ಬಸ್ ನತ್ತ ಮುಖ ಮಾಡದ ಪ್ರಯಾಣಿಕರು; ಅನ್ ಲಾಕ್ ಆದರೂ ಮೆಜೆಸ್ಟಿಕ್ ಖಾಲಿ‌ ಖಾಲಿ

ಬಸ್ ಹತ್ತುವ ಮುನ್ನ ಪ್ರಯಾಣಿಕರು ಮಾಸ್ಕ್ ಧರಿಸಿರುವುದು ಸಾಮಾಜಿಕ ಅಂತರದಲ್ಲಿ ಆಸನದಲ್ಲಿ ಕೂರುವುದು ಪರಿಶೀಲಿಸಿ, ಒಂದು ಬಸ್ ನಲ್ಲಿ 25 ಪ್ರಯಾಣಿಕರು ಕುಳಿತ ನಂತರ ಹೊರಡುತ್ತಿವೆ‌

news18-kannada
Updated:July 22, 2020, 11:19 AM IST
ಬಸ್ ನತ್ತ ಮುಖ ಮಾಡದ ಪ್ರಯಾಣಿಕರು; ಅನ್ ಲಾಕ್ ಆದರೂ ಮೆಜೆಸ್ಟಿಕ್ ಖಾಲಿ‌ ಖಾಲಿ
ಕೆಂಪೇಗೌಡ ಬಸ್​ ನಿಲ್ದಾಣ
  • Share this:
ಬೆಂಗಳೂರು(ಜುಲೈ.22): ಒಂದು ವಾರದ ಲಾಕ್ ಡೌನ್ ಮುಗಿದಿದೆ. ಕೊರೋನಾ ಸಂಕಷ್ಟದ ಮಧ್ಯೆ ಎಂದಿನಂತೆ ಸಹಜ ಜನಜೀವನ ಬೆಳಗ್ಗೆಯಿಂದ ಆರಂಭವಾಗಿದೆ. ಆದರೆ, ಸಾರಿಗೆ ಬಸ್ ಗಳ ಕಡೆಗೆ ಪ್ರಯಾಣಿಕರು ಮಾತ್ರ ಮುಖ ಮಾಡುತ್ತಿಲ್ಲ. ಮೆಜೆಸ್ಟಿಕ್ ನಲ್ಲಿ ಬಸ್ ಗಳಿದ್ದರೂ ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿದೆ.

ಲಾಕ್ ಡೌನ್ ತೆರವು ಹಿನ್ನೆಲೆ ಇಂದು ಬೆಳಗ್ಗೆ 6 ರಿಂದ ಬಸ್ ಸಂಚಾರ ಆರಂಭಗೊಂಡಿದೆ. ಮೆಜೆಸ್ಟಿಕ್‌ನಲ್ಲಿ ಕೆ ಎಸ್ ಆರ್ ಟಿ‌ ಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಶುರುವಾಗಿದೆ. ಪ್ರಯಾಣಿಕರ ಸಂಚಾರದ ಮೇಲೆ ಬಸ್ ಸೇವೆ ಲಭ್ಯವಿದ್ದರೂ ಬೆಳಗ್ಗೆ ಪ್ರಯಾಣಿಕರು ಸಂಖ್ಯೆ ಅತಿ ವಿರಳವಾಗಿತ್ತು. ದಕ್ಷಿಣ ಕನ್ನಡ ಹೊರತುಪಡಿಸಿ ಮೆಜೆಸ್ಟಿಕ್ ನಿಂದ ರಾಜ್ಯದೆಲ್ಲೆಡೆ ಸಾರಿಗೆ ಬಸ್ ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡು ಸಂಚಾರ ಶುರು ಮಾಡಿದೆ.

ಕೆಎಸ್​ಆರ್​ಟಿಸಿ ಶೇ.20 ರಷ್ಟು ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದಲ್ಲಿ ಬಸ್ ಗಳ ಸಂಖ್ಯೆಯಲ್ಲಿಯೂ ಏರಿಕೆ ಮಾಡಲು ಕೆ ಎಸ್ ಆರ್ ಟಿ ಸಿ ನಿರ್ಧರಿಸಿದೆ. ಲಾಕ್ ಡೌನ್ ಮುನ್ನ ತಮ್ಮೂರಿಗೆ ಬಸ್ ಗಳಲ್ಲಿ, ವಾಹನಗಳಲ್ಲಿ ಗಂಟುಮೂಟೆ ಕಟ್ಟಿಕೊಂಡು ಹೊರಟ ಜನ ಉತ್ಸಾಹ, ಲಾಕ್ ಡೌನ್ ಮುಗಿದ ಬಳಿಕ ತಮ್ಮೂರಿಗೆ ತೆರಳಲು ಬಸ್ ಗಳತ್ತ ಬರಲಿಲ್ಲ. ಶೇ.10ರಷ್ಟು ಪ್ರಯಾಣಿಕರು ಇಲ್ಲದೆ ರಾಜ್ಯದ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ ಕಡೆ ತೆರಳುವ ಬಹುತೇಕ ಬಸ್ ಗಳು ಖಾಲಿಯಿದ್ದವು.

ಬಸ್ ಹತ್ತುವ ಮುನ್ನ ಪ್ರಯಾಣಿಕರು ಮಾಸ್ಕ್ ಧರಿಸಿರುವುದು ಸಾಮಾಜಿಕ ಅಂತರದಲ್ಲಿ ಆಸನದಲ್ಲಿ ಕೂರುವುದು ಪರಿಶೀಲಿಸಿ, ಒಂದು ಬಸ್ ನಲ್ಲಿ 25 ಪ್ರಯಾಣಿಕರು ಕೂತ ನಂತರ ಹೊರಡುತ್ತಿವೆ‌. ಕೆಲ ಮಾರ್ಗದ ಬಸ್ ಗಳು ಕಾದು ಕಾದು ಪ್ರಯಾಣಿಕರು ಎಷ್ಟಿದ್ದಾರೋ ಅಷ್ಟೇ ಸಂಖ್ಯೆಯಲ್ಲಿಯೇ ಬಸ್ ಗಳು ಹೊರಡುತ್ತಿರುವ ದೃಶ್ಯ ಕಂಡುಬಂದಿತು.

ಇನ್ನು ಬಿಎಂಟಿಸಿ ಸಹ ಸಂಚಾರ ಆರಂಭಿಸಿದೆ. ಇಂದಿನಿಂದ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಸಂಚಾರವಿರಲಿದ್ದು, ಒಂದು ಸಾವಿರ ವಾಹನಗಳ ಸೇವೆ ಲಭ್ಯವಿರಲಿದೆ. ಪ್ರಯಾಣಿಕರ ಆಧಾರದ‌ ಮೇಲೆ ಬಸ್ ಹೆಚ್ಚಿಸಲು ಬಿಎಂಟಿಸಿ ನಿರ್ಧಾರ ಮಾಡಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸೂಚನೆ ನೀಡಿದ್ದು, ಅದರಂತೆ ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ ಕೊರೋನಾ ಮಾರ್ಗಸೂಚಿ ಪಾಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಇಂದು ರಾಜ್ಯಸಭಾ ಸದಸ್ಯರಾಗಿ ಮಲ್ಲಿಕಾರ್ಜುನ ಖರ್ಗೆ ಸೇರಿ 60 ಜನ ಪ್ರಮಾಣ ವಚನ ಸ್ವೀಕಾರ, ದೇವೇಗೌಡ ಗೈರು

ಇಂದು ಬೆಳಗ್ಗೆ 6 ಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭಿಸಬೇಕಾಗಿತ್ತು. ಆದರೆ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಾರದ ಬಸ್ ಗಳು ಅರ್ದ ಗಂಟೆ ತಡವಾಗಿ ಒಂದೊಂದಾಗಿ ಬಸ್ ಗಳು ನಿಲ್ದಾಣದತ್ತ ಆಗಮಿಸಿದವು. ಬೆಳಗ್ಗೆ 6 ಗಂಟೆಗೆ ಏರ್ ಪೋರ್ಟ್ ಬಸ್ ಹೊರತುಪಡಿಸಿ ಉಳಿದ ಯಾವ ಬಸ್ ಬಂದಿದ್ದಿಲ್ಲ. ಬಸ್ ಬಾರದ ಹಿನ್ನೆಲೆ ಮೆಜೆಸ್ಟಿಕ್ ಹೊರಗಡೆ ಆಟೋ ಕಡೆ  ಪ್ರಯಾಣಿಕರು ತೆರಳುತ್ತಿದ್ದರು. ಪ್ರಯಾಣಿಕರು ಹೆಚ್ಚಳವಿಲ್ಲದ ಕಾರಣ ಬಿಎಂಟಿಸಿ ಬಸ್ ಗಳು ವಿರಳ ಸಂಖ್ಯೆಯಲ್ಲಿ ಆಗಮಿಸುತ್ತಿದ್ದವು‌‌.ಹೆಚ್ ಎ ಎಲ್ ಕಡೆ ತೆರಳುವ ಬಸ್ ಬೆಳಗ್ಗೆ 7.30 ಗಂಟೆಯಾದ್ರೂ ಬಂದಿದ್ದಿಲ್ಲ. ಹೆಚ್ ಎ ಎಲ್ ಸಿಬ್ಬಂದಿ ಬಸ್ ಗಾಗಿ ಕಾಯುತ್ತಿರುವ ಪ್ರಯಾಣಿಕರು ಬಸ್ ಇಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಲಾಕ್ ಡೌನ್ ಬಳಿಕ ಸಾರಿಗೆ ವಾಹನಗಳಲ್ಲಿ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕೊರೋನಾ ಕೇಸ್ ಬೆಂಗಳೂರಿನಲ್ಲಿ ಇನ್ನಷ್ಟು ಹೆಚ್ಚಳವಾಗುತ್ತಿರುವ ಕಾರಣ ತಮ್ಮ ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ‌. ಇದರಿಂದಾಗಿ ಮೆಜೆಸ್ಟಿಕ್ ನಲ್ಲಿ ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿಸಿ ಬಸ್ ಗಳು ಇದ್ದರೂ ವಿರಳ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿರುವುದು ಕಂಡುಬಂದಿತು‌.
Published by: G Hareeshkumar
First published: July 22, 2020, 9:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading