Coronavirus Updates: ಕೊಡಗಿನಲ್ಲಿ ಒಂದೇ ದಿನ 33 ಕೊರೋನಾ ಕೇಸ್​​: 217ಕ್ಕೆ ಏರಿದ ಸೋಂಕಿತರ ಸಂಖ್ಯೆ

ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಕೇಸುಗಳು ಮಿತಿ ಮೀರುತ್ತಲೇ ಇವೆ. ಕಳೆದ ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಎರಡಂಕಿಯನ್ನು ದಾಟದ ಮಹಾಮಾರಿ ಏಳು ದಿನ ಎನ್ನುವಷ್ಟರಲ್ಲೇ ಇನ್ನೂರರ ಗಡಿಯನ್ನು ದಾಟಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು.

news18-kannada
Updated:July 14, 2020, 7:23 PM IST
Coronavirus Updates: ಕೊಡಗಿನಲ್ಲಿ ಒಂದೇ ದಿನ 33 ಕೊರೋನಾ ಕೇಸ್​​: 217ಕ್ಕೆ ಏರಿದ ಸೋಂಕಿತರ ಸಂಖ್ಯೆ
ಕೊರೋನಾ ವೈರಸ್ ಸ್ಯಾಂಪಲ್
  • Share this:
ಕೊಡಗು(ಜು.14): ಕೊಡಗು ಜಿಲ್ಲೆಯಲ್ಲಿ ಕೊರೋನಾ ಎನ್ನೋ ಡೆಡ್ಲಿ ವೈರಸ್ ಹಾವಳಿ ಜೋರಾಗಿದೆ. ಅದರಲ್ಲೂ ಸೋಂಕಿತ ಪ್ರಾಥಮಿಕ ಸಂಪರ್ಕದಿಂದಲೇ ವೈರಸ್ ಇಷ್ಟು ವೇಗದಲ್ಲಿ ಹರಡುತ್ತಿರುವುದು ಜಿಲ್ಲೆಯಲ್ಲಿ ಹರಡುತ್ತಿರುವುದು ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.

ಬೆಳ್ಳಂ ಬೆಳಿಗ್ಗೆ 12 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು. ಬಳಿಕ ಮಧ್ಯಾಹ್ನದ ಬಳಿಕ ಮತ್ತೆ 13 ಜನರಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು. ಇದೀಗ ಮತ್ತೆ ಸಂಜೆ ವೇಳೆಗೆ ಜಿಲ್ಲೆಯಲ್ಲಿ 8 ಹೊಸ ಪ್ರಕರಣಗಳು ದಾಖಲಾಗಿವೆ. ಅಂದರೆ ಒಂದೇ ದಿನ 33 ಕೇಸ್​​​ ಪತ್ತೆಯಾಗಿವೆ.

ಅದರಲ್ಲೂ ಸೋಂಕಿತರ ಪ್ರಾಥಮಿಕ ಸಂಪರ್ಕ ಮತ್ತು ಐಎಲ್‍ಐನಿಂದ ಬಳಲುತ್ತಿರುವ ಮಂದಿಗೆ ಕೊರೋನಾ ಸೋಂಕು ಹೆಚ್ಚುತ್ತಿರುವುದು ಜಿಲ್ಲೆಯ ಜನತೆಯನ್ನು ದಂಗು ಬಡಿಸುತ್ತಿದೆ. ಒಟ್ಟಿನಲ್ಲಿ ಒಂದೇ ದಿನ 33 ಜನರಿಗೆ ಮಹಾಮಾರಿ ಹೆಗಲೇರುವ ಮೂಲಕ ಬರೋಬ್ಬರಿ 217 ಜನರಿಗೆ ಸುತ್ತಿಕೊಂಡು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

ಈ 217 ಸೋಂಕಿತರ ಪೈಕಿ 87 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮಹಾಮಾರಿ ವ್ಯಾಪಕವಾಗಿ ಹರಡಿರುವುದರಿಂದ 95 ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶಗಳನ್ನಾಗಿ ಮಾಡಲಾಗಿದೆ. ಅಲ್ಲದೆ ಡೆಡ್ಲಿ ವೈರಸ್ ಜಿಲ್ಲೆಯಲ್ಲಿ ಇದುವರೆಗೆ 3 ಜನರ ಉಸಿರು ನಿಲ್ಲಿಸಿದೆ.

ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಕೇಸುಗಳು ಮಿತಿ ಮೀರುತ್ತಲೇ ಇವೆ. ಕಳೆದ ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಎರಡಂಕಿಯನ್ನು ದಾಟದ ಮಹಾಮಾರಿ ಏಳು ದಿನ ಎನ್ನುವಷ್ಟರಲ್ಲೇ ಇನ್ನೂರರ ಗಡಿಯನ್ನು ದಾಟಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು.

ನಾಲ್ಕು ದಿನಗಳ ಹಿಂದೆಯಷ್ಟೇ ಜಿಲ್ಲೆಯ ಶಾಸಕರು ಪರಿಷತ್ ಸದಸ್ಯರು ಲಾಕ್‍ಡೌನ್ ಮಾಡಿದರೆ ಉತ್ತಮ ಎಂದು ಉಸ್ತುವಾರಿ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಜಿಲ್ಲಾಧಿಕಾರಿ ಮಾತ್ರ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡುವುದಿಲ್ಲ. ಅಷ್ಟಕ್ಕೂ ಲಾಕ್‍ಡೌನ್ ಮಾಡಿದರೆ, ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ. ಲಾಕ್‍ಡೌನ್ ಮಾಡಿ ಮತ್ತೆ ಓಪನ್ ಮಾಡಿದಾಗ ಸಹಜವಾಗಿಯೇ ವೈರಸ್ ಹರಡಿಯೇ ಹರಡುತ್ತದೆ.

ಜೊತೆಗೆ ಮುಖ್ಯವಾಗಿ ಲಾಕ್ ಡೌನ್ ಮಾಡಿದರೆ ಬಡವರು, ಮಧ್ಯಮ ವರ್ಗದ ಜನರು ತೀವ್ರ ಸಮಸ್ಯೆ ಅನುಭವಿಸಲಿದ್ದಾರೆ. ಹೀಗಾಗಿ ಲಾಕ್ ಡೌನ್ ಮಾಡುವುದಿಲ್ಲ. ಬದಲಾಗಿ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯ, ದೇಶಗಳಿಂದ ಕೊಡಗಿಗೆ ಬರುವವರಿಂದ ಕೊವಿಡ್ ವೈರಸ್ ಹರಡುತ್ತಿದೆ. ಆದ್ದರಿಂದ ಹೊರ ಜಿಲ್ಲೆಗಳಿಂದ ಬರುವವರಿಗೆ ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಲಾಕ್‍ಡೌನ್ ಮಾಡಲ್ಲ;ಹೊರ ಜಿಲ್ಲೆ, ರಾಜ್ಯ ಮತ್ತು ದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬರುತ್ತಿವವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡುತ್ತಿದೆ. ಇವರಿಗೆ ಕೈಗೆ ಸೀಲು ಹಾಕಲಾಗುತ್ತಿದ್ದು, ಅಂತಹವರು ಯಾವುದೇ ಕಾರಣಕ್ಕೂ ಹೊರಬರಬಾರದು. ಕೋವಿಡ್ ಲಕ್ಷಣಗಳಿರುವವರು ಹೊರಗೆ ಓಡಾಡುವ ಬದಲು ತಪ್ಪದೆ ಆಸ್ಪತ್ರೆಗೆ ಹೋಗಿ ಪರಿಶೀಲಿಸಿಕೊಳ್ಳಬೇಕು. ಜನರು ಕೂಡ ಗುಂಪುಗೂಡುವುದನ್ನು ನಿಯಂತ್ರಿಸಬೇಕು ಎಂದಿದ್ದಾರೆ.
Published by: Ganesh Nachikethu
First published: July 14, 2020, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading