ಕೊಡಗಿನಲ್ಲಿ ಕೊರೋನಾಗೆ ಮತ್ತೊಂದು ಬಲಿ - ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಸದ್ಯ ವೃದ್ದೆಯನ್ನು ಮಾರಕ ಕೊರೋನಾ ಬಲಿ ತೆಗೆದುಕೊಂಡಿದೆ. ಈಗ ವೃದ್ದೆ ಕೊರೋನಾದಿಂದ ಸಾವನ್ನಪ್ಪಿದ ಕಾರಣ ಇವರ ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ವೃದ್ಧೆಯ ಅಂತ್ಯ ಸಂಸ್ಕಾರವನ್ನು ಸರ್ಕಾರದ ಕೊವಿಡ್ ಮಾರ್ಗ ಸೂಚಿಯಂತೆ ನಡೆಸಲಾಗುವು ಎಂದು ಜಿಲ್ಲಾಡಳಿತ ತಿಳಿಸಿದೆ.

news18-kannada
Updated:August 26, 2020, 8:19 AM IST
ಕೊಡಗಿನಲ್ಲಿ ಕೊರೋನಾಗೆ ಮತ್ತೊಂದು ಬಲಿ - ಸಾವಿನ ಸಂಖ್ಯೆ 17ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ.
  • Share this:
ಕೊಡಗು(ಆ.26): ಕೊಡಗಿನಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟವೂ ಮುಂದುವರಿದಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಮತ್ತೊಬ್ಬರನ್ನು ಬಲಿ ಪಡೆದಿದೆ. ಈ ಮೂಲಕ ಸದ್ಯ ಕೊಡಗಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಿಂದ ತಿಳಿದು ಬಂದಿದೆ. ಕುಶಾಲನಗರದ ಬೈಚನಹಳ್ಳಿಯ 77 ವರ್ಷದ ವೃದ್ಧೆ ಕೊರೋನಾದಿಂದ ಮೃತಪಟ್ಟವರು. ವೃದ್ಧೆ ಹಿಂದಿನಿಂದಲೂ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 23 ರಂದು ವೃದ್ಧೆಗೆ ಕೆಮ್ಮು ಕಾಣಿಸಿಕೊಂಡಿತ್ತು.

ಮಂಗಳವಾರ ವೃದ್ಧೆಯ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಸುಸ್ತಾಗಿದ್ದರು. ಹೀಗಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ವೃದ್ಧೆ ಸಾವನ್ನಪ್ಪಿದ್ದಾರೆ. ಬಳಿಕ ವೃದ್ಧೆಯ ಮೂಗಿನ ದ್ರವ ತೆಗೆದು ಆ್ಯಂಟಿಜೆನ್ ರ‍್ಯಾಪಿಡ್ ಟೆಸ್ಟ್ ಮಾಡಿದಾಗ ಕೊರೋನಾ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


ಸದ್ಯ ವೃದ್ದೆಯನ್ನು ಮಾರಕ ಕೊರೋನಾ ಬಲಿ ತೆಗೆದುಕೊಂಡಿದೆ. ಈಗ ವೃದ್ದೆ ಕೊರೋನಾದಿಂದ ಸಾವನ್ನಪ್ಪಿದ ಕಾರಣ ಇವರ ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ವೃದ್ಧೆಯ ಅಂತ್ಯ ಸಂಸ್ಕಾರವನ್ನು ಸರ್ಕಾರದ ಕೊವಿಡ್ ಮಾರ್ಗ ಸೂಚಿಯಂತೆ ನಡೆಸಲಾಗುವು ಎಂದು ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: KM Shivalinge Gowda: ಜೆಡಿಎಸ್​​ ಶಾಸಕ ಶಿವಲಿಂಗೇಗೌಡಗೆ ಕೊರೋನಾ ಪಾಸಿಟಿವ್​​​

ಇನ್ನು, ವೃದ್ದೆಯೊಂದಿಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಮತ್ತವರ ಕುಟುಂಬ ಸದಸ್ಯರಿಗೂ ಕೊರೋನಾ ಪರೀಕ್ಷೆಯನ್ನು ಮಾಡಲಾಗುವುದು. ನಂತರ ಇವರಲ್ಲಿ ಯಾರಿಗಾದರೂ ಕೊರೋನಾ ಪಾಸಿಟಿವ್​​ ಬಂದರೆ ಸರ್ಕಾರದ ಪ್ರೋಟೋಕಾಲ್​​ ಪ್ರಕಾರ ಚಿಕಿತ್ಸೆ ನೀಡಲಾಗುವುದು. ನಂತರ ಹೋಮ್​​ ಕ್ವಾರಂಟೈನ್​​ಗೆ ಒಳಪಡಿಸಲಾಗುವುದು.
Published by: Ganesh Nachikethu
First published: August 26, 2020, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading