ಬೆಂಗಳೂರಿನಲ್ಲಿ ಕೊರೋನಾ ಹಾವಳಿ; ಗದಗಕ್ಕೆ ವಾಪಾಸ್ ಬಂದವರ ಕಷ್ಟ ಹೇಳತೀರದು!

ಗದಗದ ಕ್ವಾರಂಟೈನ್ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಸಹ ಮಾಡಿಲ್ಲ. ಕುಡಿಯುವ ನೀರು, ಉಪಹಾರ, ಊಟದ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

news18-kannada
Updated:July 14, 2020, 4:54 PM IST
ಬೆಂಗಳೂರಿನಲ್ಲಿ ಕೊರೋನಾ ಹಾವಳಿ; ಗದಗಕ್ಕೆ ವಾಪಾಸ್ ಬಂದವರ ಕಷ್ಟ ಹೇಳತೀರದು!
ಗದಗದ ಕ್ವಾರಂಟೈನ್ ಸೆಂಟರ್​ನಲ್ಲಿ ಪರದಾಡುತ್ತಿರುವ ಕುಟುಂಬ
  • Share this:
ಗದಗ (ಜು. 14): ಕರ್ನಾಟಕದ ರಾಜಧಾನಿ ಬೆಂಗಳೂರು ಡೆಡ್ಲಿ ಕೊರೋನಾದಿಂದ ತತ್ತರಿಸಿ ಹೋಗಿದೆ. ಜೀವವನ್ನು ಉಳಿಸಿಕೊಳ್ಳಬೇಕೆಂದು ಅಲ್ಲಿಂದ ಸಾರಿಗೆ ಸಂಸ್ಥೆ ಬಸ್  ಹಾಗೂ ಖಾಸಗಿ ವಾಹನಗಳ ಮೂಲಕ ಜನರು ಬರುತ್ತಿದ್ದಾರೆ. ಆದರೆ, ಹಾಗೆ ಬಂದವರ ಕಷ್ಟ ಹೇಳತೀರದು. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ತುಂಬು ಕುಟುಂಬ ಪರದಾಟ ನಡೆಸಿದೆ.

ನಿನ್ನೆ ಸುಮಾರು ಗಂಟೆಗೆ ಬೆಂಗಳೂರಿನಿಂದ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ್ದಾರೆ. ಆ ಕುಟುಂಬ ಅಲ್ಲಿಂದ ಮುಂಡರಗಿ ತಾಲೂಕಿನ ಹಮ್ಮಿಗೆ ಗ್ರಾಮಕ್ಕೆ ಹೋಗಬೇಕು. ಆದರೆ, ಅಧಿಕಾರಿಗಳು ಅವರಿಗೆ ಮಕ್ಕಳು ಇರುವುದರಿಂದ ಮುಂಡರಗಿ ಪಟ್ಟಣದಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್, ಅವರ ಪತ್ನಿ ಹಾಗೂ ಮೂವರು ಮಕ್ಕಳು ಹಸಿವಿನಿಂದ ಬಳಲಿದ್ದಾರೆ. ರಾತ್ರಿಯಿಂದ ಕ್ವಾರಂಟೈನ್ ಕೇಂದ್ರದಲ್ಲಿ ಹನಿ ನೀರು ಸಹ ನೀಡಿಲ್ಲ. ಮುಂಜಾನೆ 11 ಗಂಟೆಯಾದರೂ ಪುಟಾಣಿ ಮಕ್ಕಳಿಗೆ ಉಪಹಾರ ಸಹ ನೀಡಿಲ್ಲ.

ಇದನ್ನೂ ಓದಿ: Bengaluru Lockdown: ನಾಳೆಯಿಂದ 1 ವಾರ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್​​​ ಲಭ್ಯ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?

ಹೀಗಾಗಿ, ನಮಗೆ ಹೊರಗಡೆ ಹೋಗಲು ಬಿಡಿ, ಮಕ್ಕಳಿಗೆ ಉಪಹಾರ ತರುತ್ತೇವೆ ಅಂದರೂ ಬಿಟ್ಟಿಲ್ಲ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಆರೋಪಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು 30 ಜನರು ಬೆಂಗಳೂರಿನಿಂದ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ್ದಾರಂತೆ. ಅದರಲ್ಲಿ ಬಹುತೇಕ ಜನರು ಪ್ರಭಾವಿಗಳಿಂದ ಕಾಲ್ ಮಾಡಿಸಿ, ತಮ್ಮ ತಮ್ಮೂರಿಗೆ ಹೋಗಿದ್ದಾರೆ. ಆದರೆ ಬಿಎಂಟಿಸಿ ಬಸ್ ಕಂಡಕ್ಟರ್ ಕುಟುಂಬ ಹಾಗೂ ನಾಲ್ಕು ಜನ ಬೇರೆ ಗ್ರಾಮದವರನ್ನು ಮಾತ್ರ ಕ್ವಾರಂಟೈನ್ ಕಳುಹಿಸಿದ್ದಾರೆ. ಆದರೆ, ಈ ಕ್ವಾರಂಟೈನ್ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಸಹ ಮಾಡಿಲ್ಲ. ಕುಡಿಯುವ ನೀರು, ಉಪಹಾರ, ಊಟದ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ನ್ಯೂಸ್ 18 ಕನ್ನಡದಲ್ಲಿ ಸುದ್ದಿ ಪ್ರಸಾರವಾದ ನಂತರ ಉಪಹಾರ ನೀಡಿದ್ದಾರೆ.

ಹೀಗೇ ಆದರೆ ನಾವು ಹೇಗೆ ಕ್ವಾರಂಟೈನ್ ಸಮಯ ಕಳೆಯೋದು ಅಂತಿದ್ದಾರೆ ಜನರು. ಚಿಕ್ಕ ಚಿಕ್ಕ ಮಕ್ಕಳು ಸಹ ಹಸಿವಿನಿಂದ ಬಳಲಿವೆ. ಪೋಷಕರು ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಡರಗಿ ತಾಲೂಕಾ ಆಡಳಿತ ಸರಿಯಾಗಿ ವ್ಯವಸ್ಥೆ ಮಾಡದ ಬೇಜವಾಬ್ದಾರಿತನದ ಪ್ರದರ್ಶನ ಮಾಡಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಅವ್ಯವಸ್ಥೆಯ ಆಗರವನ್ನು ಸರಿ ಮಾಡಬೇಕಾಗಿದೆ.
Published by: Sushma Chakre
First published: July 14, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading