನ್ಮುಂದೆ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಕೊರೋನಾದಿಂದ ಗುಣಮುಖರಾದವರಿಗೂ ಮರುಸೋಂಕು; ವೈರಸ್ ರೂಪಾಂತರವಾಗುತ್ತಿದೆಯಾ? ಲಸಿಕೆ ಕಥೆ ಏನು?

ದೇಶಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 93 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲಿಯವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 53 ಲಕ್ಷದ ಗಡಿ ದಾಟಿದೆ. ಸಾವಿನ ಸಂಖ್ಯೆ ಕೂಡ 85 ಸಾವಿರದ ಗಡಿ ದಾಟಿದೆ.
Published by: Vijayasarthy SN
First published: September 19, 2020, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading