ಇಂದಿನಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭ; ಷರತ್ತುಗಳು ಅನ್ವಯ

ದಿನದ ಪಾಸ್​, ವಾರದ ಪಾಸ್​, ತಿಂಗಳ ಪಾಸ್​ ಇರುವವರಿಗೆ ಮಾತ್ರ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ 300 ರೂ. ಮುಖಬೆಲೆಯ ಬಿಎಂಟಿಸಿ ಪಾಸ್​ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಈ ಪಾಸ್​ ಪಡೆದರೆ ವಾರ ಪೂರ್ತಿ ಬಿಎಂಟಿಸಿ ಬಸ್​ಗಳಲ್ಲಿ ಓಡಾಟ ಮಾಡಬಹುದು.

news18-kannada
Updated:May 19, 2020, 6:50 AM IST
ಇಂದಿನಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭ; ಷರತ್ತುಗಳು ಅನ್ವಯ
ಕೆಎಸ್​ಆರ್​ಟಿಸಿ
 • Share this:
ಬೆಂಗಳೂರು: ದೇಶಾದ್ಯಂತ ನಾಲ್ಕನೇ ಹಂತದ ಲಾಕ್​ಡೌನ್​ ಮೇ 18ರಿಂದ ಜಾರಿಯಾಗಿದ್ದು, ಮೇ 31ರವರೆಗೂ ಇರಲಿದೆ. ಲಾಕ್​ಡೌನ್​ 4.0 ನಲ್ಲಿ ಭಾರಿ ಸಡಿಲಿಕೆ ನೀಡಲಾಗಿದ್ದು, ಬಹುತೇಕ ಎಲ್ಲ ವ್ಯಾಪಾರ- ವಹಿವಾಟು, ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಬಸ್ ಸಂಚಾರ ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದರಿಂದ ಸೋಮವಾರ ಸಭೆ ನಡೆಸಿದ ಸಿಎಂ ಬಿಎಸ್​ವೈ ಅವರು ಇಂದಿನಿಂದ ಸಾರಿಗೆ ಸಂಚಾರ ಆರಂಭಿಸಲು ನಿರ್ಧರಿಸಿದ್ದಾರೆ. ಅದರಂತೆ ಇಂದಿನಿಂದ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್ಸುಗಳ ಸಂಚಾರ ಆರಂಭವಾಗಲಿದೆ.

ಇಂದಿನಿಂದ 1500 ಬಸ್ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂದರೆ ಶೇ. 25 ಬಸ್ ಸಂಚಾರ ಆರಂಭಿಸಲು ಕೆಎಸ್​ಆರ್​ಟಿಸಿ ಮುಂದಾಗಿದೆ. ನಂತರ ಹಂತಹಂತವಾಗಿ ಬಸ್​ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲು ಚಿಂತಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ಬಸ್​ಗಳು ಸಂಜೆ 7 ಗಂಟೆಯೊಳಗೆ ನಿಗದಿತ ನಿಲ್ದಾಣ ತಲುಪಬೇಕು. ಸಂಜೆ 7 ಗಂಟೆ ನಂತರ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಸಂಜೆ 4 ಗಂಟೆಯೊಳಗೆ ಬೆಂಗಳೂರಿನಿಂದ ಎಲ್ಲ ಬಸ್ಸುಗಳು ಹೊರಡಲಿವೆ. ಬಸ್ ಪ್ರಯಾಣ ದರ ಯಥಾಸ್ಥಿತಿ ಇರಲಿದೆ.

ಬೆಂಗಳೂರಿನಿಂದ ಮೈಸೂರಿಗೆ ಸಂಜೆ 4ವರೆಗೆ ಬಸ್​ಗಳು ಹೊರಡಲಿವೆ. ಆನಂತರ ಮೈಸೂರಿಗೆ ಯಾವುದೇ ಬಸ್ಸುಗಳು ಇರುವುದಿಲ್ಲ. ಬೆಂಗಳೂರಿನಿಂದ ಶಿವಮೊಗ್ಗ ಮಧ್ಯಾಹ್ನ 12 ಗಂಟೆಯೊಳಗೆ ಬಸ್​ ಹೊರಡಲಿದೆ. ಬೆಂಗಳೂರಿನಿಂದ ದಾವಣಗೆರೆಗೆ ಮಧ್ಯಾಹ್ನ 1 ಗಂಟೆಗೆ ಕಡೆಯ ಬಸ್​ ತೆರಳಲಿದೆ. ಬೆಂಗಳೂರಿನಿಂದ ಹಾಸನಕ್ಕೆ ಮಧ್ಯಾಹ್ನ 3 ಗಂಟೆಗೆ, ಬೆಂಗಳೂರಿನಿಂದ ಮಂಗಳೂರಿಗೆ ಬೆಳಗ್ಗೆ 11.30ಕ್ಕೆ ಕಡೆಯ ಬಸ್ ಹೊರಡಲಿದೆ.

ಬಸ್​ನಲ್ಲಿ ಪ್ರಯಾಣದ ಕ್ರಮಗಳು


 • ಒಂದು ಬಸ್ ನಲ್ಲಿ ಕೇವಲ 30 ಪ್ರಯಾಣಿಕರು ಮಾತ್ರ ಇರಬೇಕು.
 • ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ.

 • ಮಾಸ್ಕ್ ಇಲ್ಲದೆ ಬಸ್ ಹತ್ತುವಂತಿಲ್ಲ.

 • ಬಸ್ಸಿನಲ್ಲಿ ಸಾಮಾಜಿಕ ಅಂತರ ಕಡ್ಡಾಯ.

 • ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಬೇಕು.

 • ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯ.

 • ರಾಜ್ಯದೊಳಗೆ ಮಾತ್ರ ಬಸ್ ಸಂಚಾರ.

 • ಎಸಿ ಬಸ್ ಸಂಚಾರ ಸ್ಥಗಿತ.

 • ಭಾನುವಾರ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತ.

 • ಪ್ರಯಾಣಿಕರು ಗುರುತಿನ ಚೀಟಿ ಸಮೇತ ಬರುವಂತೆ ಸೂಚನೆ.

 • ಮಾರ್ಗ ಮಧ್ಯೆ ಊಟ, ತಿಂಡಿಗೆ ಬಸ್ ನಿಲ್ಲಿಸದಿರಲು ಸೂಚನೆ.

 • ಊಟ, ತಿಂಡಿ ವ್ಯವಸ್ಥೆಯನ್ನು ಪ್ರಯಾಣಿಕರೇ ಮಾಡಿಕೊಳ್ಳಬೇಕು.


ಬಿಎಂಟಿಸಿ ಬಸ್​ಗಳ ಸಂಚಾರ ಕೂಡ ಇಂದಿನಿಂದ ಆರಂಭವಾಗಲಿದ್ದು, ಮೇಲಿನ ನಿಯಮಗಳು ಇಲ್ಲೂ ಅನ್ವಯವಾಗಲಿದೆ. ಕಂಟೈನ್ಮೆಂಟ್​ ಜೋನ್​ಗಳಲ್ಲಿ ಬಸ್​ ಸಂಚಾರ ಹೊರತುಪಡಿಸಿ, ಉಳಿದೆಡೆ ಸಂಚಾರ ಇರಲಿದೆ.

ಇದನ್ನು ಓದಿ: ಕೊರೋನಾ ಎಫೆಕ್ಟ್​; ಕೇಂದ್ರ ಸರ್ಕಾರಿ ನೌಕರರಿಗೂ ಇನ್ನುಮುಂದೆ 3 ಶಿಫ್ಟ್​ನಲ್ಲಿ ಕೆಲಸ

ದಿನದ ಪಾಸ್​, ವಾರದ ಪಾಸ್​, ತಿಂಗಳ ಪಾಸ್​ ಇರುವವರಿಗೆ ಮಾತ್ರ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ 300 ರೂ. ಮುಖಬೆಲೆಯ ಬಿಎಂಟಿಸಿ ಪಾಸ್​ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಈ ಪಾಸ್​ ಪಡೆದರೆ ವಾರ ಪೂರ್ತಿ ಬಿಎಂಟಿಸಿ ಬಸ್​ಗಳಲ್ಲಿ ಓಡಾಟ ಮಾಡಬಹುದು.


First published: May 19, 2020, 6:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading