ಬಿಎಂಟಿಸಿ‌ ಬಸ್ ಹತ್ತಿದ ವಿಕಲಚೇತನರಿಗೆ ಶಾಕ್ ; ವರ್ಷದ ಪಾಸ್ ಸ್ವೀಕರಿಸದೆ ಟಿಕೆಟ್ ಕೇಳಿದ ಕಂಡಕ್ಟರ್

news18-kannada
Updated:May 27, 2020, 3:36 PM IST
ಬಿಎಂಟಿಸಿ‌ ಬಸ್ ಹತ್ತಿದ ವಿಕಲಚೇತನರಿಗೆ ಶಾಕ್ ; ವರ್ಷದ ಪಾಸ್ ಸ್ವೀಕರಿಸದೆ ಟಿಕೆಟ್ ಕೇಳಿದ ಕಂಡಕ್ಟರ್
ಬಿಎಂಟಿಸಿ ಬಸ್
  • Share this:
ಬೆಂಗಳೂರು(ಮೇ.27): ಬಿಎಂಟಿಸಿ ಬಸ್‌ನಲ್ಲಿ ವಿಕಲಚೇತನರ ಪಾಸ್‌ ತಿರಸ್ಕೃತಗೊಳ್ಳುತ್ತಿವೆಯಾ? ಹೀಗೊಂದು ಪ್ರಶ್ನೆ ಮೂಡುತ್ತಿದೆ. ಯಾಕೆಂದರೆ ಬೆಂಗಳೂರಿನಲ್ಲಿಂದು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಬಂದ ವಿಕಲಚೇತನ ಪ್ರಯಾಣಿಕರಿಗೆ ತಮಗೆ‌ ದೊರೆತಿರುವ ವರ್ಷದ ಪಾಸ್ ತೋರಿಸಿದರೆ ಅದನ್ನು ಕಂಡಕ್ಟರ್ ಒಪ್ಪುತ್ತಿಲ್ಲ. 

ಲಾಕ್ ಡೌನ್ ಸಡಲಿಕೆ ಬಳಿಕ ಆರಂಭವಾಗಿದ್ದ ಬಿಎಂಟಿಸಿ ಬಸ್ ಗೆ ಪ್ರಯಾಣಿಕರ ನಿರುತ್ಸಾಹ ತೋರಿಸುತ್ತಿದ್ದರು. ಬಸ್ ಹತ್ತಿ ಒಂದೇ ಸ್ಟೇಜ್‌ ಪ್ರಯಾಣ ಮಾಡಿದರೂ 70 ರೂಪಾಯಿ ಪಾಸ್ ಪಡೆಯಬೇಕಾಗಿತ್ತು. ಇದರಿಂದ ಪ್ರಯಾಣಿಕರ‌ ಬಸ್ ಸೇವೆಗೆ ಹೆಚ್ಚು ಉತ್ಸಾಹ ತೋರುತ್ತಿದ್ದಿಲ್ಲ. ಆದರೆ ಯಾವಾಗ ಪರಿಷ್ಕೃತ ದರ ಇಂದು‌ ಅನ್ವಯವಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತು. ಆದರೆ ವಿಕಲಚೇತನ‌ ಪ್ರಯಾಣಿಕರು ಬಿಎಂಟಿಸಿ ಬಸ್‌ ನಲ್ಲಿ ಪ್ರಯಾಣ ಮಾಡಲು ಬಂದಾಗ ಕಂಡಕ್ಟರ್ ಉತ್ತರ ಕೇಳಿ‌ ಗಾಭರಿಯಾಗಿದ್ದಾರೆ‌.

ವಿಕಲಚೇತನರಿಗಾಗಿಯೇ ಒಂದು ವರ್ಷದ ಪಾಸ್ ನ್ನು ಬಿಎಂಟಿಸಿ ನೀಡುತ್ತಿದೆ. 660 ರೂಪಾಯಿ ರಿಯಾಯತಿ ಪಾಸ್ ಪಡೆದು ಬಿಎಂಟಿಸಿ ಬಸ್‌ನಲ್ಲಿ‌ ವಿಕಲಚೇತನರು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇಂದು‌ ಬೆಂಗಳೂರು ಮೆಜೆಸ್ಟಿಕ್‌ ಸ್ಟಾಪ್ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಕಡೆ ತೆರಳುವ‌ ಬಸ್ ಹತ್ತಿ ಕುಳಿತಿದ್ದಾರೆ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗ, ತಾವು ಪಡೆದಿರುವ ವಿಕಲಚೇತನ ಪಾಸ್ ತೋರಿಸಿದ್ದಾರೆ. ಇದನ್ನು ನೋಡಿದ ಕಂಡಕ್ಟರ್ ಈ‌ ಪಾಸ್ ಈಗ ನಡೆಯುವುದಿಲ್ಲ. ಟಿಕೆಟ್ ತಗೊಳ್ಳಿ ಎಂದೇಳಿದ್ದು ಕೇಳಿ ವಿಕಲಚೇತನ ಗುಂಡೂರಾವ್ ಅವರನ್ನು‌ ಕೇಳಿದ್ದಾರೆ. ವಿಕಲಚೇತನರಿಗೂ ಬಿಎಂಟಿಸಿ ಮಹಾಮೋಸ ಮಾಡುತ್ತಿದೆ.

ಒಂದು ವರ್ಷದ ಅಂಗವಿಕರ ಪಾಸ್ ಹೊಂದಿದರೂ ಬಸ್​​ಗೆ ನೋ ಎಂಟ್ರಿ. ಟಿಕೆಟ್ ಖರೀದಿಸಿ, ಇಲ್ಲ ದಿನದ ಪಾಸ್  ತೆಗೆದುಕೊಳ್ಳಿ ಎನ್ನುತ್ತಿದ್ದಾರೆ ಕಂಡಕ್ಟರ್. ಡೈಲಿ ಪಾಸ್ ಇಲ್ಲದಿದ್ರೆ ಅರ್ಧದಲ್ಲೇ ಇಳಿಸುತ್ತಿದ್ದಾರೆ. ನಮ್ಮ ವಿಕಲಚೇತನರ ಪಾಸ್ ಡಿಸೆಂಬರ್ ವರೆಗೂ ಅವಧಿ ಇದೆ. ಹೀಗಿದರೂ ನಮ್ಮ ಬಳಿ ಮತ್ತೆ ಹಣ ವಸೂಲಿಗೆ ಬಿಎಂಟಿಸಿ ಇಳಿದಿದೆ. 660 ರೂ ಕೊಟ್ಟು ವಾರ್ಷಿಕ ಪಾಸ್ ಕೊಂಡಿದಿವಿ. ಈಗ ಅದು ಆಗೋಲ್ಲ, ಡೈಲಿ ಪಾಸ್ ಕೊಳ್ಳಿ, ಇಲ್ಲಾ ಟಿಕೆಟ್ ಕೊಳ್ಳಿ ಅಂತಿದ್ದಾರೆ. ಇದ್ಯಾವ ಸೀಮೆ ನ್ಯಾಯ ಸ್ವಾಮಿ ಎಂದು ಬಳಿ ಪ್ರಶ್ನೆ ಮಾಡಿದ ವಿಕಲಚೇತನ ಗುಂಡೂರಾವ್ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ, ಡಿಕೆಶಿಗೆ ಶಿವಮೊಗ್ಗ ನಗರಸಭೆಯಲ್ಲಿ ಕಾಂಗ್ರೆಸ್ ಮಾಡಿದ ಕರ್ಮಕಾಂಡ ನೆನಪಿಸಿದ ಈಶ್ವರಪ್ಪ

ಈ‌ ಬಗ್ಗೆ ಬಿಎಂಟಿಸಿ ಅಧಿಕಾರಿ ಕೇಳಿದರೆ, ವಿಕಲಚೇತನರಿಗೆ ಕೊಡುವ ವರ್ಷದ ಪಾಸ್ ಅವಧಿ ಪೂರ್ಣಗೊಂಡಿಲ್ಲವೆಂದರೆ ಅವರು ಪ್ರಯಾಣ ಮಾಡಲು ತೊಂದರೆಯಿಲ್ಲ. ಪ್ರತ್ಯೇಕ ಟಿಕೆಟ್ ಪಡೆಯುವಂತಿಲ್ಲ. ಎಂದಿನಂತೆ ಪಾಸ್ ತೋರಿಸಿ ಪ್ರಯಾಣ ಮಾಡಬಹುದು. ಯಾವುದೇ ತೊಂದರೆಯಿಲ್ಲ. ಪಾಸ್ ತರಿಸ್ಕೃರಿಸಿದರ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಪ್ರತಿಕ್ರಿಯೆ ನೀಡುತ್ತಾರೆ.
First published: May 27, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading